ಫ್ಯಾಕ್ಟ್‌ಚೆಕ್: ಕರೀನಾ ಕಪೂರ್ ಪ್ರಧಾನಿ ಮೋದಿಯವರನ್ನು ಅವಮಾನಿಸಿದರೆ?
ಪ್ರಧಾನಿ ಮೋದಿಯನ್ನು ಉದ್ದೇಶಿಸಿ ಕರೀನಾ ಕಪೂರ್ ಮಾಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 72ರ ಹರೆಯದಲ್ಲಿ 18 ಗಂಟೆ ಕೆಲಸ ಮಾಡುತ್ತಾರೆ ಎಂದಾದರೆ ಚಿಕ್ಕ ವಯಸ್ಸಿನಲ್ಲಿ ಯಾಕೆ ಬಿಕ್ಷೆ ಬೇಡುತ್ತಿದ್ದರು ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ಹೇಳಿದ್ದಾರೆ ಎನ್ನುವ ಪೋಸ್ಟ್‌ವೊಂದು ವೈರಲ್ ಆಗಿದೆ. (ಅಮಿತ್ ಶಾ ಈ ಹಿಂದೆ ಮೋದಿ 18 ಕೆಲಸ ಮಾಡುತ್ತಾರೆ ಎಂದು ಹೇಳಿದ್ದರು) ಈ ಹಿನ್ನಲೆಯಲ್ಲಿ AP Congress ನ ಫೇಸ್ ಬುಕ್ ಪೇಜ್‌ನಿಂದ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ಬಾಲಿವುಡ್ ನಟಿ ಕರೀನಾ ಕಪೂರ್ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾಡಿದ್ದಾರೆ ಎನ್ನಲಾದ ಕಮೆಂಟ್‌ಅನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ,ಕರೀನಾ ಕಪೂರ್ ಅಂತಹ ಕಾಮೆಂಟ್‌ಗಳನ್ನು ಮಾಡಿರುವ ಕುರಿತು ಯಾವುದೇ ಸುದ್ದಿ ಲೇಖನಗಳು ಕಂಡುಬಂದಿಲ್ಲ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ, ಕೀವರ್ಡ್‌ಗಳನ್ನು ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಹೊಂದಿರುವ ಹೆಚ್ಚಿನ ಪೋಸ್ಟ್‌ಗಳು ಕಂಡುಬಂದಿವೆ. ಈ ಪೋಸ್ಟ್‌ಗಳಲ್ಲಿ 72ರ ಹರೆಯದಲ್ಲಿ 18 ಗಂಟೆಗಳ ಕಾಲ ದುಡಿದರೆ ನಿಮ್ಮ ಚಿಕ್ಕ ವಯಸ್ಸಿನಲ್ಲಿ ನೀವು ಭಿಕ್ಷೆ ಬೇಡಿದ್ದು ಏಕೆ?” ಎಂಬ ಟ್ವೀಟ್‌ನ ಸ್ಕ್ರೀನ್‌ಶಾಟ್ ಹಿಂದಿಯಲ್ಲಿ ಪತ್ತೆಯಾಗಿದೆ.
ಈ ಹೇಳಿಕೆಯನ್ನು ಬಾಲಿವುಡ್ ನಟಿ ಕರೀನಾ ಕಪೂರ್ ನೀಡಿದ್ದಾರೆಯೇ ಎಂದು ಪರಿಶೀಲಿಸಲು ಕರೀನಾ ಅವರ ಟ್ವಿಟರ್ ಹ್ಯಾಂಡಲ್‌ಅನ್ನು ಸರ್ಚ್ ಮಾಡಿದಾಗ, ವೈರಲ್ ಪೋಸ್ಟ್‌ಅನ್ನು ಟ್ವಿಟರ್ ಹ್ಯಾಂಡಲ್ @Kareena_Kpn1 ಮೂಲಕ ಪೋಸ್ಟ್ ಮಾಡಲಾಗಿದೆ. ಈ Twitter ಹ್ಯಾಂಡಲ್ ಬಯೋದಲ್ಲಿ ‘#FANS_CLUB #FANS_PAGE’ ಎಂದು ಬರೆಯಲಾಗಿದೆ. ಕರೀನಾ ಕಪೂರ್ ಫ್ಯಾನ್ ಪೇಜ್ ಮಾಡಿರುವ ಈ ಟ್ವೀಟ್ ಅನ್ನು ವೈರಲ್ ಪೋಸ್ಟ್ ಮೂಲಕ ಕರೀನಾ ಕಪೂರ್ ಮಾಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಒಟ್ಟಾರೆಯಾಗಿ ಹೇಳುವುದಾರೆ, 72ರ ಹರೆಯದಲ್ಲಿ 18 ಗಂಟೆ ಕೆಲಸ ಮಾಡುತ್ತಾರೆ ಎಂದಾದರೆ ಚಿಕ್ಕ ವಯಸ್ಸಿನಲ್ಲಿ ಯಾಕೆ ಭಿಕ್ಷೆ ಬೇಡುತ್ತಿದ್ದರು ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ಹೇಳಿದ್ದಾರೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ. ಕರೀನಾ ಫ್ಯಾನ್ಸ್‌ಪೇಜ್ ನಿಂದ ಮಾಡಲಾದ ಟ್ವೀಟ್ ಅನ್ನು ಕರೀನಾ ಕಪೂರ್ ಮಾಡಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ‘ಮೋದಿ ನನ್ನ ಬೆಸ್ಟ್ ಫ್ರೆಂಡ್’ ಎಂದು KCR ಹೇಳಿದ್ದು ಯಾವಾಗ ಗೊತ್ತೆ?

