ಗಲ್ಲು ಶಿಕ್ಷೆಗೊಳಗಾದ ನಿರ್ಭಯಾ ಪ್ರಕರಣದ ದೋಷಿಗಳು : ಮಗಳನ್ನು ನೆನೆದ ತಾಯಿ!

2012ರಲ್ಲಿ ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದು ನ್ಯಾಯ ದೊರಕಿದೆ. ನಿರ್ಭಯಾ ಪ್ರಕರಣದ ದೋಷಿಗಳಿಗೆ ಇಂದು ಬೆಳಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಿದೆ.

ನಿರ್ಭಯಾಳಿಗೆ ನ್ಯಾಯ ಸಿಕ್ಕಿದೆ. ನ್ಯಾಯದಾನ ವಿಳಂಬವಾಗಿದೆ. ಆದರೂ ನ್ಯಾಯ ಸಿಕ್ಕಿದೆ. ನನ್ನ ಮಗಳ ಬಗ್ಗೆ ಹೆಮ್ಮೆ ಇದೆ. ಇಂದು ದೇಶಕ್ಕೆ ನ್ಯಾಯ ಸಿಕ್ಕಿದೆ. ಈ ದಿನವನ್ನು ದೇಶದ ಹೆಣ್ಣುಮಕ್ಕಳಿಗೆ ಆರ್ಪಿಸುವುದಾಗಿ ನಿರ್ಭಯಾ ತಾಯಿ ಆಶಾದೇವಿ ಹೇಳಿದರು.

ಹಂತಕರ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ವಜಾಗೊಳ್ಳುತ್ತಿದ್ದ ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಭಯಾ ತಾಯಿ ಆಶಾ ದೇವಿ, ಜೀತೇಂದ್ರ ಮತ್ತು ಸೀಮಾಜೀ ವಕೀಲಿ ವೃತ್ತಿ ಜೊತೆ ತಮ್ಮ ಕೆಲಸ ಮಾಡಿದರು. ನಮ್ಮ ನ್ಯಾಯ ಸಿಗಲಿದೆ ಎಂಬ ಭರವಸೆಯನ್ನು ನೀಡಿದ್ದರು. ಇಂದು ಕೊನೆಗೂ ನಮಗೆ ನ್ಯಾಯ ಸಿಕ್ಕಿದೆ ಎಂದರು.

ನಿರ್ಭಯಾಳನ್ನು ಬದುಕಿಸುತ್ತಿದ್ದರೆ ನನಗೆ ತುಂಬಾ ಖುಷಿಯಾಗುತ್ತಿತ್ತು ಎಂದು ನಿರ್ಭಯಾ ತಾಯಿ ಪರ ವಾದ ಮಾಡಿದ್ದ ವಕೀಲೆ ಸೀಮಾ ಕುಶ್‍ವಾಹಾ ಪ್ರತಿಕ್ರಿಯಿಸಿದ್ದಾರೆ.

ಅಪರಾಧಿಗಳನ್ನು ಗಲ್ಲಿಗೇರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸೀಮಾ, ನಿರ್ಭಯಾಳನ್ನು ಬದುಕಿದ್ದರೆ, ನನಗೆ ಹೆಚ್ಚು ಖುಷಿಯಾಗುತ್ತಿತ್ತು. ಆದರೆ ನಾವು ಆಕೆಯನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ದೇಶದ ಕಾನೂನು ಸುವ್ಯವಸ್ಥೆ ಇದರಲ್ಲಿ ಫೇಲ್ ಆಗಿದೆ. ದೇಶದ ರಾಜಧಾನಿಯಲ್ಲಿ ಈ ಘಟನೆ ನಡೆದಿದೆ. ಆದರೆ ಹಂತಕರನ್ನು ಗಲ್ಲಿಗೇರಿಸುವ ಮೂಲಕ ನಿರ್ಭಯಾಗೆ ನ್ಯಾಯ ಸಿಕ್ಕಿದೆ. ಆ ವಿಷಯದ ಬಗ್ಗೆ ಸಮಾಧಾನ ಇದೆ ಎಂದು ಹೇಳಿದರು.

ಅದು 2012ರ ಡಿಸೆಂಬರ್ 16. ಆ ದಿನ ರಾತ್ರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಚಲಿಸುವ ಬಸ್​ನಲ್ಲಿ ಆರು ಜನ ಅತ್ಯಾಚಾರವೆಸಗಿ, ಆಕೆಯ ಗುಪ್ತಾಂಗಕ್ಕೆ ರಾಡಿನಿಂದ ಚುಚ್ಚಿ, ಬಸ್​ನಿಂದ ಹೊರಗೆ ದಬ್ಬಲಾಗಿತ್ತು. ಆಕೆಯನ್ನು ಬದುಕಿಸಿಕೊಳ್ಳಲು ಮನೆಯವರು ಎಷ್ಟೇ ಪ್ರಯತ್ನ ನಡೆಸಿದರೂ ಜೀವನ್ಮರಣದ ನಡುವೆ ಹೋರಾಟ ನಡೆಸಿ ಆಕೆ ಕೊನೆಯುಸಿರೆಳೆದಳು. ಅದಾಗಿ 7 ವರ್ಷ, 3 ತಿಂಗಳ ನಂತರ ಆಕೆಯನ್ನು ಕೊಂದ ಹಂತಕರು ನೇಣಿಗೇರಿದ್ದಾರೆ. ಆದರೆ, ಇಷ್ಟು ವರ್ಷದ ಸುದೀರ್ಘ ಕಾನೂನು ಹೋರಾಟ ನಡೆಸಿ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಮಾಡಿದ ವಕೀಲೆ ಕೂಡ ಓರ್ವ ಹೆಣ್ಣು ಎಂಬುದು ಬಹಳಷ್ಟು ಸಂತೋಷದ ವಿಷಯ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights