ಫ್ಯಾಕ್ಟ್‌ಚೆಕ್ : ಸೂರ್ಯನಿಂದ ಕಳಚಿ ಬಿತ್ತೆ ಬೃಹತ್ ಗಾತ್ರದ ತುಂಡು? ಇದು ಅಪಾಯದ ಮುನ್ಸೂಚನೆಯೇ?

ಸೌರವ್ಯೂಹದ ಕೇಂದ್ರ ಭಾಗವಾದ ಸೂರ್ಯ ದೈನಂದಿನ ವರ್ತನೆ ಹಾಗೂ ಹವಾಗುಣಗಳ ಬಗ್ಗೆ ಖಗೋಳಶಾಸ್ತ್ರಜ್ಞರು ಹಿಂದಿನಿಂದಲೂ ಕುತೂಹಲ ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ. ಇದೇ ಸಮಯದಲ್ಲಿ ಇದೀಗ ಸೂರ್ಯನಲ್ಲಿ ಸಂಭವಿಸಿದ ಹೊಸ ಬೆಳವಣಿಗೆಗಳ ಬಗ್ಗೆ  ವಿಜ್ಞಾನಿಗಳೇ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇದೀಗ ನಡೆದ ಬೆಳವಣಿಗೆಯಲ್ಲಿ ಸೂರ್ಯನ ಒಂದು ದೊಡ್ಡ ಭಾಗವು ಅದರ ಮೇಲ್ಮೈಯಿಂದ ಕಳಚಿ, ಅದರ ಉತ್ತರ ಧ್ರುವದ ಸುತ್ತ ಸುಂಟರಗಾಳಿಯಂಥ ಸುಳಿಯನ್ನು ಸೃಷ್ಟಿಸಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

https://twitter.com/TomFulop/status/1624192991727587328

ಸೂರ್ಯನ ಒಂದು ಭಾಗ ತುಂಡಾಗಿದ್ದು, ಉತ್ತರ ಧ್ರುವ ಭಾಗದಲ್ಲಿ ಅದು ಸೂರ್ಯನಿಂದ ಬೇರ್ಪಟ್ಟಿದೆ’ ಎಂಬ ಸುದ್ದಿಯನ್ನು ಇತ್ತೀಚೆಗೆ ಕೆಲವು ಪ್ರಮುಖ ಸುದ್ದಿ ಮಾಧ್ಯಮಗಳು ಪ್ರಕಟಿಸಿದ್ದವು. ಈ ಸುದ್ದಿ ಎಲ್ಲಡೆ ಅಚ್ಚರಿಗೆ ಕಾರಣವಾಗಿದ್ದು, ಭಾರಿ ಪ್ರಮಾಣದ ಸೌರಜ್ವಾಲೆಗಳ ಕಾರಣ, ಭೂಮಿಯ ಸಂವಹನ ಉಪಗ್ರಹಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದೂ ವರದಿ ಮಾಡಿದ್ದವು. ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್ ಈ ಚಿತ್ರವನ್ನು ಸೆರೆಹಿಡಿದಿದೆ ಎಂದೂ ಬರೆಯಲಾಗಿತ್ತು.

ಸೂರ್ಯನ ಮೇಲ್ಮೈನಲ್ಲಿ ಸಂಭವಿಸಿದ ಈ ಅಸಾಧಾರಣ ಸಂಗತಿಯನ್ನು ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್ ಸೆರೆ ಹಿಡಿದಿದೆ. ಸದ್ಯ ಈ ವಿಡಿಯೋವನ್ನು ಕಳೆದ ವಾರ ಬಾಹ್ಯಾಕಾಶ ಹವಾಮಾನ ಮುನ್ಸೂಚಕರಾದ ಡಾ ತಮಿತಾ ಸ್ಕೋವ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.  ಹಾಗಿದ್ದರೆ ಈ ಸುದ್ದಿ ಇಜವೇ ಎಂದು ಪರಿಶೀಲಿಸೋಣ.

ನಾಸಾ ಏನು ಹೇಳಿದೆ:

ನಾಸಾದ ಪ್ರಕಾರ, ಉರಿಯುವ ಸೂರ್ಯನ ಮೇಲ್ಮೈಯಿಂದ ಹೊರಕ್ಕೆ ವಿಸ್ತರಿಸುವ ದೊಡ್ಡ ಪ್ರಕಾಶಮಾನವಾದ ಲಕ್ಷಣವಾಗಿದೆ. ಈ ಹಿಂದೆ ಇಂತಹ ಹಲವಾರು ನಿದರ್ಶನಗಳು ಸಂಭವಿಸಿದೆ. ಆದರೆ ಸದ್ಯದ ವಿದ್ಯಾಮಾನವು ವೈಜ್ಞಾನಿಕ ಸಮುದಾಯವನ್ನು ದಿಗ್ಭ್ರಮೆಗೊಳಿಸಿದೆ ಎಂದು ತಿಳಿಸಿದೆ. ಸದ್ಯ ಸೂರ್ಯನಲ್ಲಿ ಸಂಭವಿಸಿದ ಘಟನೆಯಿಂದ ಭೂಮಿಯ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬ ಬಗ್ಗೆ ವಿಸ್ತೃತ ಅಧ್ಯಯನದಲ್ಲಿ ತೊಡಗಿದ್ದಾರೆ.

ಸೂರ್ಯನ ಉತ್ತರದ ಪ್ರಮುಖ ವಸ್ತುವು ಮುಖ್ಯ ತಂತುಗಳಿಂದ ಮುರಿದುಹೋಗಿದೆ. ಸದ್ಯ ಕಳಚಿದ ಭಾಗವು ನಮ್ಮ ನಕ್ಷತ್ರದ ಉತ್ತರ ಧ್ರುವದ ಸುತ್ತಲೂ ಬೃಹತ್ ಧ್ರುವ ಸುಳಿಯಲ್ಲಿ ಪರಿಚಲನೆಗೊಳ್ಳುತ್ತಿದೆ. ಇಲ್ಲಿ 55 ಡಿಗ್ರಿಗಿಂತ ಹೆಚ್ಚಿನ ಸೂರ್ಯನ ವಾತಾವರಣದ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಣಾಮಗಳನ್ನು ಹೇಳಲು ಸಾಧ್ಯವಿಲ್ಲ ಎಂದಿದೆ.

ಫ್ಯಾಕ್ಟ್‌ಚೆಕ್ :

ಹವಾಮಾನ ತಜ್ಞೆ ಡಾ ತಮಿತಾ ಸ್ಕೋವ್ ಎಂಬವರ ಟ್ವೀಟ್ ಆಧರಿಸಿ ಮಾಧ್ಯಮಗಳು ಪ್ರಕಟಿಸಿದ್ದ ಈ ಸುದ್ದಿ ಆಧಾರಹಿತ. ನಾಸಾ ಅಥವಾ ಜೇಮ್ಸ್ ವೆಬ್ ಟೆಲಿಸ್ಕೋಪ್‌ ಜಾಲತಾಣಗಳಲ್ಲಿ ಈ ಕುರಿತ ಯಾವುದೇ ಸುದ್ದಿ ಇಲ್ಲ. ಪಿಟಿಐ, ರಾಯಿಟರ್ಸ್ ಸೇರಿದಂತೆ ಯಾವ ಸುದ್ದಿ ಸಂಸ್ಥೆಯೂ ಈ ಸುದ್ದಿಯನ್ನು ಪ್ರಕಟಿಸಿಲ್ಲ. ತಮಿತಾ ಸ್ಕೊವ್ ಅವರ ಟ್ವೀಟ್ ಪರಿಶೀಲಿಸಿದಾಗ, ಪೆಟ್ರಾನ್ ಎಂಬ ಜಾಲತಾಣದಲ್ಲಿ ಅವರು ನೀಡಿರುವ ಸ್ಪಷ್ಟನೆಯ ಲಿಂಕ್ ಸಿಕ್ಕಿತು. ತಮ್ಮ ಟ್ವೀಟ್ ಅನ್ನು ಸುದ್ದಿಮಾಧ್ಯಮಗಳು ತಿರುಚಿ ಅತಿರಂಜಿತವಾಗಿ ಬರೆದಿವೆ ಎಂದು ಅವರು ಹೇಳಿದ್ದಾರೆ. ಇದೊಂದು ಸಹಜ ಸೌರವಿದ್ಯಮಾನ ಎಂದು ಅವರು ವಿವರಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಡಾ ತಮಿತಾ ಸ್ಕೋವ್ ಅವರ ಟ್ವೀಟ್ ನಲ್ಲಿ ಹಂಚಿಕೊಂಡ ಮಾಹಿತಿಯನ್ನು ಮುಖ್ಯವಾಹಿನಿಗಳು ಪರಿಶೀಲಿಸದೆ ಸೂರ್ಯನ ಒಂದು ದೊಡ್ಡ ಭಾಗವು ಅದರ ಮೇಲ್ಮೈಯಿಂದ ಕಳಚಿ, ಅದರ ಉತ್ತರ ಧ್ರುವದ ಸುತ್ತ ಸುಂಟರಗಾಳಿಯಂಥ ಸುಳಿಯನ್ನು ಸೃಷ್ಟಿಸಿದೆ ಎಂದು ಪ್ರತಿಪಾದಿಸಿ ಲೇಖನ ಪ್ರಕಟಿಸಿದ್ದವು. ಆದರೆ ಇದು ಸುಳ್ಳು ಮತ್ತು ಆಧಾರ ರಹಿತ ಎಂದು ತಮಿತಾ ಸ್ಕೊವ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಸೂರ್ಯನಿಂದ ಬೃಹತ್ ಗಾತ್ರದ ತುಂಡು ಕಳಿಚಿ ಬಿದ್ದಿದೆ ಎಂಬುದು ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕಬಿನಿಯ ಹಿನ್ನೀರಿನಲ್ಲಿ ಈ ಘಟನೆ ನಡೆದಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights