ಫ್ಯಾಕ್ಟ್‌ಚೆಕ್ : ಕೋತಿಯೊಂದು ಸಿಂಹದ ಬೆನ್ನ ಮೇಲೆ ಕೂತು ಸವಾರಿ ಮಾಡಿದೆ ಎಂದು ಎಡಿಟ್ Video ಹಂಚಿಕೆ

ಸಿಂಹ ಮತ್ತು ಕೋತಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಮಂಗವೊಂದು ಸಿಂಹದ ಮೇಲೆ ಕುಳಿತು ಸವಾರಿ ಮಾಡುವುದನ್ನು ಕಾಣಬಹುದು. ಊಹೆಗೂ ನಿಲುಕದ ದೃಶ್ಯವೊಂದು ಕಾಡಿನಲ್ಲಿ ಕಂಡಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:  

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು  ಪರಿಶೀಲಿಸಿದಾಗ, ಪೋಸ್ಟ್ ಮಾಡಿದ ವೀಡಿಯೊವನ್ನು ಎಡಿಟ್ ಮಾಡಲಾಗಿದೆ. ಮೂಲ ವಿಡಿಯೋದಲ್ಲಿ ಕಾಡಿನಲ್ಲಿ ಸಿಂಹಗಳೆರಡು ವಾಕಿಂಗ್ ಮಾಡುವ ದೃಶ್ಯಗಳನ್ನು ಕಾಣಬಹುದು.

ಮೂಲ ವೀಡಿಯೋದಲ್ಲಿ ಸಿಂಹದ ಮೇಲೆ ಕೋತಿ ಕಾಣುವುದುದಿಲ್ಲ. ಸಿಂಹಗಳು ನಡೆದು ಹೋಗುವ ದೃಶ್ಯಕ್ಕೆ ಕೋತಿಯನ್ನು ಎಡಿಟ್ ಮಾಡಿ ಸೇರಿಸಲಾಗಿದೆ.

ಜೀ ಕನ್ನಡ ನ್ಯೂಸ್ ವಾಹಿನಿ ಇದೇ ದೃಶ್ಯವನ್ನು ನೈಜ ಘಟನೆ ಎಂದು ಪ್ರತಿಪಾದಿಸಿ ಸುದ್ದಿಯನ್ನು ಪ್ರಕಟಿಸಿದೆ.

ಈ ವೈರಲ್ ವಿಡಿಯೋದಲ್ಲಿ, ಎರಡು ಸಿಂಹಗಳು ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಆಗ ಅಲ್ಲಿ ಒಂದು ಕೋತಿ ಜಿಗಿದು ಸಿಂಹದ ಬೆನ್ನ ಮೇಲೆ ಕುಳಿತು ಸವಾರಿ ಮಾಡಲು ಆರಂಭಿಸುತ್ತದೆ. ಸಿಂಹವೂ ಏನೂ ಮಾಡದೆ ಶಾಂತವಾಗಿ ಮುಂದೆ ಸಾಗಿತು. ಇದರಲ್ಲಿ ಕೋತಿ ರಾಜ ಮತ್ತು ಸಿಂಹ ಅವನ ಮುದ್ದಿನ ಪ್ರಾಣಿಯಂತೆ ಕಂಡು ಬಂದಿತು. ಎಂದು ಜೀ ಕನ್ನಡ ಸುದ್ದಿ ವಾಹಿನಿ ಸುದ್ದಿ ಪ್ರಕಟಿಸಿದೆ.

ಆದರೆ ಈ  ವಿಡಿಯೊ ಎಡಿಟ್ ಮಾಡಲಾಗಿದ್ದು, ಮೂಲ ವಿಡಿಯೋದಲ್ಲಿ ಸಿಂಹಗಳು ಕಾಡಿದಲ್ಲಿ ನಡೆದು ಹೋಗುತ್ತಿದ್ದು ಅವರ ಬೆನ್ನ ಮೇಲೆ ಕೋತಿ ಕಾಣುವುದಿಲ್ಲ. ಮಂಗಗಳು ಸಾಕಷ್ಟು ಕಿಡಿಗೇಡಿ ಕೆಲಸಗಳನ್ನು ಮಾಡುವುದನ್ನು ನೋಡಿದ್ದೇವೆ. ಈ ಕುರಿತ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮಂಗಗಳು ಚೇಷ್ಟೆಯ ಪ್ರಾಣಿಗಳು ನಿಜ, ಆದರೆ ಈ ವಿಡಿಯೊದಲ್ಲಿ ಹೇಳುವಂತೆ ಕೋತಿ ಸಿಂಹದ ಮೇಲೆ ಸವಾರಿ ಮಾಡಿಲ್ಲ. ಮೂಲ ವಿಡಿಯೋವನ್ನು ಎಡಿಟ್ ಮಾಡುವ ಮೂಲಕ ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮುಸ್ಲಿಂ ಬಾಯ್ ಫ್ರೆಂಡ್‌ನಿಂದ ನಿಕ್ಕಿ ಯಾದವ್ ಹತ್ಯೆಯಾಗಿದೆ ಎಂದು ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights