ರಾಜಸ್ಥಾನದ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಎರಡು ವಾಹನಗಳ ನಡುವೆ ಡಿಕ್ಕಿ : 4 ಜನರು ಸಾವು..!
ರಾಜಸ್ಥಾನದ ಅಜ್ಮೇರ್ ರಾಷ್ಟ್ರೀಯ ಹೆದ್ದಾರಿ 8 ರಲ್ಲಿ ಎರಡು ವಾಹನಗಳು ಡಿಕ್ಕಿ ಹೊಡೆದ ಪರಿಣಾಮ 4 ಜನರು ಸಾವನ್ನಪ್ಪಿದ್ದಾರೆ.
ರಾಜಸ್ಥಾನದ ಅಜ್ಮೇರ್ ರಾಷ್ಟ್ರೀಯ ಹೆದ್ದಾರಿ 8 ರಲ್ಲಿ ಎರಡು ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಬೆಂಕಿಗಾಹುತಿಯಾಗಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಆದರ್ಶ ನಗರದ ಸಬ್ ಇನ್ಸ್‌ಪೆಕ್ಟರ್ ಕನ್ಹಯ್ಯ ಲಾಲ್ ಹೇಳಿದ್ದಾರೆ.
ಬೆಳಂಬೆಳಿಗ್ಗೆ ಜೈಪುರದಿಂದ ಟ್ರಯಲರ್ ವಾಹನಕ್ಕೆ ಮಾರ್ಬಲ್ ತುಂಬಿದ ಟ್ರಕ್ ಡಿಕ್ಕಿ ಹೊಡೆದಿದೆ ಪರಿಣಾಮ ಭಾರೀ ಪ್ರಮಾಣದ ಬೆಂಕಿ ಆವರಿಸಿ ವಾಹನಗಳು ಸುಟ್ಟು ಕರಕಲಾಗಿವೆ. ವಾಹನ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.