ದೇಶದಲ್ಲಿ ಕೊರೊನಾ ಅಟ್ಟಹಾಸ : 24 ಗಂಟೆಯಲ್ಲಿ 896 ಹೊಸ ಪ್ರಕರಣ – ಮೃತರ ಸಂಖ್ಯೆ 206ಕ್ಕೇರಿಕೆ  

ಕಪ್ಪು ಕಾರ್ಮೋಡದಂತೆ ಕವಿದ ಕೊರೊನಾ ದೇಶದೆಲ್ಲೆಡೆ ತನ್ನ ಬಾಹುವನ್ನು ಚಾಚಿಕೊಳ್ಳುತ್ತಿದೆ. ಕೊರೊನಾಗೆ ದೇಶಾದ್ಯಂತ ಜನ ಅಧಿಕ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಯಾವುದೇ ಕಡಿವಾಣವಿಲ್ಲದೇ ಸೋಂಕು ಮನುಷ್ಯನ ದೇಹ ಹೊಕ್ಕು ತನ್ನ ಅಸ್ಥಿತ್ವ ಸಾಧಿಸುತ್ತಿದ್ದು ದೇಶದಲ್ಲಿ 24 ಗಂಟೆಯಲ್ಲಿ ಸರಿಸುಮಾರು 896 ಹೊಸ ಪ್ರಕರಣಗಳು ದಾಖಲಾಗಿದ್ದು ಆತಂಕವನ್ನು ಹೆಚ್ಚಿಸಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 6,761ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 206ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದ ಸೋಂಕಿತರ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟು ಸಾವಿನ ಪ್ರಕರಣಗಳ ಪೈಕಿ 97 ಸಾವುಗಳು ಮಹರಾಷ್ಟ್ರದಲ್ಲಿನೇ ಸಂಭವಿಸಿವೆ. ಗುಜರಾತ್‌ನಲ್ಲಿ 17, ಮಧ್ಯಪ್ರದೇಶದಲ್ಲಿ 16, ದೆಹಲಿ 13 ಮತ್ತು ಪಂಜಾಬ್‌ನಲ್ಲಿ 11 ಜನ ಮೃತಪಟ್ಟಿದ್ದು ಈ ಎಲ್ಲಾ ರಾಜ್ಯಗಳು ಕ್ರಮವಾಗಿ ನಂತರದ ಸ್ಥಾನ ಪಡೆದಿವೆ. ಇದಲ್ಲದೆ, ದಕ್ಷಿಣ ರಾಜ್ಯಗಳಾದ ತಮಿಳುನಾಡಿನಲ್ಲಿ 8 ಮತ್ತು ತೆಲಂಗಾಣದಲ್ಲಿ 7 ಸಾವುಗಳು ದಾಖಲಾಗಿವೆ. ಆಂಧ್ರಪ್ರದೇಶ ಮತ್ತು ಕರ್ನಾಟಕವು ತಲಾ 6, ಪಶ್ಚಿಮ ಬಂಗಾಳದಲ್ಲಿ 5, ಜಮ್ಮು- ಕಾಶ್ಮೀರ, ಉತ್ತರ ಪ್ರದೇಶಗಳಲ್ಲಿ ತಲಾ 4, ಹರಿಯಾಣ ಮತ್ತು ರಾಜಸ್ಥಾನಗಳು ತಲಾ 3 ಸಾವುಗಳು ದಾಖಲಾಗಿವೆ.

ಇನ್ನೂ ವಿಶ್ವಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 1.6 ಮಿಲಿಯನ್ ದಾಟಿದೆ. ಈಮಹಾಮಾರಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 1 ಲಕ್ಷ ದಾಟಿದೆ. ವಿಶ್ವಾದ್ಯಂತ 16,94,954 ಮಂದಿಗೆ ಕೊರೋನಾ ವೈರಸ್​ ತಗುಲಿದ್ದು, ಅಮೆರಿಯಾದಲ್ಲಿ 18,725 ಜನ, ಇಟಲಿಯಲ್ಲಿ 18,849, ಸ್ಪೇನ್ ನಲ್ಲಿ 16,081, ಪ್ರಾನ್ಸ್ 13,197 ಹಾಗೂ ಇಂಗ್ಲೆಂಡ್ ನಲ್ಲಿ 8,958 ಜನ ಕೊರೊನಾಗೆ ಬಲಿಯಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights