ಫ್ಯಾಕ್ಟ್‌ಚೆಕ್: ‘ಮೋದಿ ನನ್ನ ಬೆಸ್ಟ್‌ ಫ್ರೆಂಡ್‌’ ಎಂದು KCR ಹೇಳಿದ್ದು ಯಾವಾಗ ಗೊತ್ತೆ?

ತೆಲಂಗಾಣ ಸಿಎಂ ಮತ್ತು ಭಾರತ ರಾಷ್ಟ್ರ ಸಮಿತಿ ನಾಯಕ ಕೆ ಚಂದ್ರಶೇಖರ ರಾವ್ (KCR) ಅವರು ಪ್ರಧಾನಿ ಮೋದಿಯನ್ನು ತಮ್ಮ “ಆತ್ಮ ಸ್ನೇಹಿತ” ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿಯಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಅವರ ಮಗಳು ಕೆ ಕವಿತಾ ಅವರನ್ನು ಹೆಸರಿಸಿ ಸಿಬಿಐ ಪ್ರಶ್ನಿಸಿದ ನಂತರ KCR ಅವರು ಹೇಗೆ ಬದಲಾಗಿದ್ದಾರೆ ನೋಡಿ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

30 ಸೆಕೆಂಡುಗಳ ವೀಡಿಯೊದಲ್ಲಿ, KCR ಹೇಳುವುದನ್ನು ಕೇಳಬಹುದು, “ಮೋದಿಯನ್ನು ವಿರೋಧಿಸಲು ನನಗೆ ಕಾರಣವೇ ಇಲ್ಲ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯಾಗಿ, ನನಗೆ ಅವರ ಬಗ್ಗೆ ಗೌರವವಿದೆ. ನಾನು ನಿಮಗೆ ಹೇಳುತ್ತಿರುವ  ಮುಖ್ಯವಾದ ವಿಷಯ ಏನೆಂದರೆ ನಾನು ಮತ್ತು ಅವರು ಆತ್ಮೀಯ ಗೆಳೆಯರು ಮಾತ್ರ, ನಮ್ಮಿಬ್ಬರ ನಡುವೆ ಏನೆಲ್ಲಾ ಸ್ನೇಹವಿದೆ ಎಂಬುದು ಜನರಿಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

“ದೆಹಲಿ ಲಿಕ್ಕರ್ ಎಕ್ಸೈಸ್ ಹಗರಣದಲ್ಲಿ ತಮ್ಮ ಮಗಳ ಹೆಸರು ಕೇಳಿಬಂದ ನಂತರ KCR ಇದ್ದಕ್ಕಿದ್ದಂತೆ ರಾಗ ಬದಲಿಸಿದ್ದಾರೆ ” ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ ನಾಯಕಿ ಪ್ರೀತಿ ಗಾಂಧಿ ತಮ್ಮ ಟ್ವಿಟರ್‌ನಲ್ಲಿ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ತಮ್ಮ ಮಗಳ ಹೆಸರು ಹಗರಣದಲ್ಲಿ ಕೇಳಿಬಂದ ಕೂಡಲೆ ತೆಲಂಗಾಣ ಸಿಎಂ “ಮೋದಿಜಿ ಅವರ ಅಭಿಮಾನಿ ಮತ್ತು ಉತ್ತಮ ಸ್ನೇಹಿತರಾಗಿದ್ದಾರೆ” ಎಂಬ ಹೇಳಿಕೆಯೊಂದಿಗೆ KCR ಅವರು ಮಾತನಾಡಿರುವ ವೈರಲ್ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಯೂಟ್ಯೂಬ್‌ನಲ್ಲಿ “KCR Modi” ಮತ್ತು “best friend” ಎಂಬ ಕೀವರ್ಡ್ ಮೂಲಕ ಸರ್ಚ್ ಮಾಡಿದಾಗ,  ಮಾರ್ಚ್ 4, 2018 ರ ‘”ನಾನು ಮೋದಿಯವರ ಬೆಸ್ಟ್ ಫ್ರೆಂಡ್” ಎಂಬ ಶೀರ್ಷಿಕೆಯ ವೀಡಿಯೊ ಲಭ್ಯವಾಗಿದೆ. ಸಿಎಂ KCR ಅವರು ಪ್ರಧಾನಿಯೊಂದಿಗಿನ ಸಂಬಂಧದ ಕುರಿತು ಮಾತನಾಡಿದ್ದಾರೆ. ವೀಡಿಯೊ ಇತ್ತೀಚಿನದಲ್ಲ. ಇದು ಮಾರ್ಚ್ 3, 2018 ರ ಹಿಂದಿನದು, ಕೆಸಿಆರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಗೌರವಿಸಿದ್ದಾರೆ ಎಂಬ ಆರೋಪದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

2018ರಲ್ಲಿ ತೆಲಂಗಾಣದ ಆದಿಲಾಬಾದ್ ಮತ್ತು ಕರೀಂನಗರದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಷಣ ಮಾಡುವಾಗ ರಾವ್ ಅವರು ಪ್ರಧಾನಿಗೆ ಅಗೌರವ ತೋರಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದರು ಮತ್ತು “ಮೋದಿ ವಿರುದ್ಧ ನನಗೆ ಏನೂ ಇಲ್ಲ” ಎಂದು ಹೇಳಿದರು. ಕೆಸಿಆರ್ ಅವರ ಹೇಳಿಕೆಗಳ ಕುರಿತು ಇದೇ ರೀತಿಯ ವರದಿಯನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್ 3 ಮಾರ್ಚ್ 2018 ರಂದು ಪ್ರಕಟಿಸಿದೆ.

2018 ರಲ್ಲಿ ಪ್ರಕಟವಾದ ಅದೇ ವೀಡಿಯೊ: YouTube ನಲ್ಲಿ, 4 ಮಾರ್ಚ್ 2018 ರಂದು ‘Xplorer India’ ಚಾನಲ್‌ನಲ್ಲಿ ಅದೇ ವೀಡಿಯೊವನ್ನು ಪ್ರಕಟಿಸಿರುವುದನ್ನು ನಾವು ಕಂಡುಕೊಂಡಿದ್ದೇವೆ.

NTV ತೆಲುಗಿನ ದೃಢೀಕೃತ YouTube ಚಾನಲ್‌ನಲ್ಲಿ ನಾವು ಅದೇ ಪತ್ರಿಕಾಗೋಷ್ಠಿಯ ಮತ್ತೊಂದು ವೀಡಿಯೊವನ್ನು ನೋಡಿದ್ದೇವೆ. 2018 ರಿಂದ ಪತ್ರಕರ್ತರಾದ ರಿಷಿಕಾ ಸದಾಂ ಮತ್ತು ಪಾಲ್ ಉಮ್ಮನ್ ಅವರ ಪರಿಶೀಲಿಸಿದ ಖಾತೆಗಳಿಂದ ಹಂಚಿಕೊಂಡ ಟ್ವೀಟ್‌ಗಳು ಲಭ್ಯವಾಗಿದ್ದು, ಟ್ವೀಟ್‌ಗಳು KCR ಅವರ ಹಳೆಯ ಹೇಳಿಕೆಯನ್ನು ದೃಢೀಕರಿಸುತ್ತವೆ.

KCR ಅವರ ಮಗಳು ಕೆ.ಕವಿತಾ ಅವರು “ಮದ್ಯ ಹಗರಣ”ದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ವರದಿಗಳನ್ನು ಸರ್ಚ್ ಮಾಡಿದಾಗ, ಪ್ರಕರಣದಲ್ಲಿ ಕೆಸಿಆರ್ ಅವರ ಮಗಳಿಗೆ ಸಿಬಿಐ ನೋಟಿಸ್ ಜಾರಿ ಮಾಡುವ ಕುರಿತು ಡಿಸೆಂಬರ್ ಆರಂಭದಿಂದ ಹಲವಾರು ವರದಿಗಳನ್ನು ಕಂಡುಕೊಂಡಿದ್ದೇವೆ. ಡಿಸೆಂಬರ್ 2, 2022 ರಂದು ಹಿಂದೂಸ್ತಾನ್ ಟೈಮ್ಸ್‌ನ ಅಂತಹ ಒಂದು ವರದಿಯು ಹೀಗೆ ಹೇಳಿದೆ, “ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (KCR) ಅವರ ಪುತ್ರಿ ಕೆ ಕವಿತಾ ಅವರನ್ನು ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗಲು ಕೇಂದ್ರೀಯ ತನಿಖಾ ದಳ (ಸಿಬಿಐ) ಸಮನ್ಸ್ ನೀಡಿದೆ.

ಒಟ್ಟಾರೆಯಾಗಗಿ ಹೇಳುವುದಾದರೆ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ತಮ್ಮನ್ನು ಪ್ರಧಾನಿ ನರೇಂದ್ರ ಮೋದಿ ಅವರ “ಆಪ್ತ ಸ್ನೇಹಿತ” ಎಂದು ಕರೆದುಕೊಳ್ಳುವ ನಾಲ್ಕು ವರ್ಷಗಳ ಹಳೆಯ ವೀಡಿಯೊವನ್ನು ದೆಹಲಿ ಮದ್ಯ ಹಗರಣದ ಹಿನ್ನೆಲೆಯಲ್ಲಿ ರಾವ್ ಅವರ ಇತ್ತೀಚಿನ ಹೇಳಿಕೆಯಂತೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ದಿ ಕ್ವಿಂಟ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬೋರ್‌ವೆಲ್‌ನಲ್ಲಿ ನೀರಿನ ಬದಲು ಹಾಲು ಬಂದಿತ್ತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights