ಫ್ಯಾಕ್ಟ್‌ಚೆಕ್: ಭಾರತ್ ಜೋಡೋ ಯಾತ್ರೆಯಿಂದ ಉಪಯೋಗವಾಗುತ್ತಿಲ್ಲ, ನಿಲ್ಲಿಸುತ್ತೇನೆ ಎಂದು ರಾಹುಲ್ ಹೇಳಿದ್ದರೆ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಮಾತನಾಡಿರುವ ಒಂಬತ್ತು ಸೆಕೆಂಡ್ ಗಳ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ. BJPಯ ರಾಷ್ಟ್ರೀಯ IT ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ರಾಹುಲ್ ಗಾಂಧಿಯನ್ನು ಅಪಹಾಸ್ಯ ಮಾಡುವ ತುಣುಕನ್ನು ಟ್ವೀಟ್ ಮಾಡಿದ್ದಾರೆ,  “ನಾವು ಸಾಧ್ಯವಾದಷ್ಟು ಕಾಲ ಅದನ್ನು ಮುಂದುವರಿಸುತ್ತೇವೆ, ಅದು ಕೆಲಸ ಮಾಡುವುದನ್ನು ನಿಲ್ಲಿಸಿದಾಗ ನಾವು ಅದನ್ನು ಕೊನೆಗೊಳಿಸುತ್ತೇವೆ. ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಇದೇ ಹೇಳಿಕೆಯೊಂದಿಗೆ ಬಿಜೆಪಿ ದೆಹಲಿ ಕಾರ್ಯದರ್ಶಿ ಕುಲ್ಜೀತ್ ಸಿಂಗ್ ಚಾಹಲ್ ಟ್ವಿಟ್ ಮಾಡಿದ್ದು ‘ಭಾರತ್ ಜೋಡೋ ಯಾತ್ರೆ’ ಕೇವಲ ‘ಟೈಂಪಾಸ್’ ಎಂದು ಹೇಳಿರುವ ರಾಹುಲ್ ಗಾಂಧಿ ಯಾತ್ರೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ. ರಾಷ್ಟ್ರವ್ಯಾಪಿ ರ್ಯಾಲಿಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಿಕೊಂಡು ಟ್ವೀಟ್ ಮಾಡಿದ್ದಾರೆ.

https://twitter.com/kuljeetschahal/status/1607992021305753600?ref_src=twsrc%5Etfw%7Ctwcamp%5Etweetembed%7Ctwterm%5E1607992021305753600%7Ctwgr%5E61a7d541ec96b64788a92c8a2c9353ef042ed14d%7Ctwcon%5Es1_&ref_url=https%3A%2F%2Fwww.altnews.in%2Famit-malviya-and-bjp-leaders-shared-clipped-video-of-rahul-gandhi-to-target-bharat-jodo-yatra-jab-tak-chal-rahi-hai%2F

ಹಾಗಿದ್ದರೆ ಈ ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯಂತೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಕುರಿತು ಮೇಲಿನ ಹೇಳಿಕೆಯನ್ನು ನೀಡಿದ್ದಾರೆಯೇ? ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ವೈರಲ್ ವಿಡಿಯೊಗೆ ಉತ್ತರನೀಡಿರುವ 16 ಸೆಕೆಂಡುಗಳ ವೀಡಿಯೊವೊಂದು ಲಭ್ಯವಾಗಿದೆ.

ಈ ವೀಡಿಯೊದಲ್ಲಿ, ಕ್ಯಾಮರಾ ಹಿಂದೆ ನಿಂತಿರುವ ವ್ಯಕ್ತಿಯೊಬ್ಬರು, “ ಯಾವಾಗಲೂ ಇದೇ ಟಿ-ಶರ್ಟ್ ಇರುತ್ತದೆಯಲ್ಲಾ?” ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ರಾಹುಲ್ ಗಾಂಧಿ “ನಾನು ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಅದನ್ನು ಮುಂದುವರಿಸುತ್ತೇನೆ. ಅದು ಕೆಲಸ ಮಾಡುವುದನ್ನು ನಿಲ್ಲಿಸಿದಾಗ, ಅದು ನಿಲ್ಲುತ್ತದೆ” ಎಂದು ಹೇಳುವುದು ಮೂಲ ವಿಡಿಯೋ ಕ್ಲಿಪ್‌ನಲ್ಲಿ ಲಭ್ಯವಿದೆ.

ನ್ಯೂಸ್ 18 ಇಂಡಿಯಾದ ಅಸೋಸಿಯೇಟ್ ಎಡಿಟರ್ ಅರುಣ್ ಕುಮಾರ್ ಸಿಂಗ್ ಅವರು ಹಂಚಿಕೊಂಡ ಅದೇ ತುಣುಕಿನ ದೀರ್ಘ ಆವೃತ್ತಿಯನ್ನು BOOM ಕಂಡುಹಿಡಿದಿದೆ. ಈ ವೀಡಿಯೋದಲ್ಲಿ, ಕ್ಯಾಮರಾ ಹಿಂದೆ ಒಬ್ಬ ವ್ಯಕ್ತಿ “ಅದು ಟೀ ಶರ್ಟ್‌ನಲ್ಲಿಯೇ ಮುಂದುವರಿಯುತ್ತದೆಯೇ” ಎಂದು ಹೇಳುವುದು ಕೇಳಿಸುತ್ತದೆ.

“ಈ ಟೀ ಶರ್ಟ್ ಕೆಲಸ ಮಾಡುತ್ತಿದೆ” ಎಂದು ಗಾಂಧಿಯವರ ಪ್ರತಿಕ್ರಿಯೆ ಎಂದು ಸಿಂಗ್ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ANI ಸಹ ಇದೇ ರೀತಿಯ ದೃಶ್ಯಗಳನ್ನು ಹಂಚಿಕೊಂಡಿದೆ ಮತ್ತು ಗಾಂಧಿಯವರು ತಮ್ಮ ಟಿ-ಶರ್ಟ್‌ಗೆ ಸಂಬಂಧಿಸಿದ ಪ್ರಶ್ನೆಗೆ ನಿಜವಾಗಿಯೂ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಶೀರ್ಷಿಕೆಯಲ್ಲಿ ದೃಢಪಡಿಸಿದರು.

ANI ವರದಿಗಾರ ಸಿದ್ಧಾರ್ಥ್ ಶರ್ಮಾ ಕೂಡ ಇದೇ ರೀತಿಯ ದೃಶ್ಯಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಸಂಭಾಷಣೆ ರಾಹುಲ್  ಗಾಂಧಿಯವರ ಟೀ ಶರ್ಟ್‌ನ ಬಗ್ಗೆ ಎಂದು ಖಚಿತಪಡಿಸಿದ್ದಾರೆ. ಟೀ ಶರ್ಟ್ ಎಷ್ಟು ದಿನ ಬಾಳಿಕೆ ಬರುತ್ತೆ ಎಂದು ಪತ್ರಕರ್ತರು ಕೇಳಿದಾಗ, ರಾಹುಲ್ ಗಾಂಧಿ ಅದು ಎಲ್ಲಿಯವರೆಗೆ ಕೆಲಸ ಮಾಡುತ್ತದೆಯೊ ಅಲ್ಲಿಯವರೆಗೆ ಎಂಬ ಉತ್ತರವನ್ನು ಉತ್ಸಾಹದಿಂದ ನೀಡಿದರು ಎಂದು ಬರೆದುಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ANI ಮತ್ತು ಸಿಂಗ್ ಹಂಚಿಕೊಂಡ ದೃಶ್ಯಗಳನ್ನು ಪರಿಶೀಲಿಸಿದಾಗ,  ಗಾಂಧಿಯವರು ಪ್ರತಿಕ್ರಿಯೆ ನೀಡಿರುವುದು ಟೀ ಶರ್ಟ್‌ನ ಬಗ್ಗೆಯೇ ಹೊರತು ಬಿಜೆಪಿ ನಾಯಕರ ಹೇಳಿಕೊಂಡಂತೆ ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬೋರ್‌ವೆಲ್‌ನಲ್ಲಿ ನೀರಿನ ಬದಲು ಹಾಲು ಬಂದಿತ್ತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights