ಫ್ಯಾಕ್ಟ್‌ಚೆಕ್: ಸೈಕಲ್‌ಅನ್ನು ಕದಿಯುತ್ತಾರೆ ಎಂದು ಮುಸ್ಲಿಮರು ಹೀಗೆ ನಮಾಜ್ ಮಾಡಿದ್ದು ನಿಜವೇ?

ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವೊಂದು ವೈರಲ್ ಆಗುತ್ತಿದೆ. ಮುಸ್ಲಿಮರು ತಮ್ಮ ಹಿಂದೆ ಸೈಕಲ್ ಹಿಡಿದು ನಮಾಜ್ ಮಾಡುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು. ಪಾಕಿಸ್ತಾನಿ ಮೂಲದ ಕೆನಡಾದ ಬಲಪಂಥೀಯ ಅಂಕಣಕಾರ ತಾರೆಕ್ ಫತಾಹ್ ಅವರು ನಮಾಜ್ ಮಾಡುವಾಗ ಮುಸ್ಲಿಮರು ಬೈಸಿಕಲ್ ಸ್ಟ್ಯಾಂಡ್‌ನಂತೆ ಬಳಸುತ್ತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

“ಹಲಾಲ್ ಬೈಸಿಕಲ್ ಸ್ಟ್ಯಾಂಡ್ ಅಥವಾ ಮುಸ್ಲಿಮರಿಗೆ ಪ್ರಾರ್ಥನೆ ಮಾಡುವಾಗ ಕಳ್ಳತನದ ಭಯವೇ?” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವಾಗ ಈ ರೀತಿ ಸೈಕಲ್‌ಗಳನ್ನು ಹಿಡಿದಿರುವ ಭಂಗಿಯಲ್ಲಿ ನಮಾಜ್‌ ಮಾಡಿದ್ದಾರೆಯೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ಪೋಸ್ಟ್‌ನಲ್ಲಿ ತಾರೆಕ್ ಫತಾಹ್ ಅವರು ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಆಗಸ್ಟ್ 8, 2010 ರಂದು ಅಪ್‌ಲೋಡ್ ಮಾಡಲಾದ 123rf.com ನ ವರದಿಯೊಂದು ಲಭ್ಯವಾಗಿದೆ. ಆಗಸ್ಟ್ 8, 2010 ರಂದು ಮೊರಾಕೊದ ಮರ್ಕೇಶ್‌ನಲ್ಲಿ ಬೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡುತಿದ್ದಾರೆ ಎಂದು ವರದಿಯಾಗಿದೆ. ಮೊರಾಕೊದಲ್ಲಿ ಇಸ್ಲಾಂ ಅತಿದೊಡ್ಡ ಧರ್ಮವಾಗಿದೆ.

ಇತರ ಅನೇಕ ಮಾಧ್ಯಮ ಸಂಸ್ಥೆಗಳು ಈ ಚಿತ್ರವನ್ನು ಅಪ್‌ಲೋಡ್ ಮಾಡಿದ್ದು ಅದನ್ನು ಕೆಳಗೆ ನೀಡಲಾಗಿದೆ ವಿವಿಧ ಸುದ್ದಿ ಮಾಧ್ಯಮಗಳ ಪ್ರಕಾರ, ಮುಸ್ಲಿಮರು ನಮಾಜ್ ಮಾಡುವ ಹಿಂದೆ ಯಾವುದೇ ಬೈಸಿಕಲ್‌ಗಳು ಇಲ್ಲ.

2010 ರಲ್ಲಿ ಕ್ಲಿಕ್ ಮಾಡಲಾದ ಫೋಟೋ ಮೊರಾಕೊದಿಂದ ಬಂದಿದೆ ಎಂದು BOOM ಕಂಡುಹಿಡಿದಿದೆ ಮತ್ತು ಮುಸ್ಲಿಮರನ್ನು ಅಪಹಾಸ್ಯ ಮಾಡಲು ಸೈಕಲ್‌ಗಳ ಚಿತ್ರವನ್ನು  ತಾರೆಕ್ ಫತಾಹ್ ಎಡಿಟ್  ಮಾಡಿ “ಹಲಾಲ್ ಬೈಸಿಕಲ್ ಸ್ಟ್ಯಾಂಡ್ ಅಥವಾ ಇವರಿಗೆ ಪ್ರಾರ್ಥನೆ ಮಾಡುವಾಗ ಕಳ್ಳತನದ ಭಯವಿದೆಯೇ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಫತಾಹ್ ಈ ಹಿಂದೆಯೂ ಇದೇ ರೀತಿ ಭಾರತದ ಮುಸ್ಲಿಂ ಸಮುದಾಯನ್ನು ವ್ಯಂಗ್ಯ ಮಾಡುವ ರೀತಿಯಲ್ಲಿ ಮತ್ತು ಕೋಮು ಹಿನ್ನಲೆಯಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ ಎಂದು ಬೂಮ್ ವರದಿ ಮಾಡಿದೆ. ವೈರಲ್ ಪೋಟೋವನ್ನು ಎರಡು ಬೇರೆ ಬೇರೆ ಫೋಟೊಗಳನ್ನು ಕ್ಲಬ್ ಮಾಡುವ ಮೂಲಕ ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಇದು ನೈಜ ಚಿತ್ರವಲ್ಲ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2010ರಲ್ಲಿ ಮೊರಾಕೊದ ಮರ್ಕೇಶ್‌ನಲ್ಲಿ ಬೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡುತ್ತಿರುವ ಫೋಟೊವನ್ನು 2019ರಲ್ಲಿ ಹಂಚಿಕೊಳ್ಳಲಾದ ಇಟಾಲಿಯನ್ ವೆಬ್‌ಸೈಟ್ ನ ಫ್ಯಾಸಿಯಾಬುಕೊದಲ್ಲಿ ಸಂಪಾದಿತ ಚಿತ್ರವನ್ನು ಸೇರಿಸಿ ಎಡಿಟ್ ಮಾಡಿ, ನಮಾಜ್ ಮಾಡುವಾಗ ಮುಸ್ಲಿಮರಿಗೆ ಸೈಕಲ್ ಕಳ್ಳತನದ ಚಿಂತೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ವಾಸ್ತವವಾಗಿ ಈ ರೀತಿ ಸೈಕಲ್‌ಗಳನ್ನು ಹಿಡಿದು ನಮಾಜ್ ಮಾಡಿರುವ ಯಾವುದೇ ಉಲ್ಲೇಖಗಳಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕರೀನಾ ಕಪೂರ್ ಪ್ರಧಾನಿ ಮೋದಿಯವರನ್ನು ಅವಮಾನಿಸಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights