ಆಳವಾದ ಕಂದಕದಲ್ಲಿ ಸಿಲುಕಿದ ಮೇಕೆ; ದೇಶಿ ಸ್ಟೈಲ್‌ನಲ್ಲಿ ಮೇಕೆಯನ್ನು ಮೇಲೆತ್ತಿದ ಯುವಕರು!

ಆಳವಾದ ಕಂದಕದಲ್ಲಿ ಸಿಕ್ಕಿಕೊಂಡಿದ್ದ ಮೇಕೆ ಮರಿಯನ್ನು ಯುವಕರ ತಂಡವೊಂದು ರಕ್ಷಿಸಿರುವ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಯುವಕರ ಛಲ, ದೃಢತೆ ಮತ್ತು ಟೀಮ್‌ ವರ್ಕ್‌ನಿಂದಾಗಿ ಮೇಕೆ ಬದುಕುಳಿದಿದೆ. ಇದೇ ವಿಡಿಯೋ ಕ್ಲಿಪ್‌ಅನ್ನು ಅಸ್ಸಾಂ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕರು (ಎಡಿಜಿಪಿ) ಹಾರ್ಡಿ ಸಿಂಗ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಜಮೀನಿನಲ್ಲಿ ಆಳವಾದ ಕಂದಕದೊಳಗೆ ಬಿದ್ದ ಮೇಕೆಯನ್ನು ದೇಶಿ ತಂತ್ರ ಬಳಸಿ ರಕ್ಷಿಸಿರುವ ಯುವಕರ ಗುಂಪಿನ ಶ್ರಮದ ದೃಶ್ಯಗಳನ್ನು ಸಿಂಗ್ ಹಂಚಿಕೊಂಡಿದ್ದಾರೆ. “ದೇಸಿ ಸ್ಟೈಲ್ ಪಾರುಗಾಣಿಕಾ! ಛಲ, ದೃಢ ನಿಶ್ಚಯ ಮತ್ತು ಟೀಮ್‌ ವರ್ಕ್‌ನ ಧೈರ್ಯ. ಸಾಹಸದ ಕಣ್ಣುಗಳ ಹಸನ್ಮುಖ. ಕೊನೊಯ ವರೆಗೂ ವಿಡಿಯೋ ನೋಡಿ” ಅವರು ಅದನ್ನು ಹಂಚಿಕೊಂಡರು.

ವಿಡಿಯೋ ನೋಡಿ:

https://twitter.com/HardiSpeaks/status/1276892067206008833?ref_src=twsrc%5Etfw%7Ctwcamp%5Etweetembed%7Ctwterm%5E1276892067206008833%7Ctwgr%5E&ref_url=https%3A%2F%2Fwww.indiatoday.in%2Ftrending-news%2Fstory%2Fold-video-of-man-getting-inside-ditch-to-help-goat-goes-viral-desi-rescue-mission-amazes-twitter-1694749-2020-06-28

ಯುವಕರ ಸಾಹಸದ ಒಂದು ನಿಮಿಷದ ವಿಡಿಯೋದಲ್ಲಿ, ಒಂದು ಜಮೀನಿನಲ್ಲಿದ್ದ ಆಳವಾದ ಕಂದಕದೊಳಗೆ ಬಿದ್ದಿರುವ ಮೇಕೆ ಮರಿಯನ್ನು ಮೇಲೆತ್ತಲು ಯುವಕರ ಗುಂಪು ನಿರ್ಧರಿಸಿದ್ದು, ಗುಂಪಿನ ಒಬ್ಬ ವ್ಯಕ್ತಿ, ಅದರೊಳಗೆ ಬಿದ್ದ ಪ್ರಾಣಿಯನ್ನು ರಕ್ಷಿಸಲು ಕಂದಕದೊಳಗೆ ಹೋಗಲು ನಿರ್ಧರಿಸುತ್ತಾನೆ. ಮನುಷ್ಯನು ರಂಧ್ರದ ಒಳಗೆ ನೋಡಲು ನೆಲದ ಮೇಲೆ ಮಲಗುತ್ತಾನೆ. ಇತರ ಪುರುಷರು ಅವನ ಕಾಲುಗಳನ್ನು ಹಿಡಿದು ಅವನು ಕಂದಕದೊಳಗೆ ಹೋಗಲು ಸಹಾಯ ಮಾಡುತ್ತಾರೆ. ಅವನ ದೇಹದ ಅರ್ಧದಷ್ಟು ಭಾಗ ಕಂದಕದೊಳಗೆ ಹೋಗುವವರೆಗೂ ಆತ ಕೆಳಗಿಳಿಯುತ್ತಾನೆ.

ನಂತರ, ಕೆಲವು ಸೆಕೆಂಡುಗಳ ನಂತರ ಅವನನ್ನು ಮೇಲೆತ್ತಲು ಪ್ರಾರಂಭಿಸುತ್ತಾರೆ. ಕಂದಕದೊಳಗೆ ಇಳಿದಿದ್ದ ವ್ಯಕ್ತಿ ತನ್ನ ಕೈಯಲ್ಲಿ ಮೇಕೆ ಹೊತ್ತುಕೊಂಡು ಕಂದಕದಿಂದ ಹೊರಬರುತ್ತಾನೆ. ಅವನು ಹೊರಬಂದ ನಂತರ ಹುಡುಗರ ಗುಂಪು ಆ ಮೇಕೆಯನ್ನು ಮೇಕೆಗಳ ಗುಂಪಿಗೆ ಕಳಿಸುತ್ತಾರೆ.

ಈ ವಿಡಿಯೋ ವೈರಲ್‌ ಆಗಿದ್ದು, ಜಾಲತಾಣಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights