ಫ್ಯಾಕ್ಟ್‌ಚೆಕ್: 2023 ಹೊಸ ವರ್ಷದಿಂದ ಬ್ಯಾಂಕ್ ಸೇವಾ ಶುಲ್ಕದಲ್ಲಿ ಮತ್ತೆ ಹೆಚ್ಚಳವಾಗುವುದೇ?

ಹೊಸ ವರ್ಷಕ್ಕೆ ಕೆಲವು ಕಂಪನಿಗಳು ಗ್ರಾಹಕರಿಗೆ ವಿಶೇಷ ಆಫರ್‌ಗಳು, ವಿಶೇಷ ರಿಯಾಯ್ತಿಗಳನ್ನು ನೀಡುವುದುಂಟು ಆದರೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದು ವೈರಲ್ ಆಗುತ್ತಿದ್ದು ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯ ಪ್ರಕಾರ, ನ್ಯೂ ಇಯರ್ ಸಂಭ್ರಮದಲ್ಲಿರುವ ಜನರಿಗೆ ಬ್ಯಾಂಕ್‌ಗಳು ಶಾಕ್ ನೀಡಲು ಸಜ್ಜಾಗಿವೆ ಎಂಬ ವಿಡಿಯೊ ಕ್ಲಿಪ್‌ಅನ್ನು ಸಾಮಾಜಿಕ ಮಾಧ್ಯಮದ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.

ಹೊಸ ವರ್ಷದಿಂದ ಬ್ಯಾಂಕ್‌ಗಳಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆ ಮತ್ತು ಚೆಕ್ ಲೀಫ್‌ಗಳಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಿದ್ದು ಇದೇ ಜನವರಿ 20ರಿಂದ ಜಾರಿಗೆ ಬರಲಿದೆ ಎಂದು ಸುದ್ದಿ ಮಾಧ್ಯಮವೊಂದರ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ. ಹೊಸ ಬ್ಯಾಂಕಿಂಗ್ ನಿಯಮಗಳು 20 ಜನವರಿ 2023 ರಿಂದ ಜಾರಿಗೆ ಬರಲಿವೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು Zee ಬ್ಯುಸಿನೆಸ್‌ನ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ. ವಿವಿಧ ವಹಿವಾಟುಗಳ ಮೇಲೆ ಬ್ಯಾಂಕ್‌ಗಳು ವಿಧಿಸುವ  ಶುಲ್ಕಗಳನ್ನು ವೀಡಿಯೊದಲ್ಲಿ ಆಂಕರ್ ವಿವರಿಸುವುದನ್ನು ಕೇಳಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೊವನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, 5 ಜನವರಿ 2018 ರಂದು Zee ಬ್ಯುಸಿನೆಸ್‌ನ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾದ ವೀಡಿಯೊದ ದೀರ್ಘ ಆವೃತ್ತಿ ಲಭ್ಯವಾಗಿದೆ. ವಿಡಿಯೊದ ವಿವರಣೆಯ ಪ್ರಕಾರ ಪ್ರಕಾರ, 20 ಜನವರಿ 2018 ರಿಂದ ಬ್ಯಾಂಕಿಂಗ್ ದುಬಾರಿಯಾಗಿದೆ. ಅಂದರೆ 2018ರ ಹಳೆಯ ವಿಡಿಯೋವನ್ನು 2023ಕ್ಕೆ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ.

ಬ್ಯಾಂಕ್‌ಗಳು ಹೆಚ್ಚುವರಿ ಶುಲ್ಕ ಹೇರುವ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ವಿಡಿಯೊ ಹಳೆಯದು ಎಂದು ‘ದಿ ಕ್ವಿಂಟ್’ ಜಾಲತಾಣ ವರದಿ ಮಾಡಿದೆ. ಈ ವಿಡಿಯೊ ತುಣುಕಿನ ಪೂರ್ಣ ಭಾಗವನ್ನು 2018ರಲ್ಲಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ. ವಿಡಿಯೊದಲ್ಲಿ ವರದಿಯಾಗಿರುವಂತೆ, ಜನವರಿ 20ರಿಂದ ಉಚಿತ ಸೇವೆಗಳನ್ನು ಸ್ಥಗಿತಗೊಳಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಅಂದಿನ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ಜನವರಿ 10, 2018ರಂದು ಟ್ವೀಟ್ ಮಾಡಿದ್ದರು.

Zee ಬ್ಯುಸಿನೆಸ್‌ನ ವೈರಲ್ ವೀಡಿಯೊ 2018 ರದ್ದು, ವೈರಲ್ ವಿಡಿಯೊ ಹಳೆಯದ್ದು ಎಂಬುದು ಸ್ಪಷ್ಟವಾಗಿದೆ. ಅಲ್ಲದೆ, ಬ್ಯಾಂಕ್ ನಿಯಮಗಳಲ್ಲಿನ ಬದಲಾವಣೆಗಳ ಬಗೆಗಿನ ವದಂತಿಗಳು 2018 ರಿಂದಲೂ ಹರಿದಾಡುತ್ತಿವೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ. ಆದರೂ ಬೇರೆ ಬೇರೆ ಸಂದರ್ಭದಲ್ಲಿ ಬ್ಯಾಂಕುಗಳು ತಮ್ಮ ಸೇವಾ ಶುಲ್ಕವನ್ನು ಹೆಚ್ಚಳ ಮಾಡಿವೆ ಎಂಬುದು ಗಮನಾರ್ಹ.

ಕೃಪೆ: ನ್ಯೂಸ್ ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಸೈಕಲ್‌ಅನ್ನು ಕದಿಯುತ್ತಾರೆ ಎಂದು ಮುಸ್ಲಿಮರು ಹೀಗೆ ನಮಾಜ್ ಮಾಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights