ಗುಜರಾತ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸುತ್ತಿರುವಾಗಲೇ ರೈತ ನಾಯಕ ಯುದ್ಧವೀರ್‌ ಸಿಂಗ್‌ ಬಂಧನ!

ದೆಹಲಿ ಗಡಿಯಲ್ಲಿ ರೈತರ ಹೋರಾಟ ಆಂರಭವಾಗಿ ಇಂದು (ಶುಕ್ರವಾರ) ನಾಲ್ಕನೇ ತಿಂಗಳಿಗೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲಡೆ ರೈತ ಮಹಾಪಂಚಾಯತ್‌ಗಳು ನಡೆಯುತ್ತಿವೆ. ಈ ಬಗ್ಗೆ ಪತ್ರಿಕಾ ಗೋಷ್ಟಿ ನಡೆಸುತ್ತಿದ್ದ ರೈತ ನಾಯಕ ಯುದ್ದವೀರ್ ಸಿಂಗ್‌ ಅವರನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದಾರೆ.

ಗುಜರಾತ್‌ನ ರಾಜಧಾನಿ ಅಹಮದಾಬಾದ್‌ನಲ್ಲಿ  ಭಾರತೀಯ ಕಿಸಾನ್ ಯೂನಿಯನ್(ಬಿಕೆಯು)ಪ್ರಧಾನ ಕಾರ್ಯದರ್ಶಿ ಯುದ್ದವೀರ್‌ ಸಿಂಗ್‌ ಅವರು ಪತ್ರಿಕಾ ಗೋಷ್ಟಿ ಆಯೋಜಿಸಿದ್ದರು. ಪತ್ರಿಕಾ ಗೋಷ್ಟಿ ನಡೆಯುತ್ತಿದ್ದ ವೇಳೆಯೇ ಮಧ್ಯ ಪ್ರವೇಶಿಸಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಯುದ್ದವೀರ್‌ ಸಿಂಗ್‌ ಅವರು ಮಾತ್ರವಲ್ಲದೆ, ಜೆ.ಕೆ.ಪಟೇಲ್, ಗಜೇಂದ್ರ ಸಿಂಗ್ ಹಾಗೂ ರಂಜಿತ್ ಸಿಂಗ್ ರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಗುಜರಾತ್‌ನಲ್ಲಿ ಎಪ್ರಿಲ್ 4 ಹಾಗೂ 5ರಂದು ಬೃಹತ್‌ ಮಹಾಮಪಂಚಾಯತ್‌ಗಳನ್ನು ರೈತ ಸಂಘಟನೆಗಳು ಆಯೋಜಿಸಿವೆ. ಹೀಗಾಗಿ ಮಹಾಪಂಚಾಯತ್‌ನ ಪೂರ್ವಭಾವಿಯಾಗಿ ರೈತ ನಾಯಕರು ಸುದ್ದಿಗೋಷ್ಟಿ ಆಯೋಜಿಸಿದ್ದರು. ಈ ವೇಳೆ ಅವರನ್ನು ಬಂಧಿಸಲಾಗಿದ್ದು, ಅಹಮದಾಬಾದ್ ನ ಶಾಹಿಬಾಗ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕರು ತಿಳಿಸಿದ್ದಾರೆ.

ರೈತ ಹೋರಾಟ ನಾಲ್ಕನೇ ತಿಂಗಳಿಗೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಇಂದು ಭಾರತ್‌ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್‌ಗೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ. ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದ್ದು, ಮಧ್ಯಾಹ್ನದವರೆಗೂ ಆಂಧ್ರ ಪ್ರದೇಶ ಸಂಪೂರ್ಣ ಸ್ಥಬ್ದವಾಗಿತ್ತು.

ಇದನ್ನೂ ಓದಿ: ಅಧಿವೇಶನದಲ್ಲಿ ಅಂಗೀಕಾರಗೊಂಡ ಮಸೂದೆಗಳನ್ನು ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ: ಕಾಂಗ್ರೆಸ್‌

Spread the love

Leave a Reply

Your email address will not be published. Required fields are marked *