ಭೀಕರ ಬ್ಲಾಕ್‌ ಫಂಗಸ್‌ಗೆ 7000 ಕೊರೊನಾ ಸೋಂಕಿತರು ಬಲಿ: ಏಮ್ಸ್‌ ನಿರ್ದೇಶಕ

ಕೊರೊನಾ ಎರಡನೇ ಅಲೆ ಇಡೀ ದೇಶವಂತೆ ಬೆಚ್ಚಿಬೀಳಿಸಿದೆ. ಈ ನಡುವೆ ಬ್ಲಾಕ್‌ ಫಂಗಸ್‌ನ ಭೀತಿಯೂ ಎದುರಾಗಿದ್ದು, ಈ ಬ್ಲಾಕ್‌ ಫಂಗಸ್‌ಗೆ ಇದೂವರೆಗೂ 7000 ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ ಎಂದು ದೆಹಲಿಯ ಏಮ್ಸ್‌ ಆಸ್ಪತ್ರೆಯ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ತಿಳಿಸಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ದೇಶದಲ್ಲಿ ಸಧ್ಯದ ಮಟ್ಟಿಗೆ ಸುಮಾರು 8,848 ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಇವೆ. ಈ ಪೈಕಿ ಗುಜರಾತ್‌ನಲ್ಲಿ ಗರಿಷ್ಠ ಸಂಖ್ಯೆಯಲ್ಲಿದ್ದ, 2,281 ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 2,000, ಆಂಧ್ರಪ್ರದೇಶದಲ್ಲಿ 910, ಮಧ್ಯಪ್ರದೇಶದಲ್ಲಿ 720, ರಾಜಸ್ಥಾನದಲ್ಲಿ 700, ಕರ್ನಾಟಕದಲ್ಲಿ 500, ಹರಿಯಾಣದಲ್ಲಿ 250, ದೆಹಲಿಯಲ್ಲಿ 197, ಪಂಜಾಬ್ ನಲ್ಲಿ 95, ಛತ್ತೀಸ್ ಘಡದಲ್ಲಿ 87, ಬಿಹಾರದಲ್ಲಿ 56, ತಮಿಳುನಾಡಿನಲ್ಲಿ 40, ಕೇರಳದಲ್ಲಿ 36, ಜಾರ್ಖಂಡ್ ನಲ್ಲಿ 27, ಒಡಿಶಾದಲ್ಲಿ 15, ಗೋವಾದಲ್ಲಿ 12 ಮತ್ತು ಚಂಡೀಗಡ 8 ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಪತ್ತೆಯಾಗಿರುವುದುದಾಗಿ ಇಂಡೋ-ಏಷ್ಯನ್ ನ್ಯೂಸ್ ಸರ್ವಿಸ್ ಹೇಳಿದೆ.

ದೇಶದಲ್ಲಿ ಕನಿಷ್ಠ 219 ಮಂದಿ ಈವರೆಗೆ ಕಪ್ಪು ಶಿಲೀಂಧ್ರ ಅಥವಾ ಬ್ಲ್ಯಾಕ್ ಫಂಗಸ್ ನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಆದರೇ, ಕಪ್ಪು ಶಿಲೀಂಧ್ರದಿಂದ ಸಾವನ್ನಪ್ಪಿದವರ ಬಗ್ಗೆ ಇನ್ನೂ ಅಧಿಕೃತ ಅಂಕಿ ಅಂಶಗಳಿಲ್ಲ. ಈ ನಡುವೆ ಏಮ್ಸ್‌ ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ ಅವರು 7,000 ಕೊರೊನಾ ಸೋಂಕಿತರು ಇದಕ್ಕೆ ಬಲಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕೆ ಕಪಾಳಮೋಕ್ಷ: ಜಿಲ್ಲಾಧಿಕಾರಿ ಅಮಾನತು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights