ಪಾದರಾಯನಪುರಲ್ಲಿ ಪುಂಡರ ಗಲಾಟೆ : “ಬುದ್ಧಿ ಹೇಳೋ ಕಾಲ ಮುಗಿತು” – ಸಿಟಿ ರವಿ ಗರಂ

ಕೊರೊನಾ ಹರಡದಿರಲು ಇಡೀ ರಾಜ್ಯವೇ ಲಾಕ್ ಡೌನ್ ಮಾಡಲಾಗಿದೆ. ಆದರೆ ಪಾದರಾಯನಪುರಲ್ಲಿ ವಾರಿಯರ್ಸ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ.

ಹೌದು… ನಿನ್ನೆ ರಾತ್ರಿ ಇಂತಹ ಘಟನೆ ನಡೆದಿದೆ. ಚೆಕ್‍ಪೋಸ್ಟ್ ಒಡೆದು. ದೊಣ್ಣೆ, ಕಲ್ಲು ಹಿಡಿದು ಗಲಾಟೆ ಮಾಡಿದ್ದಾರೆ. ಪಾದರಾಯನಪುರದ 58 ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಹೋದ ಸಿಬ್ಬಂದಿ ಹೋಗಿದ್ದರು. ಇಂದು ರಾತ್ರಿಯಾಗುತ್ತಿದ್ದಂತೆ ಪಾದರಾಯನಪುರದ ಕೆಲ ಪುಂಡರು ರೌಡಿಗಳ ರೀತಿಯಲ್ಲಿ ವರ್ತಿಸಿದ್ದಾರೆ.

ಸಾಲದಕ್ಕೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಟೆಂಟ್ ಗಳನ್ನು ಧ್ವಂಶಗೊಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿರೋದನ್ನ ಗಮನಿಸಿದ ಪುಡಿ ರೌಡಿಗಳು ದಾಂಧಲೆಯನ್ನು ನಡೆಸಿದ್ದಾರೆ. ಏಕಾಏಕಿ ವಾಹನಗಳ ಸಮೇತ ಗುಂಪು ಕಟ್ಟಿಕೊಂಡು ಬಂದ ಜನರನ್ನ ನೋಡಿದ ಪೊಲೀಸರು ಒಂದು ಹೆಜ್ಜೆಯನ್ನು ಹಿಂದೆ ಇಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವ ಸಿ.ಟಿ ರವಿ “ಪಾದರಾಯನಪುರದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ನೆಲೆದ ಕಾನೂನಿಗೆ ಬೆಲೆ ಕೊಡಲಿಲ್ಲ ಎಂದರೆ, ಅವರಿಗೆ ಕಾನೂನಿ ಬಗ್ಗೆ ತಿಳಿಸಬೇಕು. ಇಲ್ಲವಾದರೆ ನೆಲದಿಂದ ಹೊರಗಡೆ ಹಾಕಬೇಕು ಎಂದು ಕಿಡಿ ಕಾರಿದ್ದಾರೆ.ತಿಳಿಸಿ ಬುದ್ಧಿ ಹೇಳುವ ಕಾಲ ಸದ್ಯ ಹೋಗಿದೆ. ಇನ್ನೇನಿದ್ದರೆ ಒದ್ದು  ಬುದ್ಧಿ ಹೇಳುವುದು ಅಷ್ಟೇ ಉಳಿದೆ” ಎಂದಿದ್ದಾರೆ.

ಈ ಕುರಿತು ಮಾತನಾಡಿದ ಸ್ಥಳೀಯ ಕಾರ್ಪೋರೇಟರ್ ಇಮ್ರಾನ್ ಪಾಶಾ, ಕೆಲ ಯುವಕರು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂದು ಭಾನುವಾರ ಆಗಿದ್ದರಿಂದ ಪೊಲೀಸರು ಸಹ ಕಡಿಮೆ ಸಂಖ್ಯೆಯಲ್ಲಿದ್ದರು. ಈ ರೀತಿ ಘಟನೆ ನಡೆದಿದ್ದು, ಇದೇ ಮೊದಲು ಪಾದರಾಯನಪುರದ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಇಲ್ಲ. ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹಾರಿಕೆಯ ಉತ್ತರವನ್ನು ನೀಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights