ವಿಜಯ್ ದೇವೇರಕೊಂಡ ಉಗ್ರವಾಗಿ ಕಾಣಿಸುವ ‘ಲೈಗರ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ..!
ದಕ್ಷಿಣ ಭಾರತದ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವೇರಕೊಂಡ ಮುಂಬರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸೋಮವಾರ ಶೀರ್ಷಿಕೆಯೊಂದಿಗೆ ಅನಾವರಣಗೊಂಡಿದೆ. ಪುರಿ ಜಗನ್ನಾಥ್ ನಿರ್ದೇಶನದ ‘ಲೈಗರ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ರನ್ನು ‘ಸಾಲಾ ಕ್ರಾಸ್‌ಬ್ರೀಡ್’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಪೋಸ್ಟರ್‌ನಲ್ಲಿ ದೇವರಾಕೊಂಡ ಅರ್ಧ-ಸಿಂಹ ಮತ್ತು ಅರ್ಧ-ಹುಲಿ ಚಿತ್ರವಿದೆ.
ಹೆಣ್ಣು ಸಿಂಹ ಮತ್ತು ಗಂಡು ಹುಲಿಯ ಕ್ರಾಸ್ ಬ್ರೀಡ್‌ನಿಂದ ಜನಿಸಿದ ಪ್ರಾಣಿಗೆ ‘ಲೈಗರ್’ ಎನ್ನುತ್ತಾರೆ. ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಇದಾಗಿರಲಿದ್ದು, ವಿಜಯ್ ದೇವರಕೊಂಡ ಹಿಂದೆಂದೂ ಕಾಣಿಸದ ರೀತಿಯಲ್ಲಿ ಬಾಕ್ಸರ್ ಆಗಿ ಇಲ್ಲಿ ಮಿಂಚಲಿದ್ದಾರೆ. ‘ಲೈಗರ್’ ಚಿತ್ರಕ್ಕೆ ‘ಸಾಲಾ ಕ್ರಾಸ್ ಬ್ರೀಡ್’ ಎಂಬ ಟ್ಯಾಗ್‌ಲೈನ್ ಇದೆ. ಈ ಮೂಲಕ ವಿಜಯ್ ದೇವರಕೊಂಡ ಹುಲಿ-ಸಿಂಹದ ಎರಡೂ ಅವತಾರವನ್ನು ಎತ್ತಿದ್ದಾರೆ. ಬಾಲಿವುಡ್‌ನ ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ ಜಂಟಿಯಾಗಿ ಈ ಸಿನಿಮಾಕ್ಕೆ ಹಣ ಹಾಕಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ಪಾಲುದಾರರಾಗಿದ್ದಾರೆ ಪುರಿ ಜಗನ್ನಾಥ್.
ವಿಜಯ್ ದೇವೇರಕೊಂಡ ‘ಲೈಗರ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ತಮ್ಮ ಟ್ವಿಟ್ಟರ್ ಪುಟದಲ್ಲಿ ಹಂಚಿಕೊಂಡಿದ್ದಾರೆ.
Humbly announcing our arrival Pan India!
Nation wide madness Guaranteed.
Produced by @KaranJohar @DharmaMovies @Charmmeofficial @PuriConnects
A @purijagan Film!#LIGER#SaalaCrossBreed pic.twitter.com/GWrLKuLrJu
— Vijay Deverakonda (@TheDeverakonda) January 18, 2021
‘ಲೈಗರ್’ ಅನ್ನು ಏಕಕಾಲದಲ್ಲಿ ತೆಲುಗು ಮತ್ತು ಹಿಂದಿಯಲ್ಲಿ ಚಿತ್ರೀಕರಿಸಲಾಗುತ್ತಿದ್ದು ಬಾಲಿವುಡ್‌ನಲ್ಲೂ ದೇವರಕೊಂಡಾ ಬಿರುಗಾಳಿ ಎಬ್ಬಿಸಲಿದ್ದಾರೆ. ಅನನ್ಯ ಪಾಂಡೆ ಮಹಿಳಾ ನಾಯಕಿಯಾಗಿ ನಟಿಸಲಿದ್ದು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಸಹ-ನಿರ್ಮಾಣ ಮಾಡಲಿದೆ. “ಅಸಾಧಾರಣ ನುರಿತ ಪುರಿ ಜಗನ್ನಾಥ್ ನಿರ್ದೇಶಿಸಿದ ಈ ಸಿನಮಾ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಎಂಬ 5 ಭಾಷೆಗಳಲ್ಲಿ ಜಗತ್ತಿಗೆ ಪರಿಚಯಿಸುವುದನ್ನು ನಾವು ಕಾಯುತ್ತಿದ್ದೇವೆ” ಎಂದು ಕರಣ್ ಸೋಮವಾರ ಟ್ವೀಟ್ ಮಾಡಿದ್ದಾರೆ.
Presenting LIGER, starring the ruler of big screens & hearts – Vijay Deverakonda & the fiery Ananya Panday. Directed by the exceptionally skilled Puri Jagannadh, we can't wait to let the world witness this story in 5 languages – Hindi, Telugu, Tamil, Kannada & Malayalam. #Liger pic.twitter.com/6hOBAB2wgJ
— Karan Johar (@karanjohar) January 18, 2021

