ಫ್ಯಾಕ್ಟ್‌ಚೆಕ್ : RSS ಅನ್ನು ಬೆಂಬಲಿಸಿದಕ್ಕೆ ಹಿಂದೂ ಮಹಿಳೆಯನ್ನು ಮುಸ್ಲಿಮರು ಗುಂಡಿಕ್ಕಿ ಕೊಂದದ್ದು ನಿಜವೇ? ಈ ಸ್ಟೋರಿ ಓದಿ

ಕೇರಳದಲ್ಲಿ ಮಹಿಳೆಯೊಬ್ಬರು ಕಾರಿನಿಂದ ಇಳಿಯುತ್ತಿದಂತೆ ಮುಸ್ಲಿಂ ಜಿಹಾದಿಗಳು ಸಾರ್ವಜನಿಕವಾಗಿ ಹತ್ಯೆ ಮಾಡಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. “ಕೇರಳದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಆರ.ಎಸ್.ಎಸ್.ಯುವತಿಯನ್ನ ಕಾರನ್ನ ಅಡ್ಡಗಟ್ಟಿ ಕಾರಿನಿಂದ ಹೊರಗೆಳೆದು ಬಜಾರ್ ಮಧ್ಯೆ ಪಿಸ್ತೂಲಿನಿಂದ ಗುಂಡು ಹಾರಿಸಿ ಹತ್ಯೆಮಾಡುತ್ತಿರುವುದು” ಎಂಬ ಹೇಳಿಕೆಯೊಂದಿಗೆ ವಾಟ್ಸಾಪ್ ಮತ್ತು ಟ್ವಿಟರ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಮಧು ಪೂರ್ಣಿಮ ಕೀಶ್ವರ್ ಎಂಬುವವರು ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಇದನ್ನು ಟ್ವೀಟ್ ಮಾಡಿದ್ದು, ಕೇರಳದಲ್ಲಿ ಆರ್‌ಎಸ್‌ಎಸ್ ಬೆಂಬಲಿಗ ಮಹಿಳೆಯನ್ನು ಕಾರಿನಿಂದ ಹೊರಗೆಳೆದು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹಂತಕ ಮುಸ್ಲಿಮರು, ಮಹಿಳೆಯನ್ನು ಹತ್ಯೆ ಮಾಡಿದ ನಂತರ, ಆರ್‌ಎಸ್‌ಎಸ್ ಅನ್ನು ಬೆಂಬಲಿಸಬೇಡಿ ಒಂದು ವೇಳೆ ಬೆಂಬಲಿಸಿದರೆ ಅವರಿಗೂ ಇದೇ ಗತಿ, ಆರ್‌ಎಸ್‌ಎಸ್‌ ಅನ್ನು ಬೆಂಬಲಿಸುವರು ಇದನ್ನು ಎದುರಿಸಲು ಸಿದ್ಧರಾಗಿರಿ ಎಂದು ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ 40,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ವೈರಲ್ ಆಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ, 2017 ರಲ್ಲಿಯೂ ಇದೇ ವೀಡಿಯೊವನ್ನು ಇದೇ ಪ್ರತಿಪಾದನೆಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಆ ವೈರಲ್ ಟ್ವೀಟ್‌ಗಳಲ್ಲಿ ಒಂದನ್ನು ಇಲ್ಲಿ ನೋಡಬಹುದು

2017ರ ಹಲವು ಸುದ್ದಿ ವರದಿಗಳನ್ನು ಪರಿಶೀಲಿಸಿದಾಗ 2017ರಲ್ಲಿ ಸನಾತನ ಸಂಸ್ಥೆ ಕಾರ್ಯಕರ್ತರಿಂದ ಹತ್ಯೆಯಾದ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ಕೇರಳದಲ್ಲಿ ಬೀದಿ ನಾಟಕ ಪ್ರದರ್ಶನ ನಡೆಸಲಾಗಿದೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

2017 ರ ಹಲವು ವರದಿಗಳ ಪ್ರಕಾರ ಈ ನಾಟಕವನ್ನು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಪ್ರದರ್ಶಿಸಿದೆ ಎಂದು ಉಲ್ಲೇಖಿಸಿದೆ. ಎಲ್ಲಾ ವರದಿಗಳು ಸ್ಥಳೀಯ ಪತ್ರಿಕೆಯಾದ ಮಾತೃಭೂಮಿಯನ್ನು ಮೂಲವಾಗಿ ಉಲ್ಲೇಖಿಸಿವೆ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.

ಸೆಪ್ಟೆಂಬರ್ 5, 2017 ರಂದು ಪತ್ರಕರ್ತೆ ಗೌರಿ ಲಂಕೇಶ್‌ನ್ನು ಬೆಂಗಳೂರಿನಲ್ಲಿರುವ ಅವರ ನಿವಾಸದ ಹೊರಗೆ ಹತ್ಯೆ ಮಾಡಲಾಗಿತ್ತು. ಹತ್ಯೆಯನ್ನು ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಇದರ ಭಾಗವಾಗಿ ಕೇರಳದ ಕಾಳಿಕಾವು ಘಟಕದ   ಡಿವೈಎಫ್‌ಐ ಸಂಘಟನೆ ಸೆಪ್ಟೆಂಬರ್ 8, 2017 ರಂದು ಬೀದಿ ನಾಟಕ ಪ್ರದರ್ಶನದ ಮೂಲಕ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿತ್ತು. ನಂತರ ಅದೇ ವಿಡಿಯೋವನ್ನು ತನ್ನ ಫೇಸ್‌ ಪೇಜ್‌ ಮೂಲಕ ಪೋಸ್ಟ್ ಮಾಡಿತ್ತ ಎಂದು ಆಲ್ಟ್ ನ್ಯೂಸ್ ಡಿವೈಎಫ್‌ಐ ಕಾಳಿಕಾವು ಅಧಿಕೃತ ಫೇಸ್‌ಬುಕ್ ಪುಟವನ್ನು ಪರಿಶೀಲಿಸಿದೆ. ಹಾಗಾಗಿ ಇದು 2017ರಲ್ಲಿ ನಡೆದ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಕೇರಳದಲ್ಲಿ ನಡೆದ ಬೀದಿ ನಾಟಕದ ಪ್ರದರ್ಶನ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ 2017 ರ ಸೆಪ್ಟೆಂಬರ್‌ನ ನಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಕಾಳಿಕಾವು ಎಂಬಲ್ಲಿ ಡಿವೈಎಫ್‌ಐ ನಡೆಸಿದ ಬೀದಿ ನಾಟಕ ಪ್ರದರ್ಶನದ ಹಳೆಯ ವಿಡಿಯೋವನ್ನು, RSS ಬೆಂಬಲಿಸುವ ಹಿಂದೂ ಮಹಿಳೆಯನ್ನು ಮುಸ್ಲಿಂ ಪುರುಷರ ಗುಂಪೊಂದು ಗುಂಡು ಹಾರಿಸಿದೆ ಹತ್ಯೆ ಮಾಡಿದೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಯೋಗ ಶಕ್ತಿಯಿಂದ ಹಕ್ಕಿಯಂತೆ ಹಾರಲು ಸಾಧ್ಯವೇ? ಈ ಸ್ಟೋರಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights