Covid 19 : ಸಾವಿರದಾಟಿದ ಸೋಂಕಿತರ ಸಂಖ್ಯೆ, ನೂರು ದಾಟಿದ ಕೊರೋನಾ ಗೆದ್ದವರ ಸಂಖ್ಯೆ..

ಕೊರೋನಾ ವಿರುದ್ಧದ ಸಮರದ ನಟ್ಟ ನಡುವಿನಲ್ಲಿರುವ ಭಾರತದಲ್ಲಿ ಕೊಂಚ ಸಮಾಧಾನದ ಸುದ್ದಿಯೊಂದು ಹೊರಬಮದಿದೆ. ಅದರೆಂದರೆ ಕೊರೋನಾ ಗೆದ್ದವರ ಸಂಖ್ಯೆಯಲ್ಲಿನ ಏರಿಕೆ. ಹೌದು ಸರಕಾರಿ ಅಧಿಕೃತ ದಾಖಲೆಗಳ ಪ್ರಕಾರ ಭಾರತದಲ್ಲಿ ಈಗ ಕೊರೋನಾ ಸೋಂಕಿನೀಮದ ಮುಕ್ತರಾದವರ ಸಂಖ್ಯೆ ಶತಕ ದಾಟಿದೆ.

ಸೋಮವಾರದ ವೇಳೆಗೆ ಕೊರೋನಾ ಬಾಧೆಯಿಮದ ಹೊರಬಂದವರ ಸಂಖ್ಯೆ 102ಕ್ಕೇರಿದೆ ಎಂದು ಸೋಂಕು ಸಂಬಂಧಿತ ಸುದ್ದಿ ಜಾಲ ಮಾಹಿತಿ ನೀಡಿದೆ. ಈ ಮಧ್ಯೆ ದೇಶದಲ್ಲಿ ಸೋಂಕಿತರ ಸಂಖ್ಯೆ ಸಾವಿರ ದಾಟಿದ್ದು ಇದರಿಂದ ಅಸು ನೀಗಿದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ ಎಂದೂ ಮಾಹಿತಿ ನೀಡಲಾಗಿದೆ.

ಕೊರೋನಾದಿಂದ ಅತಿ ಹೆಚ್ಚು ಬಾಧೆ ಅನುಭವಿಸುತ್ತಿರುವ ರಾಜ್ಯಗಳ ಸಾಲಿನಲ್ಲಿ ಮಹಾರಾಷ್ಟ್ರ ಮತ್ತು ಕೇರಳ ಮೊದಲೆರಡು ಸ್ಥಾನಗಳಲ್ಲಿದ್ದರೇ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ.

ರಾಜ್ಯದಲ್ಲಿ ಈವರೆಗೆ 83 ಜನರಲ್ಲಿ ಕೊರೋನಾ ಸೋಂಕು ಒತ್ತೆಯಾಗಿದ್ದು ಆ ಪೈಕಿ 3 ಮಂದಿ ಅಸು ನೀಗಿದರೇ 5 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ.

ಕೊರೋನಾ ವಿರುದ್ಧ ಹೋರಾಟದ ಅಂಗವಾಗಿ ಏಪ್ರಿಲ್ 14ರವರೆಗೆ ದೇಶಾದ್ಯಂತ 21 ದಿನಗಳ ಸಂಪುರ್ಣ ಬಂದ್ ಘೋಷಿಸಲಾಗಿದ್ದು ಅದನ್ನು ವಿಸ್ತರಿಸುವ ಯೋಚನೆ ಇಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.

ರಾಜ್ಯಾದ್ಯಂತ ಸಹ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿದ್ದು ಅಗತ್ಯ ಸೇವೆಗಳು ಮತ್ತು ಸೇವಾದರರನ್ನು ಹೊರತುಪಡಿಸಿ ಇತರೆಲ್ಲ ಚಟುವಟಿಕೆಗಳು ಸ್ತಬ್ಧಗೊಂಡಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights