ಡಿಕೆಶಿ ಮಗಳು ಹಾಗೂ ಕಾಫಿಡೇ ಸಿದ್ಧಾರ್ಥ್ ಮಗನ ಮದುವೆ: ಎಸ್‌.ಎಂ.ಕೃಷ್ಣ ಕುಟುಂಬದೊಂದಿಗೆ ಮಾತುಕತೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹಿರಿಯ ಮಗಳು ಐಶ್ವರ್ಯಾ ಮತ್ತು ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ ಅವರ ಪುತ್ರ ಅಮರ್ತ್ಯ ಹೆಗ್ಡೆ ಅವರ ಮದುವೆಯ ಬಗ್ಗೆ ಸುದ್ದಿ ತಿಳಿದುಬಂದಿದೆ.

ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮತ್ತು ಡಿಕೆಶಿ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಎಸ್‌.ಎಂ.ಕೃಷ್ಣ ಅವರ ಅಳಿಯ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಹೆಗ್ಡೆಯವರು ಕಳೆದ ವರ್ಷ ಆತ್ಮಹತ್ಯೆಗೆ ಶರಣಾಗಿದ್ದರು. ಡಿಕೆಶಿ ಹಾಗೂ ಸಿದ್ಧಾರ್ಥ್ ಇಬ್ಬರೂ ಬ್ಯುಸಿನೆಸ್ ಪಾರ್ಟನರ್ ಕೂಡ ಆಗಿದ್ದರು. ಸಿದ್ಧಾರ್ಥ ಸಾವಿಗೂ ಮುಂಚೆಯೇ ಎರಡೂ ಕುಟುಂಬಗಳು ಸಂಬಂಧ ಬೆಳೆಸುವ ಪ್ರಸ್ತಾಪವಾಗಿ, ಮದುವೆಯ ವಿಚಾರ ಚರ್ಚೆಗೆ ಬಂದಿತ್ತು. ಈ ನಡುವೆ ಸಿದ್ಧರ್ಥ್ ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ  ಡಿ.ಕೆ. ಶಿವಕುಮಾರ್ ಕುಟುಂಬ ಸಿದ್ಧಾರ್ಥ ಹೆಗಡೆ ಕುಟುಂಬದ ಜೊತೆಗಿದ್ದು, ಧೈರ್ಯ ತುಂಬಿತ್ತು. ಆದರೆ, ಸಿದ್ಧಾರ್ಥ ಅವರ ಸಾವಿನ ನಂತರ ಮಾತುಕತೆ ನಿಂತುಹೋಗಿತ್ತು. ಈಗ ಮತ್ತೆ ಮದುವೆ ಪ್ರಸ್ತಾಪ ಮುನ್ನೆಲೆಗೆ ಬಂದಿದೆ.

D K Shivakumar's daughter Aishwarya deposes before ED - Daijiworld.com

ಎರಡೂ ಕುಟುಂಬಗಳು ಸದಾಶಿವನಗರದ ಶಿವಕುಮಾರ್ ಅವರ ಮನೆಯಲ್ಲಿ ಭೇಟಿಯಾಗಿ ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಮತ್ತು ಎಸ್‌.ಎಂ.ಕೃಷ್ಣ ಅವರ ಸಮ್ಮುಖದಲ್ಲಿ ಮದುವೆ ಪ್ರಸ್ತಾಪವನ್ನು ಅಂತಿಮಗೊಳಿಸಿದ್ದಾರೆ ಎಂದು ವರದಿಯಾಗಿದೆ.

“ಮದುವೆಗಳನ್ನು ಸ್ವರ್ಗದಲ್ಲಿ ಮಾಡಲಾಗಿರುತ್ತದೆ ಎಂದು ಹೇಳುತ್ತಾರೆ. ಇದು ದೇವರ ಆಶಯ. ಮದುವೆಯನ್ನು ಮುಂದುವರಿಸುವ ಮೊದಲು ಸಿದ್ಧಾರ್ಥ ನಿಧನರಾದ ನಂತರ ಒಂದು ವರ್ಷ ಕಳೆಯುವವರೆಗೂ ನಾವು ಕಾಯಬೇಕಾಗಿದೆ” ಎಂದು ಡಿಕೆಶಿ ಹೇಳಿದ್ದಾರೆ.

ಸಂಪ್ರದಾಯದ ಪ್ರಕಾರ, ಕುಟುಂಬದ ಸದಸ್ಯರ ನಿಧನರಾದ ಒಂದು ವರ್ಷದೊಳಗೆ ಯಾವುದೇ ಶುಭಕಾರ್ಯಗಳನ್ನು ಮಾಡುವಂತಿಲ್ಲ. ಹಾಗಾಗಿ ನಿಶ್ಚಿತಾರ್ಥವನ್ನು ಆಗಸ್ಟ್‌ನಲ್ಲಿ ನಡೆಸಬಹುದು ಹಾಗೂ ಮದುವೆಯನ್ನು ಅಕ್ಟೋಬರ್‌ನಲ್ಲಿ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಸದ್ಯ, ಡಿಕೆಶಿಯವರು ಮಗಳ ಐಶ್ವರ್ಯಾ, ಇಂಜಿನಿಯರಿಂಗ್‌ ಮಾಡಿದ್ದು, ಡಿಕೆಶಿಯವರ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದಾರೆ. ಯುಎಸ್‌ನಲ್ಲಿ ಪದವಿ ಪಡೆದಿರುವ ಅಮರ್ತ್ಯತನ್ನ ತಾಯಿ ಮಾಳವಿಕಾ ಅವರೊಂದಿಗೆ ಕುಟುಂಬ ನಡೆಸುವ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ.

ಎಚ್‌ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕ ಎಂ.ಕೃಷ್ಣಪ್ಪ ಅವರ ಮೊಮ್ಮಗಳು ರೇವತಿ ಅವರನ್ನು ವಿವಾಹವಾಗಿದ್ದಾರೆ. ಇದಾದ ನಂತರ, ಈ ಮೈತ್ರಿಯ ಎರಡನೇ ಮದುವೆ ಇದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights