ಮೇ.18ರಿಂದ ವಿಮಾನಯಾನ ಸೇವೆ ಪಡೆಯುವವರಿಗೆ ಆರೋಗ್ಯಸೇತು ಆ್ಯಪ್‌ ಕಂಪಲ್ಸರಿ!

ಇಂದಿನಿಂದ ಆಯ್ದ ಭಾಗಗಳಿಗೆ ರೈಲು ಸಂಚಾರ ಆರಂಭಗೊಂಡಿದ್ದು, ವಿಮಾನಯಾನಿಗಳಿಗೂ ಸಿಹಿ ಸುದ್ದಿ ಸಿಕ್ಕಿದೆ. ಮೇ.18 ರಿಂದ ಹಂತ ಹಂತವಾಗಿ ದೇಶೀಯ ವೈಮಾನಿಕ ಸೇವೆ ಆರಂಭಿಸುವ ಲಕ್ಷಣಗಳು ಗೋಚರಿಸುತ್ತಿವೆ.

ಹೌದು.. ಇದೇ ಮೇ.18 (ಸೋಮವಾರ)ರಿಂದ ವಿಮಾನಯಾನ ಶುರುವಾಗುವ ಲಕ್ಷಣಗಳಿದ್ದು, ಈ ಬಗ್ಗೆ ನಾಗರಿಕ ವಿಮಾನಯಾನ ಖಾತೆ ಸಚಿವಾಲಯ ಮಾಹಿತಿ ನೀಡಿದೆ. ಸೋಮವಾರ ದೇಶದ ವಿವಿಧ ನಗರಗಳ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿದ  ಭದ್ರತಾ ವಿಭಾಗ ಮತ್ತು ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯದ ಅಧಿಕಾರಿಗಳು ವಾಣಿಜ್ಯ ವಿಮಾನಗಳ ಸೇವೆ ಆರಂಭಿಸುವ ಕುರಿತ ಸಿದ್ಧತೆಗಳನ್ನು ಪರಿಶೀಲನೆ ಮಾಡಿದ್ದಾರೆ.

ಆರಂಭದಲ್ಲಿ ಕಡಿಮೆ ಅವಧಿಯ ಅಂದರೆ ಎರಡು ಗಂಟೆಗಳಿಗಿಂತಲೂ ಕಡಿಮೆ ಪ್ರಯಾಣದ ವಿಮಾನಗಳಿಗೆ ಅವಕಾಶ ಕೊಡುವುದರ ಜೊತೆಗೆ ಶೇ.25 ಪ್ರದೇಶಗಳಿಗೆ ಮಾತ್ರ ಸೇವೆ ಇರಲಿದೆ. ಜೊತೆಗೆ ವಿಮಾನದಲ್ಲಿ ಆಹಾರ ಸೌಲಭ್ಯ ಒದಗಿಸದೆ ಇರಲು ಚಿಂತನೆ ನಡೆದಿದೆ. ಜೊತೆಗೆಸ್ಮಾರ್ಟ್‌ ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡವರಿಗೆ ಮಾತ್ರ ವಿಮಾನ ಏರಲು ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights