ಹೊಸ ವಾಹನ ಖರೀದಿದಾರರೇ ಇಲ್ನೋಡಿ : ಇನ್ಮುಂದೆ ಪಾರ್ಕಿಂಗ್ ಸ್ಥಳದ ಪುರಾವೆ ಕಡ್ಡಾಯ

ಬೆಂಗಳೂರಿನಂತಹ ಮಹಾನಗರದಲ್ಲಿ ವಾಹನಗಳ ಸಂಖ್ಯೆ ಹಾಗೂ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆ ಹೊಸದಾದ ನಿಯಮವನ್ನ ಜಾರಿಗೆ ತರಲಾಗಿದೆ. ಹಣ ಇದೆ ಅಂತ ವಾಹನ ಪ್ರೀಯರು ವಾಹನಗಳನ್ನ ಖರೀದಿಸಲು ಆರಂಭಿಸಿದ್ದರೆ ಅಂಥವರಿಗೆ ಈ ನಿಯಮ ವಾಹನ ಖರೀದಿಗೆ ಬ್ರೇಕ್ ಹಾಕಿದೆ.

ಹೌದು… ಪಾರ್ಕಿಂಗ್ ಸ್ಥಳ ಇದ್ದರೆ ಮಾತ್ರ ಹೊಸ ವಾಹನ ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಆಯುಕ್ತ ಎನ್ ಶಿವಕುಮಾರ್ ತಿಳಿಸಿದ್ದಾರೆ. ಹೊಸ ವಾಹನ ಖರೀದಿಗೂ ಮುನ್ನ ಮನೆ ಮುಂದೆ ಪಾರ್ಕಿಂಗ್ ಸ್ಥಳದ ಬಗ್ಗೆ ಪುರಾವೆ ನೀಡಿದರೆ ಮಾತ್ರ ಹೊಸ ವಾಹನ ಖರೀದಿಗೆ ಅವಕಾಶ ನೀಡಲಾಗುತ್ತದೆ.

ಪಾರ್ಕಿಂಗ್ ಸ್ಥಳದ ಬಗ್ಗೆ ಪುರಾವೆ ನೀಡಿ ಬಿಬಿಎಂಪಿ ಎನ್ ಓಸಿ ಪಡೆದ ಗ್ರಾಹಕರಿಗೆ  ಆರ್ ಟಿ ಓ ಆಫೀಸ್ ನಲ್ಲಿ ರೆಜಿಸ್ಟರ್ ಸಿಗುತ್ತದೆ. ಇಲ್ಲವಾದರೆ ಮನೆ ಮುಂದೆ ಬಣ್ಣ ಬಣ್ಣದ ಮೂರು ನಾಲ್ಕು ವಾಹನಗಳನ್ನ ನಿಲ್ಲಿಸುವ ವಾಹನ ಪ್ರೀಯರಿಗೆ ವಾಹನ ನೊಂದಣಿಯಾಗುವುದಿಲ್ಲ.

ಈ ನಿಮಯ ಕಡ್ಡಾಯವಾಗಿ ಪಾಲಿಸಿದರೆ ಅನಾವಶ್ಯಕ ವಾಹನ ಖರೀದಿಯನ್ನ ತಪ್ಪಿಸಬಹುದು. ಜೊತೆಗೆ ವಾಹನ ದಟ್ಟನೆಯನ್ನು ತಪ್ಪಿಸಲು ಇದು ಸಹಕಾರಿಯಾಗಿದೆ ಎಂದು ಸಾರಿಗೆ ಆಯುಕ್ತರು ತಿಳಿಸಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights