FACT CHECK | 10 ರಾಜ್ಯಗಳಲ್ಲಿ ಇಂಡಿಯಾ ಮೈತ್ರಿಕೂಟ ಮುನ್ನಡೆ ಸಾಧಿಸಲಿದೆ ಎಂಬ ಸಮೀಕ್ಷೆ ವರದಿಯ ಅಸಲೀಯತ್ತೇನು?

ಲೋಕಸಭೆ ಚುನಾವಣೆಯಲ್ಲಿ 10 ರಾಜ್ಯಗಳಲ್ಲಿ INDIA ಬಣ ಮುನ್ನಡೆ ಸಾಧಿಸಲಿದೆ ಎಂದು ದೈನಿಕ್ ಭಾಸ್ಕರ್ ಮತ್ತು ನೀಲ್ಸನ್ ನಡೆಸಿದ ಸಮೀಕ್ಷೆ ಭವಿಷ್ಯ ನುಡಿದಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ದೈನಿಕ್ ಭಾಸ್ಕರ್ ಪತ್ರಿಕೆಯ ಏಪ್ರಿಲ್ 13ರ ಸಂಚಿಕೆಯ  ಸ್ಕ್ರೀನ್ ಶಾಟ್ ಭಾರೀ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಪೇಪರ್ ಕಟ್ಟಿಂಗ್‌ನ ಕ್ಲಿಪ್‌ನಲ್ಲಿ ‘ಚುನಾವಣಾ ಪೂರ್ವ ಸರ್ವೆ ಪ್ರಕಾರ ಇಂಡಿ ಮೈತ್ರಿ ಕೂಟವು ದೇಶದ 10 ರಾಜ್ಯಗಳಲ್ಲಿ ಎನ್‌ಡಿಎ ಮೈತ್ರಿ ಕೂಟವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಲಿದೆ. ದಕ್ಷಿಣ ಭಾತದ ರಾಜ್ಯಗಳೂ BJP ಗೆ ಹಿನ್ನಡೆಯಾಗಲಿದೆ ಎಂದು ಹೇಳಲಾಗಿದೆ. ಕಲ್ಯಾಣ ಕರ್ನಾಟಕ ಕಾಂಗ್ರೆಸ್‌ನ ಎಕ್ಸ್‌ ಖಾತೆಯ ಮೂಲಕ ಹಂಚಿಕೊಳ್ಳಲಾಗಿದ್ದು, ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಸರ್ಚ್ ಮಾಡಿದಾಗ  ಇಂಡಿಯಾ ಟುಡೇ ಈ ವೈರಲ್ ತುಣುಕಿನಲ್ಲಿರುವ ಸಮೀಕ್ಷಾ ವರದಿಯ ಸ್ಕ್ರೀನ್ ಶಾಟ್ಅನ್ನು ನಕಲಿ ಎಂದು ವರದಿ ಮಾಡಿದೆ. ಏಪ್ರಿಲ್ 13ರ ದೈನಿಕ ಭಾಸ್ಕರ್ ಪತ್ರಿಕೆಯ ಸಂಚಿಕೆಯಲ್ಲಿ ಆ ರೀತಿಯ ಯಾವುದೇ ವರದಿ ಪ್ರಕಟ ಆಗಿರಲಿಲ್ಲ ಎಂದು ತಿಳಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಸಮೀಕ್ಷಾ ವರದಿಯ ಸ್ಕ್ರೀನ್ ಶಾಟ್ಅನ್ನು ಸ್ವತಃ  ದೈನಿಕ್ ಭಾಸ್ಕರ್ ಪತ್ರಿಕೆಯೇ ವೈರಲ್ ಆಗಿರುವ ಸ್ಕ್ರೀನ್ ಶಾಟ್ ನಕಲಿ ಎಂದು ವರದಿ ಮಾಡಿದೆ.  ಏಪ್ರಿಲ್ 13 ರಂದು ದೈನಿಕ್ ಭಾಸ್ಕರ್ ಪತ್ರಿಕೆಯ ಹೆಸರಲ್ಲಿ ನಕಲಿ ವರದಿ ಮಾಡಲಾಗಿದೆ ಎಂದು ಸಂಸ್ಥೆ ಸುದ್ದಿ ಪ್ರಕಟಿಸಿತ್ತು. ಇನ್ನು ಆ ದಿನದ ಅಸಲಿ ಪತ್ರಿಕೆ ಹಾಗೂ ತಿರುಚಲಾದ ನಕಲಿ ಸ್ಕ್ರೀನ್ ಶಾಟ್ ಎರಡನ್ನೂ ಈ ಕೆಳಗೆ ನೀಡಲಾಗಿದ್ದು, ವ್ಯತ್ಯಾಸ ಗಮನಿಸಬಹುದಾಗಿದೆ.

fake paper body 3fake paper body 4

ದೈನಿಕ ಭಾಸ್ಕರ್ ಪತ್ರಿಕೆಯು ನೀಲ್ಸನ್ ಸಂಸ್ಥೆಜೊತೆ ಸೇರಿ ನಡೆಸಿದ ಸಮೀಕ್ಷೆಗೆ “ನನ್ನ ವೋಟ್, ನನ್ನ ಹಕ್ಕು ಎಂಬ ಹೆಸರನಿಡಲಾಗಿತ್ತು. ಸಮೀಕ್ಷೆಯ ಫಲಿತಾಂಶಗಳನ್ನು ವಿವರಿಸುವ ಲೇಖನ ಲಭ್ಯವಾಗಿದೆ. ಏಪ್ರಿಲ್ 1 ರಿಂದ ಏಪ್ರಿಲ್ 6 ರವರೆಗೆ 308 ಲೋಕಸಭಾ ಕ್ಷೇತ್ರಗಳಲ್ಲಿ ಈ ಸಮೀಕ್ಷೆಗಳನ್ನು ನಡೆಸಲಾಗಿದೆ. ಶೇ. 48 ರಂದು ಜನರು ಮತ್ತೆ ಮೋದಿ ಪುನರಾಯ್ಕೆ ಆಗಬೇಕೆಂದು ಬಯಸುತ್ತಾರೆ ಎಂದು ಹೇಳಿತ್ತು. ಇನ್ನು ಶೇ. 37 ರಷ್ಟು ಮಂದಿ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಕಾರಣ ಬೇಸರ ವ್ಯಕ್ತಪಡಿಸಿದ್ದರು.

Fact Check: ಲೋಕಸಭೆ ಚುನಾವಣೆಯಲ್ಲಿ 10 ರಾಜ್ಯಗಳಲ್ಲಿ ಐ.ಎನ್.ಡಿ.ಐ. ಬಣ ಮುನ್ನಡೆ? ಇಲ್ಲ, ವೈರಲ್ ಸುದ್ದಿ ನಕಲಿ

ಎರಡು ಪ್ರಮುಖ ಅಂಶಗಳನ್ನು ಕೇಂದ್ರಿಕರಿಸಿ ಸಮೀಕ್ಷೆಯನ್ನುನಡೆಸಲಾಗಿದ್ದು   ಮೊದಲನೆಯದಾಗಿ “ನಿಮ್ಮ ಕ್ಷೇತ್ರದಲ್ಲಿ ದೊಡ್ಡ ವಿಷಯ ಯಾವುದು ಮತ್ತು ಭವಿಷ್ಯದ ಸಂಸದರಿಗೆ ನಿಮ್ಮ ಬೇಡಿಕೆ ಏನು? ಎರಡನೆಯದು “ಮತದಾನ ಕಡಿಮೆಯಾಗಲು ಕಾರಣವೇನು?, ಮತ್ತು ಅವರ ಪ್ರದೇಶದಲ್ಲಿ ಅತಿ ದೊಡ್ಡ ಸಮಸ್ಯೆ ಯಾವುದು?” ಎಂಬುದಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಏಪ್ರಿಲ್ 13, 2024 ರ ದೈನಿಕ್ ಭಾಸ್ಕರ್ ಭೋಪಾಲ್ ಸಂಚಿಕೆಯ ಮುಳಪುಟದಲ್ಲಿ ಅಂತಹ ಯಾವುದೇ ಸಮೀಕ್ಷೆಯ ಫಲಿತಾಂಶಗಳಾಗಲಿ ಅಥವಾ ಇಂಡಿಯಾ ಮೈತ್ರಿ ಕೂಟ ದಿಗ್ವಿಜಯ ಸಾಧಿಸಲಿದೆ ಎಂದು ಬಿಂಬಿಸಿದ್ದ ಸರ್ವೆ ವರದಿಯಾಗಲಿ ಪ್ರಕಟ ಆಗಿರಲಿಲ್ಲ. ಹೀಗಾಗಿ, ವೈರಲ್ ಆಗಿರುವ ಸ್ಕ್ರೀನ್‌ ಶಾಟ್‌ ಅನ್ನು ತಿರುಚಲಾಗಿದೆ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕೇರಳದ ಮುಸ್ಲಿಂ ಲೀಗ್ ಕಚೇರಿಯನ್ನು ಕಾಂಗ್ರೆಸ್‌ ಪಕ್ಷದ ಕಚೇರಿ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights