FACT CHECK | ಪಾರ್ಕ್‌ಗಳಲ್ಲಿ ಯೋಗ ಮಾಡುವುದನ್ನು ತಡೆಯುತ್ತೇವೆ ಎಂದು ಹೇಳಿದ್ರಾ ಪ್ರಿಯಾಂಕಾ ಗಾಂಧಿ?
ಈಗ, ರಸ್ತೆಯಲ್ಲಿ ನಮಾಜ್ ಮಾಡದಂತೆ ನೀವು ತಡೆಯುವುದಾದರೆ, ಉದ್ಯಾನವನಗಳಲ್ಲಿ ಯೋಗ ಕೂಡ ಮಾಡುವುದನ್ನು ನಾವು ತಡೆಯುತ್ತೇವೆ. – ಪ್ರಿಯಾಂಕಾ ವಾದ್ರಾ” “ಹಿಂದೂಗಳೇ, ಕಾಂಗ್ರೆಸ್ ಪಕ್ಷ ನೇರವಾಗಿ ಹಿಂದೂಗಳ ಅಸ್ಮಿತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ನೀವಿನ್ನೂ ನಿಮ್ಮ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಬೆಂಬಲಿಸಿ ಇಂತಹ ದೇಶದ್ರೋಹಿಗಳಿಗೆ ಬಲ ತುಂಬುತ್ತೀರಾ?” ಎಂಬ ಪೋಸ್ಟರ್ ಒಂದು ಪೋಸ್ಟ್‌ಕಾರ್ಡ್ ಹೆಸರಿನಲ್ಲಿ ಹರಿದಾಡುತ್ತಿದೆ.
2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವ ಹೊತ್ತಲ್ಲಿ ಪ್ರಿಯಾಂಕಾ ಗಾಂಧಿ ಹೀಗೆ ಹೇಳಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಹೇಳಿಕೆ ನಿಜವೇ? ಪ್ರಿಯಾಂಕಾ ಗಾಂಧಿ ನಿಜವಾಗಿಯೂ ಹೀಗೆ ಹೇಳಿದ್ದಾರೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಪೋಸ್ಟ್ ಕಾರ್ಡ್ ಹೆಸರಿನ ಪೋಸ್ಟರಿನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಹೇಳಿಕೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಷಯದ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು ಕೀವರ್ಡ್ ಸರ್ಚ್ ನಡೆಸಿದಾಗ, ಉದ್ಯಾನವನಗಳಲ್ಲಿ ಯೋಗ ಮಾಡುವುದನ್ನು ತಡೆಯುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿರುವ ಯಾವುದೇ ಮಾಧ್ಯಮ ವರದಿಗಳು ಲಭ್ಯವಾಗಿಲ್ಲ.
ಈ ವೈರಲ್ ಪೋಸ್ಟರ್ 2020ರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪ್ರಿಯಾಂಕಾ ಗಾಂಧಿ ಅವರಿಗೆ ಅವಮಾನ ಮಾಡುವ ಸಲುವಾಗಿ ಪೋಸ್ಟ್ ಕಾರ್ಡ್ ಕನ್ನಡ ಈ ಸುಳ್ಳು ಹರಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಮರ ಪವಿತ್ರ ರಂಜಾನ್ ಇತ್ತೀಚೆಗೆ ಮುಗಿದಿದೆ. ಮುಸ್ಲಿಮರು ಪ್ರಾರ್ಥನೆ ವೇಳೆ ಮಸೀದಿಯಿಂದ ಹೊರಗೆ ರಸ್ತೆಗಳಲ್ಲಿ ನಮಾಜ್ ಮಾಡುತ್ತಿದ್ದಾರೆ ಎಂಬ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. ಅದನ್ನೆ ಹಿನ್ನಲೆಯಾಗಿ ಇಟ್ಟುಕೊಂಡು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯನ್ನು ಟಾರ್ಗೆಟ್ ಮಾಡಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಆದರೆ ಇಂತಹ ಯಾವುದೇ ಹೇಳಿಕೆಯನ್ನು ಪ್ರಿಯಾಂಕಾ ಗಾಂಧಿ ನೀಡಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | 10 ರಾಜ್ಯಗಳಲ್ಲಿ ಇಂಡಿಯಾ ಮೈತ್ರಿಕೂಟ ಮುನ್ನಡೆ ಸಾಧಿಸಲಿದೆ ಎಂಬ ಸಮೀಕ್ಷೆ ವರದಿಯ ಅಸಲೀಯತ್ತೇನು?