ಹಾವನ್ನು ನುಂಗಿದ ಮೀನು : ಮುಂದೇನಾಯ್ತು ನೋಡಿ ವಿಲಕ್ಷಣ ವೀಡಿಯೋ..

ಸಾಮಾನ್ಯವಾಗಿ ಹಾವು ಕಪ್ಪೆ, ನಾಯಿ, ಬೆಕ್ಕು, ಮೇಕೆ, ಇಲಿ, ಮೊಟ್ಟೆಯನ್ನು ನುಂಗುವುದನ್ನು ನೋಡಿರುತ್ತೇವೆ. ಆದರೆ ಮೀನು ಹಾವನ್ನು ನುಂಗುವುದು ನೋಡಿದ್ದೀರಾ..? ಇಲ್ಲೊಂದು ವಿಲಕ್ಷಣ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಈ ಕ್ಪಿಪ್ ನ್ನು ನಿನ್ನೆ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತಾ ನಂದಾ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ನೀರಿನಿಂದ ತಲೆ ಹೊರಹಾಕಿ ಹೊಗೆಯನ್ನು ಉಗುಳುವ ಮೀನು ನಂತರ ಹಾವನ್ನು ಕ್ರಮೇಣವಾಗಿ ನುಂಗುತ್ತದೆ. ಇದು ನಿಜಕ್ಕೂ ನೋಡುಗರನ್ನು ಆಶ್ಚರ್ಯಗೊಳಿಸಿದೆ. ಹಾವನ್ನು ನುಂಗಿದ ಬಳಿಕದ ದೃಶ್ಯವಂತೂ ಇನ್ನೂ ವಿಚಿತ್ರವಾಗಿದೆ.

ವೀಡಿಯೊವನ್ನು ಟ್ವಿಟರ್‌ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಕ್ಲಿಪ್ ಎಲ್ಲಿ ಸಿಕ್ಕಿತು ಎಂದು ಶ್ರೀ ನಂದಾ ಅವರನ್ನು ನೂರಾರು ಜನರು ಕಾಮೆಂಟ್ ವಿಭಾಗದಲ್ಲಿ ಪ್ರಶ್ನಿಸಿದ್ದಾರೆ.

“ದಯವಿಟ್ಟು ಪೂರ್ಣ ವೀಡಿಯೊವನ್ನು ಕಳುಹಿಸಿ. ನನ್ನಂತಹ ಜನಸಾಮಾನ್ಯರಿಗೆ ವೀಡಿಯೊ ಬಗ್ಗೆ ಸಾಕಷ್ಟು ವಿವರಣೆಯ ಅಗತ್ಯವಿದೆ” ಎಂದು ಟ್ವಿಟರ್ ಬಳಕೆದಾರರೊಬ್ಬರು ವಿನಂತಿಸಿದ್ದಾರೆ.

ಕ್ಲಿಪ್‌ನ ಎರಡನೆಯ ಭಾಗವನ್ನು ಇಂದು ಬೆಳಿಗ್ಗೆ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ನಲ್ಲಿ ಶ್ರೀ ನಂದಾ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಮೀನು ನುಂಗಿದ ಹಾವನ್ನು ಉಗುಳುತ್ತದೆ. ಹಾವು ಕ್ರಮೇಣ ಹೊರಬಂದು ನೀರಿನೊಳಗೆ ಹೋಗುತ್ತದೆ.

“ನಿನ್ನೆ ನಾನು ಈ ವೀಡಿಯೊದ ಒಂದು ಭಾಗವನ್ನು ಪೋಸ್ಟ್ ಮಾಡಿದ್ದೇನೆ. ಅದರ ನಂತರ ಏನಾಯಿತು …” ಎಂದು ಶ್ರೀ ನಂದಾ ಬರೆದಿದ್ದಾರೆ. “ಇದು ಒಂದು ದೊಡ್ಡ ಮೀನು ಬೇಟೆಯಾಡುವಿಕೆಯ ಪ್ರಕರಣವಾಗಿತ್ತು. ಹಾವು ಸಾಕಷ್ಟು ಉದ್ದವಾಗಿದ್ದರಿಂದ ಮೀನು ಅದನ್ನು ಸಂಪೂರ್ಣವಾಗಿ ತಿನ್ನಲು ಸಾಧ್ಯವಾಗಲಿಲ್ಲ ಮತ್ತು ದೊಡ್ಡ ಬಾಯಿಯ ಮೂಲಕ ನುಂಗಿದ ಹಾವು ಹೊರಬರಲು ಸಾಧ್ಯವಾಗಿದೆ” ಎಂದು ಅವರು ವಿವರಿಸಿದ್ದಾರೆ.

ಆದಾಗ್ಯೂ ಅನೇಕರು ವೀಡಿಯೊವನ್ನು “ನಕಲಿ” ಎಂದು ಕರೆದ್ದಾರೆ. ಇದನ್ನು ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 27 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.

ಆಗಸ್ಟ್ 2019 ರಲ್ಲಿ ಈ ವೀಡಿಯೊವನ್ನು “ಫಿಶರ್ಮನ್ ಅನಿಮಲ್ ಲವರ್” ಎಂಬ ಚಾನಲ್‌ಗೆ ಅಪ್‌ಲೋಡ್ ಮಾಡಲಾಗಿದೆ. ಆದರೂ ಇದು ನೋಡುಗರಿಗೆ ಗೊಂದಲ ಸೃಷ್ಟಿ ಮಾಡಿದೆ. ಹೀಗೊಂದು ಘಟನೆ ನಡೆಯಲು ಹೇಗೆ ಸಾಧ್ಯ..? ಹಾಗೊಂದು ವೇಳೆ ನಡೆದರೂ ಇದನ್ನು ಇಷ್ಟು ಹತ್ತಿರದಿಂದ ಸೆರೆಹಿಡಿಯಲಾಗಿದಿಯಾ..? ಅಥವಾ ಇದು ನಕಲಿ ಇರಬಹುದು ಎನ್ನುವಂತ ಕಾಮೆಂಟ್ಸ್ ಗಳನ್ನ ನೆಟ್ಟಿಗರು ಮಾಡಿದ್ದಾರೆ.

 

Spread the love

Leave a Reply

Your email address will not be published. Required fields are marked *