ಮಧು ಬಂಗಾರಪ್ಪ ‘ಕೈ’ ಹಿಡಿಯುವುದು ಬಹುತೇಕ ಖಚಿತ : ಡಿಕೆಶಿ ಜೊತೆಗಿಂದು ಚರ್ಚೆ!
ಇಷ್ಟು ದಿನ ಬಿಜೆಪಿ ಸೇರ್ತಿದ್ಧ ಶಾಸಕರು ಸದ್ಯ ‘ಕೈ’ ಕಡೆ ಮುಖ ಮಾಡುತ್ತಿದ್ದಾರೆ. ಜೆಡಿಎಸ್ ನಾಯಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ತಾರೆ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ ಇಂದು ಮಧು ಬಂಗಾರಪ್ಪ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಅಂದಹಾಗೆ ಮಧು ಬಂಗಾರಪ್ಪ ಕೈ ಹಿಡಿಯುವ ಬಗ್ಗೆ ತುಂಬಾ ದಿನಗಳಿಂದ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ೀ ವಿಚಾರ ಕೊನೆ ಹಂತಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಇಂದು ಸದಾಶಿವನಗರದ ಡಿಕೆಶಿ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮಾತ್ರವಲ್ಲದೇ ಕಾಂಗ್ರೆಸ್ ಸೇರುವ ದಿನ ಕೂಡ ಫಿಕ್ಸ್ ಆಗಿದ್ದು ಆದಷ್ಟು ಬೇಗ ಮಧುಬಂಗಾರಪ್ಪ ಕನಕಪು ಬಂಡೆಯ ಭದ್ರ ಕೋಟೆಯನ್ನು ಪ್ರವೇಶಿಸಲಿದ್ದಾರೆಂಬ ಮಾತುಗಳು ಹರಿದಾಡುತ್ತಿವೆ. ಈ ಬಗ್ಗೆ ಉಭಯ ನಾಯಕರೊಂದಿಗೂ ಚರ್ಚೆಗಳು ನಡೆದಿವೆ ಎನ್ನಲಾಗುತ್ತಿದೆ.

