ಲೈಗರ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್! : ವಿಶ್ವಾದ್ಯಂತ ಚಿತ್ರ ಬಿಡುಗಡೆಗೆ ಸಿದ್ದತೆ!

ವಿಜಯ್ ದೇವೇರಕೊಂಡ ಮತ್ತು ಅನನ್ಯಾ ಪಾಂಡೆ ಅವರ ಬಹುನಿರೀಕ್ಷಿತ ಬಹುಭಾಷಾ ಚಿತ್ರ ಲೈಗರ್ ಸಿನಿಮಾ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ.

ಸೆಪ್ಟೆಂಬರ್ 9, 2021 ರಂದು ಲೈಗರ್ ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿಯಲ್ಲಿ ಮಾತ್ರವಲ್ಲದೆ ತಮಿಳು, ಕನ್ನಡ ಮತ್ತು ಮಲಯಾಳಂ, ತೆಲುಗಿನಲ್ಲಿಯೂ ಸಹ ಚಿತ್ರ ಬಿಡುಗಡೆಯಾಗಲಿದೆ. ಈ ಬಗ್ಗೆ ಸ್ವತ: ವಿಜಯ್ ದೇವರಕೊಂಡ ಫೋಸ್ಟರ್ ಪೋಸ್ಟ್ ಮಾಡಿದ್ದಾರೆ.

“ಭಾರತ – ನಾವು ಬರುತ್ತಿದ್ದೇವೆ! ಸೆಪ್ಟೆಂಬರ್ 9, 2021, ”ಎಂದು ವಿಜಯ್ ಲೈಗರ್ ಸಿನಿಮಾ ಪೋಸ್ಟರ್ನೊಂದಿಗೆ ಟ್ವೀಟರ್ನಲ್ಲಿ ಬರೆದಿದ್ದಾರೆ.

“ಸೆಪ್ಟೆಂಬರ್ 9, 2021 ರಂದು ನಿಮ್ಮ ಹತ್ತಿರವಿರುವ ಥಿಯೇಟರ್‌ನಲ್ಲಿ ಪಂಚ್ ಪ್ಯಾಕಿಂಗ್! ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಲೈಗರ್ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ”ಎಂದು ಅನನ್ಯಾ ಪಾಂಡೆ ಶೇರ್ ಮಾಡಿದ್ದಾರೆ.

ಪುರಿ ಜಗನ್ನಾಥ್ ನಿರ್ದೇಶಿಸಿದ ಲೈಗರ್ ಇದನ್ನು ಚಾರ್ಮ್ ಕೌರ್ ಜೊತೆಗೆ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಲಿದೆ. ಹಿಂದಿಯಲ್ಲಿ ಬಿಡುಗಡೆಯಾಗುವ ಲೈಗರ್ ವಿಜಯ್ ದೇವರಕೊಂಡ ಅವರ ಬಾಲಿವುಡ್ ಚೊಚ್ಚಲ ಸಿನಿಮವಾಗಿದೆ. ಮಾತ್ರವಲ್ಲದೇ ಇದು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಅನನ್ಯ ಪಾಂಡೆ ಅವರ ಚೊಚ್ಚಲ ಪ್ರದರ್ಶನವನ್ನು ಸೂಚಿಸುತ್ತದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.