ಭಾರೀ ಕುತೂಹಲ ಕೆರಳಿಸಿದ್ದ ಕೋಲಾರ ಜಿಲ್ಲಾ ಪಂಚಾಯತ ಕಾಂಗ್ರೇಸ್ ತೆಕ್ಕೆಗೆ…

ಭಾರೀ ಕುತೂಹಲ ಕೆರಳಿಸಿದ್ದ ಕೋಲಾರ ಜಿಲ್ಲಾ ಪಂಚಾಯಿತಿ ಅದ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷ್ಯ ಸ್ತಾನ ಕಾಂಗ್ರೆಸ್ ಪಾಲಾಗಿದೆ.

ಆದ್ರೆ ಇದೆ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಬಿಜೆಪಿ ಸದಸ್ಯರು ಮತ ಹಾಕಿದ್ದು ವಿಶೇಷವಾಗಿದೆ. ಒಟ್ಟು 30 ಸದಸ್ಯರನ್ನು ಒಳಗೊಂಡ ಕೋಲಾರ ಜಿಲ್ಲಾಪಂಚಾಯಿತಿಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳ ಮೈತ್ರಿ ಮೂಲಕ ವೇಮಗಲ್ ಕ್ಷೇತ್ರದ ಸಿಎಸ್ ವೆಂಕಟೇಶ್ 22 ಮತಗಳನ್ನು ಪಡೆದು ಜಿಲ್ಲಾಪಂಚಾಯಿತಿಯ ನೂತನ ಅದ್ಯಕ್ಷರಾಗಿ ಆಯ್ಕೆಯಾದ್ರು. ಸಾರಿಗೆ ಇಲಾಖೆ ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಚುಣಾವಣೆ ಅಧಿಕಾರಿಯಾಗಿ ಪ್ರಕ್ರಿಯೆ ನಡೆಸಿದ್ರು.

ಚುಣಾವಣೆಯಲ್ಲಿ ಒಟ್ಟು 7 ಸದಸ್ಯರು ನಾಮಪತ್ರ ಸಲ್ಲಿಸಿದ್ದು, ಅದರಲ್ಲಿ 5 ಮಂದಿ ನಾಮಪತ್ರ ವಾಪಸ್ಸು ಪಡೆದು ಕಡೆಯದಾಗಿ ಸಿಎಸ್ ವೆಂಕಟೇಶ್ ಹಾಗೂ ಮ್ಯಾಕಲ ನಾರಾಯಣಸ್ವಾಮಿ ಅಂತಿಮಕಣದಲ್ಲಿದ್ರು. ಕಾಂಗ್ರೆಸ್ ಸದಸ್ಯರಾಗಿರುವ ಸಿಎಸ್ ವೆಂಕಟೇಶ್ ಗೆ ಪಕ್ಷಾತೀತವಾಗಿ ಬಿಜೆಪಿ, ಜೆಡಿಎಸ್ ,ಕಾಂಗ್ರೆಸ್ ನ 22 ಸದಸ್ಯರು ಕೈ ಎತ್ತಿ ಸಮ್ಮತಿ ಸೂಚಿಸಿ ಮತಹಾಕಿದರೆ, ಮತ್ತೊಬ್ಬ ಕಾಂಗ್ರೆಸ್ ಅಭ್ಯರ್ಥಿ ಮ್ಯಾಕಲ ನಾರಾಯಣಸ್ವಾಮಿ 7 ಮತಗಳು ಪಡೆದರು.

ಒಟ್ಟಾರೆಯಾಗಿ ಕೋಲಾರ ಜಿಲ್ಲಾಪಂಚಾಯಿತಿ 15 ಕಾಂಗ್ರೆಸ್, 10 ಜೆಡಿಎಸ್ , 5 ಬಿಜೆಪಿ ಸದಸ್ಯರನ್ನು ಹೊಂದಿದ್ದು ಈ ಹಿಂದೆ ಅದ್ಯಕ್ಷರಾಗಿದ್ದ ಗೀತಮ್ಮ ಆನಂದರೆಡ್ಡಿ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನಡೆದ ಚುಣಾವಣೆಯಲ್ಲಿ ಎಲ್ಲಾ ಪಕ್ಷದವರು ಒಂದಾಗಿ ಮಾಜಿ ಶಾಸಕ ವರ್ತೂರು ಪ್ರಕಾಶ್ ಆಪ್ತನಾಗಿದ್ದ ಸಿಎಸ್ ವೆಂಟೇಶ್ ರನ್ನು ನೂತನ ಅದ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಮಾಜಿ ಶಾಸಕ ವರ್ತೂರು ಪ್ರಕಾಶ್ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ಹಾಗೂ ಜೆಡಿಎಸ್ ಜಿಲ್ಲಾದ್ಯಕ್ಷ ವೆಂಕಟಶಿವಾರೆಡ್ಡಿ ಸಹಾಯದಿಂದ ಇಂದು ವೆಂಕಟೇಶ್ ಅದ್ಯಕ್ಷ ಸ್ಥಾನ ಪಡೆದಿದ್ದಾರೆ ಮುಂದೆ ಎಲ್ಲರೂ ಒಗ್ಗೂಡಿ ಅಭಿವೃದ್ಧಿ ಕೆಲಸಗಲ್ಲಿ ತೊಡಗುವುದಾಗಿ ತಿಳಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights