2020ರ ಟಾಪ್ ಟ್ವೀಟ್ ಲಿಸ್ಟ್ನಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ : ಟ್ರೆಂಡ್ ಟ್ವೀಟ್ನಲ್ಲಿ ಇನ್ಯಾರಿದ್ದಾರೆ?

ಟ್ವಿಟರ್ ಇಂಡಿಯಾ ಇತ್ತೀಚೆಗೆ ಈ ವರ್ಷದ ಟಾಪ್ ಟ್ವೀಟ್‌ಗಳನ್ನು ಬಹಿರಂಗಪಡಿಸಿದೆ. ಈ ಪಟ್ಟಿಯಲ್ಲಿ ಬಾಲಿವುಡ್‌ನಿಂದ ಹಾಲಿವುಡ್‌ ಸೆಲೆಬ್ರಿಟಿಗಳೂ ಸೇರಿದ್ದಾರೆ. ಈ ಪಟ್ಟಿಯಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್, ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ, ಅಮಿತಾಬ್ ಬಚ್ಚನ್ ಅವರಂತಹ ಸೆಲೆಬ್ರಿಟಿಗಳ ಟ್ವೀಟ್ ಗಳು ಸೇರಿವೆ. ಈಗ ಸುಶಾಂತ್ ಅವರ ‘ದಿಲ್ ಬೆಚರಾ’, ದೀಪಿಕಾ ಪಡುಕೋಣೆ ಅಭಿನಯದ ‘ಛಪಕ್’ ಮತ್ತು ಇತರ ಚಿತ್ರಗಳು ಸೇರಿದಂತೆ 2020 ರ ವರ್ಷದಲ್ಲಿ ಟ್ರೆಂಡ್ ಟ್ವೀಟ್ ಆಗಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ದೇಶಾದ್ಯಂತ ಕೋಲಾಹಲ ಸೃಷ್ಟಿಸಿತ್ತು. ಈ ಘಟನೆ ನಡೆದು ಬಹಳ ದಿನಗಳಾಗಿದೆ ಆದರೆ ದಿವಂಗತ ನಟನಿಗೆ ಸಂಬಂಧಿಸಿದ ಟ್ವೀಟ್‌ಗಳು ಚರ್ಚೆಯಲ್ಲಿ ಉಳಿದಿವೆ. ಇದಲ್ಲದೆ, ಪ್ರಸಿದ್ಧ ಹಾಲಿವುಡ್ ನಟ ಚಾಡ್ವಿಕ್ ಬೋಸ್ಮನ್ ಅವರ ನಿಧನದ ಸುದ್ದಿ ದೇಶ ಮತ್ತು ಪ್ರಪಂಚದಲ್ಲಿ ತುಂಬಾ ಚರ್ಚೆಯಾಯಿತು. ಇದರೊಂದಿಗೆ, ಅಮಿತಾಬ್ ಬಚ್ಚನ್ ಕೊರೋನಾ ಪಾಸಿಟಿವ್ ಎಂಬ ಸುದ್ದಿಯೂ 2020 ರ ದೊಡ್ಡ ಸುದ್ದಿಯಾಗಿದೆ. ಅವರ ಟ್ವೀಟ್ ಅನ್ನು 2020 ರಲ್ಲಿ ಅತ್ಯಂತ ಉಲ್ಲೇಖಿಸಬಹುದಾದ ಟ್ವೀಟ್ ಎಂದು ಕರೆಯಲಾಗುತ್ತದೆ.

ಅವರ ನಂತರ ವಿರಾಟ್ ಕೊಹ್ಲಿ ಅವರ ಟ್ವೀಟ್ 2020 ರಲ್ಲಿ ಹೆಚ್ಚು ಚರ್ಚಿಸಲ್ಪಟ್ಟಿದ್ದು, ಇದು ಹೆಚ್ಚು ಲೈಕ್ಸ್ ಗಳನ್ನು ಪಡೆದಿದೆ. ಹೌದು, ವಿರಾಟ್ ತಾವು 2021 ರ ಜನವರಿಯಲ್ಲಿ ತಂದೆಯಾಗಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು. ವಿರಾಟ್ ಹೊರತಾಗಿ, ನಟ ವಿಜಯ್ ಅವರ ಸೆಲ್ಫಿ ಫೋಟೋ 2020 ರ ಅತ್ಯಂತ ರಿಟ್ವೀಟ್ ಮಾಡಿದ ಚಿತ್ರವಾಗಿದೆ. ಈಗ ಬಾಲಿವುಡ್ ಚಲನಚಿತ್ರಗಳ ಬಗ್ಗೆ ಮಾತನಾಡಿ, ‘ದಿಲ್ ಬೆಚರಾ’ 2020 ರಲ್ಲಿ ಹೆಚ್ಚು ಚರ್ಚಿಸಲಾಗಿದೆ. ಇದರ ನಂತರ, ‘ಛಪಕ್’ ಚಿತ್ರಕ್ಕೆ ಎರಡನೇ ಸ್ಥಾನ ಸಿಕ್ಕಿತು. ಮೂರನೇ ಸ್ಥಾನದಲ್ಲಿ ಅಜಯ್ ದೇವಗನ್ ಅವರ ದೇಶಭಕ್ತಿ ಚಿತ್ರ ‘ತನ್ಹಾಜಿ: ದಿ ಅನ್ಸುಂಗ್ ವಾರಿಯರ್’ 2020ರ ಟ್ರೆಂಡ ಟ್ರೆಂಟ್ ಆಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights