ಫ್ಯಾಕ್ಟ್‌ಚೆಕ್ : ಬೆಂಗಳೂರಿನಲ್ಲಿ ಮುಸ್ಲಿಮರಿಂದ ಹಿಂದೂ ಹುಡುಗಿಯರ ಅಪಹರಣ ಎಂದು ಸುಳ್ಳು ಪೋಸ್ಟ್‌ ಹಂಚಿಕೆ

“ಜಿಹಾದಿಗಳಿಬ್ಬರು ಲಿಫ್ಟ್‌ನಲ್ಲಿದ್ದ ಹಿಂದೂ ಹುಡುಗಿಯರನ್ನು ಕ್ಲೋರೋಫಾರ್ಮ್ ಬಳಸಿ ಪ್ರಜ್ಞೆ ತಪ್ಪಿಸಿ ನೇರವಾಗಿ ಕಾರ್ ಪಾರ್ಕಿಂಗ್ ಎಳೆದೊಯ್ದು ಕಾರಿನಲ್ಲಿ ಅಪಹರಿಸಿದ್ದಾರೆ, ಅಪಹರಣಕ್ಕೊಳಗಾದ ಹುಡುಗಿಯರು ಮತ್ತು ಅಪಹರಣಕಾರರು ಯಾರು ಎಂದು ಗೊತ್ತೇ ಕ್ಷಣ ಮಾತ್ರದಲ್ಲಿ ಮಾಯವಾಗಿದ್ದಾರೆ” ಎಂದು ಪ್ರತಿಪಾದಿಸಿ  ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಅನ್ನು  ಹಂಚಿಕೊಳ್ಳಲಾಗಿದೆ.

Fact Check: ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯ ಎಂದು ಈಜಿಪ್ಟ್ ವೀಡಿಯೋ ವೈರಲ್

ವ್ಯಕ್ತಿಗಳಿಬ್ಬರು ಬಾಲಕಿಯರನ್ನು ಅಪಹರಿಸಲು ಪ್ರಯತ್ನಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನುವುದರೊಂದಿಗೆ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ವೀಡಿಯೋ 1 ನಿಮಿಷ 26 ಸೆಕೆಂಡುಗಳಷ್ಟಿದೆ. ಈ ವೀಡಿಯೋದಲ್ಲಿ, ಇಬ್ಬರು ಹುಡುಗಿಯರು ಎಲವೇಟರ್ನಲ್ಲಿ ನಿಂತಿರುವುದನ್ನು ಕಾಣಬಹುದು. ಏತನ್ಮಧ್ಯೆ, ಲಿಫ್ಟ್ ಬಾಗಿಲು ತೆರೆದಾಗ, ಇಬ್ಬರು ಪುರುಷರು ಒಳಗೆ ಪ್ರವೇಶಿಸಿ ಹುಡುಗಿಯರನ್ನು ಅಪಹರಿಸಲು ಪ್ರಯತ್ನಿಸುತ್ತಾರೆ. ಹುಡುಗಿಯರು ಸಹ ಈ ಸಮಯದಲ್ಲಿ ಅವರನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಹುಡುಗಿಯರು ಪ್ರಜ್ಞೆ ತಪ್ಪಿದ ನಂತರ, ಇಬ್ಬರು ಪುರುಷರು ಅವರನ್ನು ತಮ್ಮ ಭುಜಗಳ ಮೇಲೆ ಎತ್ತಿ ಕರೆದುಕೊಂಡು ಹೋಗುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೀಗೆ ಹಂಚಿಕೊಳ್ಳಲಾದಮ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೊಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಈಜಿಪ್ಟ್ ಮೂಲದ ಮಾಧ್ಯಮ ಸಂಸ್ಥೆ  ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ 21 ಡಿಸೆಂಬರ್ 2023 ರಂದು ಅಪ್ಲೋಡ್ ಮಾಡಿದ ವಿಡಿಯೋ ಲಭ್ಯವಾಗಿದೆ.

Fact Check: ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯ ಎಂದು ಈಜಿಪ್ಟ್ ವೀಡಿಯೋ ವೈರಲ್
ಈಜಿಪ್ಟ್ ರಾಜಧಾನಿ ಕೈರೋದ ನಾಸ್ಟ್ರಾ ಸಿಟಿಯಲ್ಲಿ ಈ ಘಟನೆ ನಡೆದಿದೆ ಎಂದು ವಿಡಿಯೋ ಶೀರ್ಷಿಕೆಯಲ್ಲಿ ಹೇಳಲಾಗಿದೆ. ವಿಡಿಯೋದಲ್ಲಿ ಕಂಡುಬರುವ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬಾತ ಹುಡಯಗಿಯರ ತಂದೆಯೇ ಆಗಿದ್ದು ಸಹಚರನೊಂದಿಗೆ ಅಪಹರಣ ನಡೆಸಿದ್ದಾನೆ. ಅಪಹರಣ ಬಳಿಕ ಆ ಹೆಣ್ಮಕ್ಕಳೊಂದಿಗೆ ತಂದೆ ದೇಶದಿಂದ ಪರಾರಿಯಾಗಿದ್ದಾನೆ. ಈ ಘಟನೆ ಬಳಿಕ  ಬಾಲಕಿಯರ ತಾಯಿ ನಾಸ್ಟ್ರಾ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮತ್ತಷ್ಟು ಮಾಹಿಗಾಗಿ ಸರ್ಚ್ ಮಾಡಿದಾಗ 2023 ರ ಡಿಸೆಂಬರ್ 23 ರಂದು ಅಲ್-ಅರೇಬಿಯಾ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ. ಕೈರೋದಲ್ಲಿ ವಾಸಿಸುವ ಮಹಿಳೆಯೊಬ್ಬರು 2022 ರಲ್ಲಿ ವಿಚ್ಛೇದನ ಪಡೆದಿದ್ದಾರೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಚ್ಛೇದನದ ನಂತರ, ಮಹಿಳೆಯ ಮಾಜಿ ಪತಿ ತನ್ನ ಸಹಚರರ ಸಹಾಯದಿಂದ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಅಪಹರಿಸಲು ಪ್ರಯತ್ನಿಸಿ ಮಕ್ಕಳೊಂದಿಗೆ ದೇಶದಿಂದ ಪರಾರಿಯಾಗಿದ್ದಾನೆ,  ಘಟನೆ ನಡೆದ ನಂತರ ದೂರು ದಾಖಲಿಸಿಕೊಂಡ ಪೊಲೀಸರು ಅಪಹರಣದ ರೂವಾರಿ ಮೊದಲ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Fact Check: ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯ ಎಂದು ಈಜಿಪ್ಟ್ ವೀಡಿಯೋ ವೈರಲ್

ಈ ನಿಟ್ಟಿನಲ್ಲಿ ಈಜಿಪ್ಟ್ನ ಆಂತರಿಕ ಸಚಿವಾಲಯವು 2023 ರ ಡಿಸೆಂಬರ್ 20 ರಂದು ಮಾಡಿದ ಟ್ವೀಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಟ್ವೀಟ್ ನಲ್ಲಿ ನೀಡಲಾಗಿದೆ. ಈ ಘಟನೆ ಡಿಸೆಂಬರ್ 13, 2023 ರಂದು ನಡೆದಿದೆ ಎಂದು ಟ್ವೀಟ್ನಲ್ಲಿ ವರದಿಯಾಗಿದೆ. ಈ ಪ್ರಕರಣದಲ್ಲಿ, ತಂದೆಯೊಬ್ಬ ತನ್ನ ಹೆಂಡತಿಯಿಂದ ವಿಚ್ಛೇದನ ಪಡೆದ ನಂತರ ಅವಳೊಂದಿಗೆ ವಾಸಿಸುತ್ತಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಅಪಹರಿಸಿದ್ದಾನೆ ಎಂದಿದೆ.

Fact Check: ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯ ಎಂದು ಈಜಿಪ್ಟ್ ವೀಡಿಯೋ ವೈರಲ್
ಈಜಿಪ್ಟ್ ಆಂತರಿಕ ಸಚಿವಾಲಯದ ಹೇಳಿಕೆ

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಪೋಸ್ಟ್‌ಗೆ ಸಂಬಂಧಪಟ್ಟಂತೆ ವಿಡಿಯೋ ಬೆಂಗಳೂರಿಗೆ ಸಂಬಂಧಿಸಿದ್ದಲ್ಲ. ಬದಲಾಗಿ ಈಜಿಪ್ಟ್ ರಾಜಧಾನಿ ಕೈರೋದಿಂದ ಬಂದಿದೆ ಎಂಬುದು ಸ್ಪಷ್ಟವಾಗಿದೆ. ಈ ಸಂಬಂಧವಿಲ್ಲದ ವಿಡಿಯೋವನ್ನು ಹಂಚಿಕೊಂಡ ಸಾಮಾಜಿಕ ಮಧ್ಯಮಗಳ ಬಳಕೆದಾರರು ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎಂದು ಕೋಮು ನಿರೂಪಣೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಡಾ.ರಾಜ್‌ಕುಮಾರ್ ಮತ್ತು ಇಂದಿರಾ ಗಾಂಧಿ ಜೊತೆ ನರೇಂದ್ರ ಮೋದಿ ಚಿತ್ರ! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights