ಪೆಗಾಸಸ್ ಪರಿಣಾಮ? ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್‌ ಬಳಕೆಗೆ ಮಾರ್ಗಸೂಚಿ ನೀಡಿದ ಮಹಾ ಸರ್ಕಾರ!

ಮಹಾರಾಷ್ಟ್ರ ಸರ್ಕಾರದ ಜೆನೆರಲ್‌ ಅಡ್ಮಿನಿಸ್ಟ್ರೇಷನ್‌ ಡಿಪಾರ್ಟ್‌ಮೆಂಟ್‌ಯು ರಾಜ್ಯದ ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರಿಗೆ ಕಚೇರಿಗಳಲ್ಲಿ ಸೆಲ್ ಫೋನ್ ಬಳಕೆಯನ್ನು ಕಡಿಮೆಗೊಳಿಸುವಂತೆ ಮತ್ತು ಅಧಿಕೃತ ಲ್ಯಾಂಡ್‌ಲೈನ್ ಬಳಕೆಗಾಗಿ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಮೊಬೈಲ್‌ನಲ್ಲಿ ಮಾತನಾಡುವಾಗ ಸಭ್ಯ ಭಾಷೆಯ ಬಳಕೆ ಮತ್ತು ಇತರರ ಉಪಸ್ಥಿತಿಯ ಬಗ್ಗೆ ಗಮನಗೊಡುವುದೂ ಮುಖ್ಯವೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

“ಮೊಬೈಲ್ ಫೋನ್‌ನಲ್ಲಿ ಮಾತನಾಡುವಾಗ, ಮೃದು ಧ್ವನಿಯಲ್ಲಿ ಮಾತನಾಡಬೇಕು, ವಾದ ಮಾಡಬಾರದು ಮತ್ತು ಅಸಂವಿಧಾನಿಕ ಭಾಷೆಯನ್ನು ಬಳಸಬಾರದು” ಎಂದು ಮಾರ್ಗಸೂಚಿಯಲ್ಲಿ ತಿಳಿಸಿರುವುದಾಗಿ ಇಲಾಖೆಯ ಪತ್ರಿಕಾ ಪ್ರಕಟಣೆ ಹೇಳಿದೆ.

ಇದಲ್ಲದೆ, ಅಧಿಕೃತ ಕೆಲಸಕ್ಕೆ ಸಂಬಂಧಿಸಿದಂತೆ ಪಠ್ಯ ಸಂದೇಶಗಳನ್ನು ಬಳಸಲು ಅಧಿಕಾರಿಗಳಿಗೆ / ಉದ್ಯೋಗಿಗಳಿಗೆ ಸೂಚನೆ ನೀಡಲಾಗಿದೆ. ಕಚೇರಿ ಬಳಕೆಗಾಗಿ ಸಾಮಾಜಿಕ ಮಾಧ್ಯಮವನ್ನು ಬಳಸುವಾಗ ಸಮಯ ಮತ್ತು ಭಾಷೆಯತ್ತ ಗಮನಹರಿಸಲು ತಿಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಭಾರತ್ ಬಯೋಟೆಕ್‌ನ ಕೊವಾಕ್ಸಿನ್‌ ಲಸಿಕೆಯ ವೈದ್ಯಕೀಯ ಪ್ರಯೋಗವನ್ನು ರದ್ದುಗೊಳಿಸಿದ ಬ್ರೆಜಿಲ್!

ಹೆಚ್ಚುವರಿಯಾಗಿ, ಅಧಿಕಾರಿಗಳು / ನೌಕರರು ಮತ್ತೊಂದು ಕರೆಯಲ್ಲಿ ಕಾರ್ಯನಿರತವಾಗಿದ್ದಾಗ ಪ್ರತಿನಿಧಿಗಳು / ಹಿರಿಯ ಅಧಿಕಾರಿಗಳು ಕರೆ ಮಾಡಿದರೆ ತ್ವರಿತವಾಗಿ ಸ್ಪಂದಿಸುವಂತೆ ಸೂಚನೆ ನೀಡಲಾಗಿದೆ.

ಸರ್ಕಾರಿ ಕಚೇರಿಗಳ ವರ್ಚಸ್ಸಿಗೆ ಕಳಂಕವಾಗದಂತೆ ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದೆ. ಎಲ್ಲಾ ಉದ್ಯೋಗಿಗಳು ಈ ನಿಯಮಾವಳಿಗಳನ್ನು ಅನುಸರಿಸಲು ಬದ್ಧರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳ ಬಳಕೆಯ ಹೆಚ್ಚಳದಿಂದಾಗಿ, ಸರ್ಕಾರಿ ಕಚೇರಿಗಳಲ್ಲಿ ಸಂವಹನ ಸುಲಭ ಮತ್ತು ಅನುಕೂಲಕರ ಸಾಧನವಾಗಿ ಬಳಸುವುದು ಒಂದು ಸಮಸ್ಯೆಯಾಗಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಆಕ್ಸಿಜನ್ ಸಾವುಗಳ ಬಗ್ಗೆ ಕೇಂದ್ರ ಸರ್ಕಾರ ಅಂಕಿಅಂಶವನ್ನೇ ಕೇಳಿಲ್ಲ: ಛತ್ತಿಸ್‌ಘಡ ಆರೋಗ್ಯ ಸಚಿವ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.