ಭಾರತ್ ಬಯೋಟೆಕ್‌ನ ಕೊವಾಕ್ಸಿನ್‌ ಲಸಿಕೆಯ ವೈದ್ಯಕೀಯ ಪ್ರಯೋಗವನ್ನು ರದ್ದುಗೊಳಿಸಿದ ಬ್ರೆಜಿಲ್!

ಭಾರತ ಮೂಲದ ಭಾರತ್ ಬಯೋಟೆಕ್‌ ಉತ್ಪಾದಿಸಿರುವ ಕೊರೊನಾ ಲಸಿಕೆ ಕೊವಾಕ್ಸಿನ್‌ನ ವೈದ್ಯಕೀಯ ಪ್ರಯೋಗವನ್ನು ಬ್ರೆಜಿಲ್‌ ಅಮನತುಗೊಳಿಸಿದೆ. ಭಾರತ್ ಬಯೋಟೆಕ್‌ ಕಂಪನಿಯು ಬ್ರೆಜಿಲ್‌ನ ಕಂಪನಿಯ ಪಾಲುದಾರ ಕಂಪನಿಯೊಂದಿಗಿನ ಒಪ್ಪಂದವನ್ನು ಕಡಿತಗೊಳಿಸಿದ ನಂತರ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ದಕ್ಷಿಣ ಅಮೆರಿಕಾದ ದೇಶದ ಆರೋಗ್ಯ ನಿಯಂತ್ರಕ ತಿಳಿಸಿದೆ.

ಭಾರತ್ ಬಯೋಟೆಕ್ ಕಂಪನಿಯು ಬ್ರೆಜಿಲ್ ಮಾರುಕಟ್ಟೆಯಲ್ಲಿ ಕೊವಾಕ್ಸಿನ್‌ ಲಸಿಕೆಯನ್ನು ಬಿಡುಗಡೆ ಮಾಡಲು ಪ್ರೆಸಿಸಾ ಮೆಡಿಸಿಮೆಂಟೋಸ್ ಮತ್ತು ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ LL.C ಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಒಪ್ಪಂದವನ್ನು ಕಡಿತಗೊಳಿಸಿದೆ.

ಹೀಗಾಗಿ, 20 ಮಿಲಿಯನ್ ಡೋಸ್ ಲಸಿಕೆಗಳನ್ನು ಸರಬರಾಜು ಮಾಡಲು ಬ್ರೆಜಿಲ್ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದವು ವಿವಾದಕ್ಕೆ ಸಿಲುಕಿತ್ತು. ನಂತರ, ಆ ದೇಶದ ಅಧಿಕಾರಿಗಳ ತನಿಖೆಗೆ ಒತ್ತಾಯಿಸಿದ ಬಳಿಕ ಭಾರತ್ ಬಯೋಟೆಕ್‌ನೊಂದಿಗಿನ ಒಪ್ಪಂದವನ್ನು ಹಿಂಪಡೆದುಕೊಂಡಿದೆ.

ಪ್ರೆಸಿಸಾ ಮೆಡಿಕಮೆಂಟೋಸ್ ಬ್ರೆಜಿಲ್‌ನಲ್ಲಿ ಭಾರತ್ ಬಯೋಟೆಕ್ಸ್ ಪಾಲುದಾರರಾಗಿದ್ದು, ಬ್ರೆಜಿಲ್‌ನಲ್ಲಿ ಲಸಿಕೆಗೆ ಪರವಾನಗಿ, ವಿತರಣೆ, ವಿಮೆ ಮತ್ತು ಮೂರನೇ ಹಂತದ ವೈದ್ಯಕೀಯ ಪ್ರಯೋಗಗಳ ನಡಾವಳಿಕೆಗಳೊಂದಿಗೆ ಸಹಕಾರ, ಮಾರ್ಗದರ್ಶನ ಮತ್ತು ಬೆಂಬಲವನ್ನು ಕಂಪನಿ ಒದಗಿಸಿತ್ತು.

2 ಕೋಟಿ ರೂ. ಮೌಲ್ಯದ ಕೋವಿಡ್ ಲಸಿಕೆ ಸರಬರಾಜು ಮಾಡುವ ಬಗ್ಗೆ ಭಾರತ್ ಬಯೋಟೆಕ್ ಮತ್ತು ಬ್ರೆಜಿಲ್ ಸರ್ಕಾರದ ನಡುವಿನ “ಭಾರಿ” ವಿವಾದ ಎದುರಾಗಿದೆ.

ಇದನ್ನೂ ಓದಿ: ಕೊರೊನಾ: ಮುಂದಿನವಾರ 2-6 ವರ್ಷದ ಮಕ್ಕಳಿಗೆ ಕೋವಾಕ್ಸಿನ್‌ 2ನೇ ಡೋಸ್‌ ಪ್ರಯೋಗ ಆರಂಭ!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights