ಕೊರೊನಾ: ಮುಂದಿನವಾರ 2-6 ವರ್ಷದ ಮಕ್ಕಳಿಗೆ ಕೋವಾಕ್ಸಿನ್‌ 2ನೇ ಡೋಸ್‌ ಪ್ರಯೋಗ ಆರಂಭ!

ಕೊರೊನಾ ವಿರುದ್ದ 2-6 ವರ್ಷದ ಮಕ್ಕಳಿಗೆ ನೀಡಲಾಗುತ್ತಿರುವ ಭಾರತ್‌ ಬಯೋಟಿಕ್‌ ಉತ್ಪಾದಿಸಿರುವ ಕೋವಾಕ್ಸಿನ್‌ನ ಎರಡನೇ ಡೋಸ್‌ನ ಪ್ರಯೋಗವನ್ನು ಮುಂದಿನವಾರ ಆರಂಭಿಸುವ ಸಾಧ್ಯತೆಯಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.

ಮೂಲಗಳ ಪ್ರಕಾರ, ಈಗಾಗಲೇ ಈ ವಯಸ್ಸಿನ ಮಕ್ಕಳು ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ 6-12 ವರ್ಷದ ಮಕ್ಕಳಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೋವಾಕ್ಸಿನ್ ನ ಎರಡನೇ ಡೋಸ್‌ಅನ್ನು  ನೀಡಲಾಗಿದೆ ಎಂದು ತಿಳಿದು ಬಂದಿದೆ.

ಏಮ್ಸ್, ದೆಹಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡುವ ಪ್ರಯೋಗ ಕೇಂದ್ರಗಳಲ್ಲಿ ಒಂದಾಗಿದೆ.

ಎಲ್ಲಾ ವಯೋಮಾನದವರಿಗೂ ಲಸಿಕೆ ನೀಡಲು ಪ್ರಯೋಗಗಳು ಪೂರ್ಣಗೊಂಡ ನಂತರ ಒಂದು ತಿಂಗಳಲ್ಲಿ ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳು ಬರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಮಕ್ಕಳನ್ನು ವಯಸ್ಸಿನ ಆಧಾರದ ಮೇಲೆ ವಿಂಗಡಿಸಿ, ಮೂರು ಹಂತಗಳಲ್ಲಿ ಪ್ರಯೋಗವನ್ನು ನಡೆಸಲಾಗುತ್ತದೆ. ಮೊದಲ ಪ್ರಯೋಗವನ್ನು 12-18 ವರ್ಷ ವಯಸ್ಸಿನವರಲ್ಲಿ ಪ್ರಾರಂಭಿಸಲಾಗಿತ್ತು. 2ನೇ ಹಂತದಲ್ಲಿ 6-12 ವರ್ಷಗಳ ಮಕ್ಕಳ ಮೇಲೆ ನಡೆಸಿದ್ದು, ಇದೀಗ 3ನೇ ಹಂತದಲ್ಲಿ  2-6 ವರ್ಷ ವಯಸ್ಸಿನವರಿಗೆ ಪ್ರಯೋಗಗಳು ನಡೆಯುತ್ತಿವೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ COVID-19 ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಆಮ್ಲಜನಕ ಕೊರತೆ: ಕೇಂದ್ರ ಆರೋಗ್ಯ ಸಚಿವರ ವಿರುದ್ದ ನ್ಯಾಯಾಲಯದಲ್ಲಿ ಅರ್ಜಿ!

Spread the love

Leave a Reply

Your email address will not be published. Required fields are marked *