ಕಮಾಂಡೋ ತಂದೆಯನ್ನು ಮಾವೋವಾದಿಗಳಿಂದ ಕರೆತರುವಂತೆ ಕಣ್ಣೀರೀಟ್ಟ 5 ವರ್ಷದ ಮಗಳು!

ಕೋಬ್ರಾ ಕಮಾಂಡೋ ತಂದೆಯನ್ನು ಮಾವೋವಾದಿಗಳಿಂದ ಕರೆತರುವಂತೆ 5 ವರ್ಷದ ಮಗಳು ಕಣ್ಣೀರೀಟ್ಟ ಕರುಣಾಜನಕ ಘಟನೆ ನಡೆದಿದೆ. ಕಮಾಂಡೋನ ಐದು ವರ್ಷದ ಮಗಳು “ದಯವಿಟ್ಟು, ನನ್ನ ತಂದೆಯನ್ನು ಬಿಡುಗಡೆ ಮಾಡಿ” ಎಂದು ಕಣ್ಣೀರು ಒರೆಸುತ್ತಾ ವೀಡಿಯೊದಲ್ಲಿ ಮನವಿ ಮಾಡಿದ್ದಾಳೆ.

ಕೋಬ್ರಾ ಕಮಾಂಡೋ ರಾಕೇಶ್ವರ ಸಿಂಗ್ ಮಿನ್ಹಾಸ್ ಹೊಂಚುದಾಳಿಯ ನಂತರ ಕುಟುಂಬದ ಸಂಪರ್ಕಕ್ಕೆ ಸಿಕ್ಕಿಲ್ಲ. ಹೊಂಚುದಾಳಿಯಲ್ಲಿ 22 ಭದ್ರತಾ ಪಡೆಗಳ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ “ನಾವು ದಾಳಿಯ ಬಗ್ಗೆ ತಿಳಿದುಕೊಂಡಿದ್ದೇವೆ ಮತ್ತು ಸುದ್ದಿ ಚಾನೆಲ್‌ಗಳ ಹೇಳಿಕೆಯಲ್ಲಿ ಅವರು ನಾಪತ್ತೆಯಾಗಿದ್ದಾರೆ. ಘಟನೆಯ ಬಗ್ಗೆ ಸರ್ಕಾರದಿಂದ ಅಥವಾ ಸಿಆರ್‌ಪಿಎಫ್‌ನಿಂದ ಯಾರೂ ನಮಗೆ ಮಾಹಿತಿ ನೀಡಿಲ್ಲ” ಎಂದು ಕಮಾಂಡೋ ಅವರ ಪತ್ನಿ ಮೀನು ಜಮ್ಮುವಿನ ತಮ್ಮ ಮನೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೀನು ಅವರು ಜಮ್ಮುವಿನ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಕೇಂದ್ರ ಕಚೇರಿಯನ್ನು ಸಂಪರ್ಕಿಸಿದಾಗ “ನಮ್ಮೊಂದಿಗೆ ಹಂಚಿಕೊಳ್ಳಲು ಏನೂ ಇಲ್ಲ. ನಾವು ಸ್ಪಷ್ಟವಾದ ಚಿತ್ರವನ್ನು ಪಡೆದ ನಂತರ ನಿಮ್ಮ ಬಳಿಗೆ ಬರುತ್ತೇವೆ “ಎಂದು ಹೇಳಿದ್ದಾರೆ ಎಂದು ಮೀನು ಸುದ್ದಿಗಾರರಿಗೆ ತಿಳಿಸಿದ್ದಾರೆ.

“ನನ್ನ ಪತಿ ಕಳೆದ 10 ವರ್ಷಗಳಿಂದ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ ಮತ್ತು ಈಗ ಅವನು ನಮ್ಮ ಬಳಿಗೆ ಸುರಕ್ಷಿತವಾಗಿ ಮರಳುವಂತೆ ನೋಡಿಕೊಳ್ಳುವುದು ಸರ್ಕಾರದ ಜವಬ್ದಾರಿ” ಎಂದು ಪತ್ನಿ ಮೀನು ನೋವನ್ನು ಹಂಚಿಕೊಂಡಿದ್ದಾರೆ.

ಈ ವಿಷಯವನ್ನು ಕೇಂದ್ರದೊಂದಿಗೆ ಕೈಗೆತ್ತಿಕೊಳ್ಳುವಂತೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಕೋರಿದ್ದು, ತನ್ನ ಪತಿಯ ಸುರಕ್ಷಿತ ಮರಳುವಿಕೆಗಾಗಿ ಪ್ರಧಾನಿ ಮತ್ತು ಗೃಹ ಸಚಿವರನ್ನು ಕೇಳಿಕೊಳ್ಳುತ್ತೇನೆ ಎಂದು ಮೀನು ಮನವಿ ಮಾಡಿಕೊಂಡಿದ್ದಾರೆ.

ಕಮಾಂಡೋವನ್ನು ಮಾವೋವಾದಿಗಳು ಅಪಹರಿಸಿರಬಹುದು ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. “ಕಾಣೆಯಾದ ಸೈನಿಕನನ್ನು ಹುಡುಕಾಟ ಮಾಡಬೇಕು. ಆತನನ್ನು ನಕ್ಸಲರು ಅಪಹರಿಸಿದ್ದಾರೆ ಎಂದು ನಾವು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇವೆ. ಇದು ನಿಜ ಎಂಬ ಸಾಧ್ಯತೆಯಿದೆ, ನಾವು ಮಾಹಿತಿಯನ್ನು ಪರಿಶೀಲಿಸುತ್ತೇವೆ. ಅವರನ್ನು ಸುರಕ್ಷಿತವಾಗಿ ಮರಳಿ ಪಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ , “ಬಸ್ತಾರ್ ಇನ್ಸ್ಪೆಕ್ಟರ್ ಜನರಲ್ ಪಿ ಸುಂದರರಾಜ್ ಎನ್ಡಿಟಿವಿಗೆ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights