ಪ್ರತಿಭಟನಾನಿರತ ರೈತರು ಚಿಕನ್ ತಿನ್ನುತ್ತಿರುವುದರಿಂದ ಹಕ್ಕಿಜ್ವರ ಹರಡುತ್ತಿದೆ: ಬಿಜೆಪಿ ಶಾಸಕ

ದೇಶದಲ್ಲಿ ಹಕ್ಕಿಜ್ವರ ಹರಡಲು ದೆಹಲಿ ಗಡಿಯಲ್ಲಿ ಪ್ರತಿಭಟನೆ  ನಡೆಸುತ್ತಿರುವ ರೈತರೇ ಕಾರಣವಿರಬಹುದು. ಅವರು ಅಲ್ಲಿ ಚಿಕನ್‌ ಸೇವಿಸುತ್ತಿರುವುದರಿಂದಾಗಿ ಹಕ್ಕಿ ಜ್ವರ ಹರಡುತ್ತಿರಬಹುದು ಎಂದು ರಾಜಸ್ಥಾನದ ಬಿಜೆಪಿ ಶಾಸಕ ಮದನ್ ದಿಲ್ವಾರ್‌ ಸಂಶಯ ವ್ಯಕ್ತಪಡಿಸಿದ್ದಾರೆ.

ಸೋ ಕಾಲ್ಡ್ ರೈತರಿಗೆ ದೇಶದ ಬಗ್ಗೆ ಆತಂಕವಿಲ್ಲ, ಸವಿಯಾದ ಭಕ್ಷ್ಯಗಳ ಹೊರತಾಗಿ ಲಕ್ಸುರಿಯಾಗಿ ಪಿಕ್ ನಿಕ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಸೋ ಕಾಲ್ಡ್ ರೈತರು ಯಾವುದೇ ಚಳವಳಿಯಲ್ಲಿ ತೊಡಗಿಸಿಕೊಂಡಿಲ್ಲ. ಆದರೆ, ಚಿಕನ್ ಬಿರಿಯಾನಿ, ಡ್ರೈ ಪ್ರೂಟ್ಸ್ ತಿನ್ನುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದ ಹಕ್ಕಿ ಜ್ವರ ಹರಡಿರುವ ಶಂಕೆಯಿಂದ ಎಂದು ವಿಡಿಯೋವನ್ನು ಟ್ವೀಟ್‌ ಮಾಡಿದ್ದಾರೆ.

ಪ್ರತಿಭಟನಾನಿರತ ರೈತರ ಮಧ್ಯೆ ಕೆಲವರು ಉಗ್ರರು, ದರೋಡೆಕೋರರು, ಕಳ್ಳ ಕಾಕರು, ರೈತ ವಿರೋಧಿಗಳಿರುವ ಸಾಧ್ಯತೆಯಿದೆ. ಇವರೆಲ್ಲರೂ ದೇಶ ಹಾಳಾಗುವುದನ್ನು ಬಯಸಿದ್ದಾರೆ ಎಂದು ಬಿಜೆಪಿ ಶಾಸಕ ಆರೋಪಿಸಿದ್ದಾರೆ.

ಒಂದು ವೇಳೆ ರೈತರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸದಿದ್ದರೆ ಹಕ್ಕಿಜ್ವರ ದೇಶದ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಲಿದೆ ಎಂದು ದಿಲ್ವಾರ್ ಹೇಳಿದ್ದಾರೆ.

ಸಾಕಷ್ಟು ಜನರು ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯು ರೈತರ ಮೇಲೆ ಯಾವ ತರಹದ ಧೋರಣೆ ಹೊಂದಿದೆ ಎಂಬುದು ಇದರಿಂದ ತಿಳಿಯುತ್ತದೆ. ಬಿಜೆಪಿ ರೈತ ವಿರೋಧಿಯಾಗಿದೆ ಎಂದು ಟೀಕಿಸಿದ್ದಾರೆ.


ಇದನ್ನೂ ಓದಿ: ಅಂಬಾನಿ ವಿರುದ್ದ ಸಿಡಿದ ದರ್ಶನ್: ಥಿಯೇಟರ್ ಓಪನ್ ಮಾಡದ ಹಿಂದಿದೆ ದೊಡ್ಡ ಹಗರಣ!

Spread the love

Leave a Reply

Your email address will not be published. Required fields are marked *