ಬೆಂಗಳೂರಿನಲ್ಲಿ ನಕಲಿ ಛಾಪಾ ಕಾಗದ ಹಾಗೂ ಪ್ರಾಂಕಿಂಗ್: ಎಫ್ಐಆರ್ ದಾಖಲು

ಬೆಂಗಳೂರು ನಗರದ ಹಲವು ಉಪನೊಂದಣಾಧಿಕಾರಿ ಕಛೇರಿ ಸೀಲ್ ಹಾಗು ಸಹಿ ಬಳಸಿ ನಕಲಿ ಛಾಪಾಕಾಗದ ಹಾಗೂ ಪ್ರಾಂಕಿಂಗ್ ಮಾಡಿರುವ ಬಗ್ಗೆ ಹಲಸೂರು ಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕೆಂಗೇರಿ,ಯಲಹಂಕ,ಶಿವಾಜಿನಗರ ಉಪ ನೊಂದಣಾಧಿಕಾರಿಗಳ ಕಛೇರಿಗಳಲ್ಲಿನ ಉಬ್ಬಚ್ಚು ಯಂತ್ರ, ಕಛೇರಿಗಳ ಮುದ್ರೆ ಹಾಗು ಸಹಿ ಬಳಸಿ ನಕಲಿ ಛಾಪಾಕಾಗದ ಸೃಷ್ಠಿಸಿದ್ದ ಬಗ್ಗೆ ಕಂದಾಯ ಇಲಾಖೆಯ ಐಜಿಆರ್ ಕೆ.ಪಿ.ಮೋಹನ್ ರಾಜ್ ಆದೇಶದ ಮೇರೆಗೆ ಗಾಂಧಿನಗರ ಉಪನೊಂದಣಾಧಿಕಾರಿ ಕೃಷ್ಣ ನಾಯಕ್ ಅವರು ದೂರು ದಾಖಲಿಸಿದ್ದಾರೆ.

ಗಾಂಧಿನಗರ ಉಪನೊಂದಣಾಧಿಕಾರಿ ಕಛೇರಿಯ ಪಿ.ಬಿ.ನಂ 6924 ಸಂಖ್ಯೆಯನ್ನು ಬಳಸಿ ನಕಲಿ ಛಾಪಾಕಾಗದ ಸೃಷ್ಟಿಸಲಾಗಿತ್ತು..ಇನ್ನು ಇದೇ ಪಿ.ಬಿ.ನಂಬರ್ ಬಳಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿರೋ ಬಗ್ಗೆ ಹಲವಾರು ಪ್ರಕರಣಗಳು ಪೋಲೀಸ್ ಠಾಣೆಗಳಲ್ಲಿ ದಾಖಲಾಗಿದ್ದು ಇದಕ್ಕಾಗಿ ಪ್ರತ್ಯೇಕ ತನಿಖೆಯನ್ನ ಮಾಡಲಾಗಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಐಜಿಆರ್ ಸರ್ಕಾರದ ವತಿಯಿಂದ ತಪ್ಪಿತಸ್ಥರ ವಿರುದ್ಧ ದೂರುದಾಖಲಿಸಿ ಕ್ರಮಕೈಗೊಳ್ಳುವಂತೆ ಗಾಂಧಿನಗರ ಉಪನೊಂದಣಾಧಿಕಾರಿಗೆ ಹೇಳಿದ್ದಾರೆ..ಐಜಿಆರ್ ಆದೇಶದ ಮೇರೆಗೆ ಹಲಸೂರು ಠಾಣೆಯಲ್ಲಿ ತಪ್ಪಿತಸ್ಥರ ವಿರುದ್ಧ ದಾಖಲೆಗಳ ಸಮೇತ ದೂರುಕೊಟ್ಟರು ಎಫ್ಐಆರ್ ನಲ್ಲಿ ಅಪರಿಚಿತರು ಎಂದು ದೂರು ದಾಖಲಿಸಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.


ಇದನ್ನೂ ಓದಿ: ಯುವರಾಜ ಹಣ ಮಾಡಿದ್ದು ಹಿಂದಿನ ಸರ್ಕಾರದಲ್ಲಿ, ನಮ್ಮ ಸರ್ಕಾರ ಆತನನ್ನು ಬಂಧಿಸಿದೆ’- ಡಾ.ಕೆ ಸುಧಾಕರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights