ಆರ್ಥಿಕ ಪ್ಯಾಕೇಜ್ ವಿವರಿಸಿದ ವಿತ್ತ ಸಚಿವೆ : ‘ಮತ್ಸ್ಯ ಸಂಪದ’ಕ್ಕೆ 20 ಸಾವಿರ ಕೋಟಿ ಸಾಲ

ಮೇ 12 ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಜನತೆಗೆ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ನ್ನು ಘೋಷಣೆ ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಪ್ರತೀ ವರ್ಗಕ್ಕೂ ಪ್ಯಾಕೇಜ್ ವಿವರವನ್ನು ವಿವರಿಸುತ್ತಿದ್ದಾರೆ ವಿತ್ತ ಸಚಿವೆ. ಇಂದು ಕೂಡ ಕೇಂದ್ರದ ಆರ್ಥಿಕ ಪ್ಯಾಕೇಜ್ ನ ವಿವರಣೆ ನೀಡಿದ್ದು, ಮತ್ಸ್ಯ ಸಂಪದಕ್ಕೆ 20 ಸಾವಿರ ಕೋಟಿ ಸಾಲ ಘೋಷಿಸಿದ್ದಾರೆ.

ಹೌದು…. ಆರ್ಥಿಕ ಪುನರ್ಚೇತನವನ್ನು ಮಾಡುವಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಮತ್ಸ್ಯ ಸಂಪದಕ್ಕೆ 20 ಸಾವಿರ ಕೋಟಿ ಸಾಲ ಘೋಷಿಸಿದ್ದಾರೆ.  ‘ಮೀನುಗಾರಿಕೆಗೆ ಹೊಸ ಬೋಟ್, ಉಪಕರಣಗಳ ಖರೀದಿಗೆ ಸಾಲ 20 ಸಾವಿರ ಕೋಟಿ ಸಾಲ ನೀಡಲಾಗುತ್ತದೆ.  ಸಣ್ಣ ಆಹಾರ ಉತ್ಪನ್ನಗಳಿಗೆ 10 ಸಾವಿರ ಕೋಟಿ ಮೀಸಲು.  53 ಕೋಟಿ ಜಾನುವಾರಗಳಿಗೆ ಲಸಿಕೆ ಹಾಕಲಾಗುವದು’ ಆರ್ಥಿಕ ಪ್ಯಾಕೇಜ್ ನಲ್ಲಿ ಘೋಷಿಸಿದ್ದಾರೆ.

ಜೊತೆಗೆ ಔಷಧಿ ಸಸ್ಯಗಳ ಉತ್ತೇಜನೆಗೆ 4 ಸಾವಿ ಕೋಟಿ ಘೋಷಿಸಲಾಗಿದೆ. ಗಿಡಮೂಲಿಕೆಗಳ ಉಳಿಮೆ ಮಾಡಲು ನೆರವು ನೀಡಲಾಗಿದೆ. ಇದರಿಂದ 5 ಸಾವಿರ ಕೋಟಿ ಆದಾಯದ ನಿರೀಕ್ಷೆ ಕೇಂದ್ರಕ್ಕಿದೆ. ಜೇನು ಸಾಗಾಣಿಕೆಗೆ 500 ಕೋಟಿ ರೂ. ಮೀಸಲು, ಜೇನಿನಿಂದ ಉತ್ಪಾದನೆಯಾಗುವ ಮೇಣ ರಫ್ತು ಕಡಿತ,  ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಸೃಷ್ಟಿ ಸಾಧ್ಯತೆ’ ಇದೆ.

ಮಾತ್ರವಲ್ಲದೇ ‘ ಈರುಳ್ಳಿ, ಟಾಮೋಟೋ, ಆಲುಗಡ್ಡೆ ಸಾಗಾಣಿಕೆಗೆ ಮತ್ತು ಸಂಸ್ಕರಣೆಗೆ 500 ಕೋಟಿ, ಇದೇ ಉತ್ಪನ್ನಗಳ ಸಾಗಾಟಕ್ಕೆ, ಉಗ್ರಾಣಗಳ ಸಂಗ್ರಹಣಕ್ಕೆ 50% ಸಬ್ಸಿಡಿ ನೀಡಲಾಗುವುದು. ಇದು 6 ತಿಂಗಳವರೆಗೂ ಜಾರಿಯಲ್ಲಿದೆ. ಅಗತ್ಯ ಉತ್ಪನ್ನಗಳ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧಾರ ಮಾಡಲಾಗಿದೆ. ತಿದ್ದುಪಡಿ ಮೂಲಕ ರೈತರಿಗೆ ಬೆಂಬಲ ಬೆಲೆ ಒದಗಿಸಲಾಗುತ್ತದೆ. ಎಣ್ಣೆ ಕಾಳುಗಳು, ಬೇಳೆ ಕಾಳುಗಳು, ಈರುಳ್ಳಿ, ಆಲೂಗಡ್ಡೆ ಸಂಗ್ರಹಕ್ಕೆ  ನಿರ್ಬಂಧ ರದ್ದು, ರಾಷ್ಟ್ರೀಯ ವಿಪತ್ತು ದರ ಕುಸಿತ ವೇಳೆ ಮಾತ್ರ ನಿರ್ವಂಧ ರದ್ದು. ಉಳಿದ ದಿನಗಳಲ್ಲಿ ಸಂಗ್ರಹಣೆಗೆ ಇರುವ ನಿರ್ಬಂಧಗಳು ಜಾರಿಗೊಳಿಸಲು ನಿರ್ಧರಿಸಲಾಗಿದೆ.’

ರೈತರು ತಮಗಿಷ್ಟವಾದ ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಎಪಿಎಂಸಿಯಲ್ಲೇ ಮಾರಾಟ ಮಾಡಬೇಕು ಎನ್ನುವ ನಿಯಮವಿಲ್ಲ ಎನ್ನುವುದನ್ನ ಕೇಂದ್ರ ಸ್ಪಷ್ಟಪಡಿಸಿದೆ.

ಈಗಾಗಲೇ ರೈತರು, ವಲಸೆ ಕಾರ್ಮಿಕರಿಗೆ, ಸಣ್ಣ ಕೈಗಾರಿಕೆಗಳಿಗೆ ಹೀಗೆ ನಾನಾ ಕ್ಷೇತ್ರಗಳ ಬಡ ವರ್ಗಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights