‘ಯುವರಾಜ ಹಣ ಮಾಡಿದ್ದು ಹಿಂದಿನ ಸರ್ಕಾರದಲ್ಲಿ, ನಮ್ಮ ಸರ್ಕಾರ ಆತನನ್ನು ಬಂಧಿಸಿದೆ’- ಡಾ.ಕೆ ಸುಧಾಕರ್

ಸಾರ್ವಜನಿಕರ ಬಳಿ ಹಣ ದೋಚಿ ವಂಚಿಸಿದ್ದ ಯುವರಾಜ ಬಗ್ಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಪ್ರತಿಕ್ರಿಸಿದ್ದು ಕಾಂಗ್ರೆಸ್ ಕಾಲೆಳೆದಿದ್ದಾರೆ.

ಯುವರಾಜನೊಂದಿಗೆ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಹೆಸರು ತಳುಕುಹಾಕಿಕೊಳ್ಳುತ್ತಿದ್ದಂತೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಯುವರಾಜನನ್ನು ನಮ್ಮ ಸರ್ಕಾರ ಬಂಧಿಸಿ ಬಯಲಿಗೆಳೆದಿದೆ. ಆದರೆ ಆತ ದುಡ್ಡು ಮಾಡಿದ್ದೆಲ್ಲಾ ಹಿಂದಿನ ಸರ್ಕಾರದಲ್ಲೇ ಎನ್ನುವ ಮೂಲಕ ಸುಧಾಕರ್ ಕೈ ನಾಯಕರನ್ನು ಕೆಣಕಿಸಿದ್ದಾರೆ.

ರಾಜಕಾರಣಿಗಳು ಎಂದ ಮೇಲೆ ಜನರ ಗುಂಪಿನಲ್ಲಿ ಎಲ್ಲರೂ ಬಂದು ಫೋಟೋ ತೆಗೆಸಿಕೊಳ್ಳುತ್ತಾರೆ. ಆಗ ನಾವು ಬೇಡ ಎಂದು ಹೇಳಲು ಆಗುವುದಿಲ್ಲ. ಆದರೆ ಅದನ್ನೇ ಗುರಿಯಾಗಿಸಿಕೊಂಡು ಮಾತನಾಡುವುದು ಸರಿಯಲ್ಲ. ಬಿಜೆಪಿ ನಾಯಕರೊಂದಿಗೆ ಯುವರಾಜ ಫೋಟೋ ತೆಗೆಸಿಕೊಂಡಿರಬಹುದು ಆದರೆ ಅವರೊಂದಿಗೆ ಯಾರೂ ಕೂಡ ಸಂಪರ್ಕದಲ್ಲಿ ಇಲ್ಲ. ಯುವರಾಜ್ ಜೊತೆಗೆ ವ್ಯವಹರಿಸಿದ್ದರೆ ನಾವು ಪ್ರಶ್ನೆ ಮಾಡಬಹುತೇ ಹೊರತು ಫೋಟೋದಿಂದ ನಾವು ಪ್ರಶ್ನಿಸುವುದು ಸರಿಯಲ್ಲ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ಇನ್ನೂ ಕೆಸಿ ವೇಣುಗೋಪಾಲ್ ಜತೆಗೂ ಯುವರಾಜನ ಫೋಟೋ ಇದೆ ಎನ್ನುವ ಪ್ರಶ್ನೆಗೆ ವೇಣುಗೋಪಾಲ್ ಅವರಿಗೆ ಏನ್ ಹೇಳಿದ್ನೋ ಗೊತ್ತಿಲ್ಲ. ಪ್ರಧಾನಿ ಮಾಡಿಸ್ತೀನಿ ಅಂತ ವೇಣುಗೋಪಾಲ್ ಗೆ ಹೇಳಿದ್ದಾನೆನೋ ಎಂದು ಸುಧಾಕರ್ ವ್ಯಂಗ್ಯ ಮಾಡಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ ನಾವು ಈ ಬಗ್ಗೆ ಜಾಗೃತರಾಗಿರಬೇಕು. ಮಹನೀಯರು, ಸಾಧುಗಳು, ಸಂತರು ಇದ್ದಾರೆ ಅಂಥವರ ಹೆಸರಿನಲ್ಲಿ ವೇಷ ಧರಿಸಿ ವಂಚನೆ ಮಾಡುವ ಇವರು ಕ್ರಿಮಿನಲ್ಗಳು, ಇಂಥವರಿಗೆ ಶಿಕ್ಷೆಯಾಗಬೇಕು. ನಮ್ಮ ಸರ್ಕಾರ ಪ್ರಕರಣದ ತನಿಖೆ ನಡೆಸಿ ಇದನ್ನು ಬಯಲಿಗೆಳೆಯಲಿದೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights