ಇಳಿ ವಯಸ್ಸಿನಲ್ಲಿ ಸ್ವಾವಲಂಬಿ ಜೀವನ ಕಟ್ಟಿಕೊಂಡ ಅಜ್ಜಿ : ನೆಟ್ಟಿಗರ ಮನಗೆದ್ದ ವೀಡಿಯೋ..!

ಇಳಿ ವಯಸ್ಸಿನಲ್ಲಿ ಸ್ವಾವಲಂಬಿ ಜೀವನ ಕಟ್ಟಿಕೊಂಡ ಅಜ್ಜಿಯೊಬ್ಬರು ನೆಟ್ಟಿಗರ ಮನಗೆದ್ದಿದ್ದಾರೆ. ಅಜ್ಜಿಯ ಜೀವನೋತ್ಸಾಹ ಕಂಡು ಜನ ಫುಲ್ ಖುಷ್ ಆಗಿದ್ದು ಮಾತ್ರವಲ್ಲದೇ ಅಜ್ಜಿಯ ನೆರವಿಗೂ ಮುಂದೆ ಬಂದಿದ್ದಾರೆ.

ಹೌದು… 80 ರ ಆಸುಪಾಸಿನ ಮಹಿಳೆಯೋರ್ವರು ಅಮೃತಸರ ಲೇಡೀಸ್ ಜ್ಯೂಸ್ ಸ್ಟಾಲ್ ನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಫೇಮಸ್ ಆಗಿದ್ದಾರೆ. ತನ್ನ ಜೀವನೋಪಾಯಕ್ಕಾಗಿ ಜ್ಯೂಸ್ ಸ್ಟಾಲ್ ಅನ್ನು ನಡೆಸುತ್ತಿದ್ದ ಅಜ್ಜಿ ಅಂತರ್ಜಾಲ ಬಳಕೆದಾರರ ಗಮನಸೆಳೆದಿದ್ದಾರೆ. ಇವರು ಫಟಾಫಟ್ ಜ್ಯೂಸ್ ತಯಾರಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು 9 ಮಿಲಿಯನ್ ವೀಕ್ಷಣೆಗಳನ್ನು ಮತ್ತು 915 ಕೆ ಲೈಕ್‌ಗಳನ್ನು ಪಡೆದಿದೆ.

ಈ ಭಾವನಾತ್ಮಕ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಆಹಾರ ಬ್ಲಾಗರ್ ಗೌರವ್ ವಾಸನ್ ಅವರು @youtubeswadofficial ಹ್ಯಾಂಡಲ್ ನಲ್ಲಿ ಹಂಚಿಕೊಂಡಿದ್ದಾರೆ. ಅಮೃತಸರದ ಎಸ್‌ಬಿಐ ಬ್ಯಾಂಕ್ ಎದುರಿನ ರಾಣಿ ಬಾಗ್‌ನಲ್ಲಿ ಈ ಸ್ಟಾಲ್ ಇದೆ. ಅಜ್ಜಿ 30 ಸೆಕೆಂಡುಗಳ ಕ್ಲಿಪ್‌ನಲ್ಲಿ ತಾಜಾ ಮೌಸಂಬಿ (ಸಿಹಿ ನಿಂಬೆ) ರಸವನ್ನು ತಯಾರಿಸುವ ದೃಶ್ಯವಿದೆ. ಅವಳು ನಗುನಗುತ್ತಲೇ ಜನರ ಸೇವೆ ಮಾಡುತ್ತಿರುವುದನ್ನ ಕಂಡು ನೆಟ್ಟಿಗರು ತನ್ನನ್ನು ತಾನು ಉಳಿಸಿಕೊಳ್ಳಲು ಇಂತಹ ವೃದ್ಧಾಪ್ಯದಲ್ಲಿ ಕೆಲಸ ಮಾಡುವ ಬಗ್ಗೆ ಸಾಕಷ್ಟು ಕಾಳಜಿ ತೋರಿಸಿದ್ದಾರೆ.

ಈ ವಿಡಿಯೋ ಅನೇಕ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೋಮಡಿದೆ. ಬಳಕೆದಾರರು ಸ್ಥಳೀಯ ಸರ್ಕಾರಗಳು ಮತ್ತು ಏಜೆನ್ಸಿಗಳು ಮಧ್ಯಪ್ರವೇಶಿಸುವಂತೆ ಮತ್ತು ಆಕೆಯ ಸಹಾಯಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ಅನೇಕರು ಆಕೆಯ ಬ್ಯಾಂಕ್ ಖಾತೆ ಸಂಖ್ಯೆಯ ಬಗ್ಗೆ ವಿಚಾರಿಸಿದ್ದಾರೆ. ಜೊತೆಗೆ ಆಕೆಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.

 

Spread the love

Leave a Reply

Your email address will not be published. Required fields are marked *