ಯೋಗಿ ಸರ್ಕಾರ ಬಂಧಿಸಿದ್ದ ಪತ್ರಕರ್ತನಿಗೆ ಜಾಮೀನು ನೀಡದ ಸುಪ್ರೀಂ ಕೋರ್ಟ್‌!

ಉತ್ತರ ಪ್ರದೇಶದ ಹತ್ರಾಸ್‌ನ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಬಗ್ಗೆ ವರದಿ ಮಾಡಲು ತೆರಳಿದ್ದಾಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್‌ ಅವರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಎಸ್.ಎ. ಬೊಬ್ಡೆಯವರ ನೇತೃತ್ವದ ಪೀಠ, ಅರ್ಜಿದಾರರು ಜಾಮೀನಿಗಾಗಿ ಅಲಹಾಬಾದ್ ಹೈಕೋರ್ಟನ್ನು ಯಾಕೆ ಸಂಪರ್ಕಿಸಿಲ್ಲ ಎಂದು ಕೇಳಿದೆ.

ಇದಕ್ಕೆ ಉತ್ತರಿಸಿದ ಸಿದ್ದೀಕ್ ಕಪ್ಪನ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, “ ಅವರನ್ನು ಭೇಟಿಯಾಗಲು ಕೂಡ ಸಾಧ್ಯವಾಗುತ್ತಿಲ್ಲ. ಇನ್ನು ಹೈಕೋರ್ಟ್‌ಗೆ ಹೋಗುವುದು ಹೇಗೆ. ಈIಖ ನಲ್ಲಿ ಸಿದ್ದೀಕ್ ಕಪ್ಪನ್ ಹೆಸರಿಲ್ಲ, ಯಾವುದೇ ಅಪರಾಧಗಳ ಆರೋಪವಿಲ್ಲ ಅದರೂ ಅಕ್ಟೋಬರ್ 5 ರಿಂದ ಅವರು ಜೈಲಿನಲ್ಲಿದ್ದಾರೆ” ಎಂದರು.

ಪ್ರಕರಣದ ವಿಚಾರಣೆಯಲ್ಲಿ ನವೆಂಬರ್ 20ಕ್ಕೆ ಮುಂದೂಡಲಾಗಿದ್ದು, ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್ ಜಾರಿ ಮಾಡಿದೆ.

ದಲಿತ ಯುವತಿಯ ಅತ್ಯಾಚಾರ ಹಾಗೂ ಕೊಲೆಯ ಬಗ್ಗೆ ವರದಿ ಮಾಡುವುದಕ್ಕಾಗಿ ದೆಹಲಿಯಿಂದ ಹತ್ರಾಸ್‌ಗೆ ಹೊರಟಿದ್ದ ಸಿದ್ದೀಕ್ ಅವರನ್ನು ಅಕ್ಟೋಬರ್‌ 6 ರಂದು ಉತ್ತರ ಪ್ರದೇಶ ಪೊಲೀಸರು PFI ಜೊತೆಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿ ಮಥುರಾದಲ್ಲಿ ಬಂಧಿಸಿದ್ದರು.


ಇದನ್ನೂ ಓದಿ: ಮೋದಿ ಮಂತ್ರಿಮಂಡಲ ವಿಸ್ತರಣೆ ಸಾಧ್ಯತೆ: ಕರ್ನಾಟಕದ ಸಂಸದರಿಗೆ ಸಿಗುತ್ತಾ ಮಂತ್ರಿ ಪಟ್ಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights