Fact Check: ಯೋಗಿ ಆದಿತ್ಯನಾಥ್‌ರವರು ಬಿಜೆಪಿ ಬಿಡುತ್ತಾರೆ ಎಂಬ ಬ್ರೇಕಿಂಗ್ ನ್ಯೂಸ್ ನಿಜವೆ?

ಉತ್ತರಪ್ರದೇಶದಲ್ಲಿ ದಿನದಿಂದ ದಿನಕ್ಕೆ ಚುನಾವಣೆ ಕಾವು ಏರತೊಡಗಿದೆ. ಬಿಜೆಪಿ ಮತ್ತು ಸಮಾಜವಾದಿ ಪಾರ್ಟಿ, ನಡುವೆ ರಾಜಕೀಯ ಮೇಲಾಟ ಪ್ರಾರಂಭವಾಗಿದೆ. ಈಗಾಗಲೇ ಬಿಜೆಪಿಯ ಶಾಸಕರು ಮತ್ತು ಸಚಿವರು ಬಿಜೆಪಿಗೆ ರಾಜಿನಾಮೆ ನೀಡುವ ಮೂಲಕ ಪಕ್ಷಾಂತರ ಪರ್ವ ಪ್ರಾರಂಭವಾಗಿತ್ತು. ಈಗ ಮತ್ತೊಂದು ಬ್ರೇಕಿಂಗ್ ನ್ಯೂಸ್ ಬಂದಿದ್ದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಹ ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

‘ಕೆ ನ್ಯೂಸ್’ನಲ್ಲಿ ಬ್ರೇಕಿಂಗ್ ನ್ಯೂಸ್‌ನಂತೆ ಕಾಣುವ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಅಮಿತ್ ಶಾ ಸಿಎಂ ಬದಲಾಯಿಸುವ ಬಗ್ಗೆ ಮಾತನಾಡಿದರೆ ಬಿಜೆಪಿ ತೊರೆದು ಎಸ್‌ಪಿ ಸೇರುವುದಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್  ಇಂತಹ ಹೇಳಿಕೆ ನೀಡಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ‘ಕೆ ನ್ಯೂಸ್’ ನ ಬ್ರೇಕಿಂಗ್ ನ್ಯೂಸ್‌ನ ಸ್ಕ್ರೀನ್‌ಶಾಟ್  ಇಮೇಜ್ ಅನ್ನು ಮಾರ್ಕ್ ಮಾಡಿ ನೋಡಿದಾಗ ಲಭ್ಯವಾದ ಇಮೇಜ್ ಗೂ ಮತ್ತು ಚಾನೆಲ್‌ನ ಸಾಮಾನ್ಯ ಬ್ರೇಕಿಂಗ್ ನ್ಯೂಸ್ ಟೆಂಪ್ಲೇಟ್  ಗೂ ಯಾವುದೇ  ಹೋಲಿಕೆಗಳಿಲ್ಲ. ಅಂತಹ ಯಾವುದೇ ಸುದ್ದಿಯನ್ನು ತಾನು ಪ್ರಸಾರ ಮಾಡಿಲ್ಲ ಮತ್ತು ಸ್ಕ್ರೀನ್‌ ಶಾಟ್ ಅನ್ನು ತಿರುಚಲಾಗಿದೆ ಎಂದು ‘ಕೆ ನ್ಯೂಸ್’ ಚಾನೆಲ್ ಟ್ವಿಟರ್‌ನಲ್ಲಿ ಸ್ಪಷ್ಟ ಪಡಿಸಿದೆ.

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿರುವಂತಹ ಯಾವುದೇ ಕಾಮೆಂಟ್‌ಗಳನ್ನು ಮಾಡಿದ್ದಾರೆಯೇ ಎಂದು ಪರಿಶೀಲಿಸಲು ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್‌ನಲ್ಲಿ ಹುಡುಕಿದಾಗ, ಅಮಿತ್ ಶಾ ಮಾತುಕತೆ ವೇಳೆ ಬಿಜೆಪಿ ತೊರೆದು ಎಸ್‌ಪಿ ಸೇರುವುದಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬೆದರಿಕೆ ಹಾಕಿದ್ದಾರೆ ಎಂಬ ಯಾವುದೇ ವರದಿಗಳು ನಮಗೆ ಲಭ್ಯವಿಲ್ಲ. ಸಿಎಂ ಬದಲಾವಣೆ ಎಂಬ ಸುದ್ದಿ ನಿಜವಾಗಿಯೂ ಚರ್ಚೆಯಾಗಿದ್ದರೆ, ಸಿಎಂ ಆದಿತ್ಯನಾಥ್ ಅವರು ಇಂತಹ ಹೇಳಿಕೆಗಳನ್ನು ನೀಡಿದ್ದರೆ ಬಹುತೇಕ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುತ್ತಿದ್ದವು, ಆದರೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ.

ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಸ್ಕ್ರೀನ್‌ಶಾಟ್ ಅನ್ನು ಗಮನಿಸಿದಾಗ, ಮೇಲಿನ ಬಲ ಮೂಲೆಯಲ್ಲಿ ‘KNEWS’ ಲೋಗೋವನ್ನು ಒಬ್ಬರು ಗಮನಿಸಬಹುದು. ಕೆ ನ್ಯೂಸ್ ಕಾನ್ಪುರ ಮೂಲದ ಸುದ್ದಿ ವಾಹಿನಿಯಾಗಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸಂಬಂಧಿಸಿದಂತೆ ಸುದ್ದಿವಾಹಿನಿಯು ಅಂತಹ ಸುದ್ದಿಗಳನ್ನು ವರದಿ ಮಾಡಿದೆಯೇ ಎಂದು ಹುಡುಕಿದಾಗ, ಅವರ ವೆಬ್‌ಸೈಟ್, ಯೂಟ್ಯೂಬ್, ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳಲ್ಲಿ ಯಾವುದೇ ವರದಿಗಳು ಕಂಡುಬಂದಿಲ್ಲ. ಆದರೆ 12 ಜನವರಿ 2022 ರಂದು ಅವರು ಮಾಡಿದ ಟ್ವೀಟ್ ಅನ್ನು ನಾವು ನೋಡಿದಾಗ, ಅವರ ಟೆಂಪ್ಲೇಟ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಸ್ಕ್ರೀನ್‌ಶಾಟ್ ನಕಲಿಯಾಗಿದ್ದು  ವೈರಲ್ ಆಗುತ್ತಿರುವ ಸುದ್ದಿಯನ್ನು ನಾವು ಎಲ್ಲಿಯೂ ಪ್ರಸಾರ ಮಾಡಿಲ್ಲ ಎಂದು  ಹೇಳಿದೆ. ಆ ರೀತಿ ಯಾವುದೇ ಸುದ್ದಿಯನ್ನು ನಾವು ಪ್ರಸಾರ ಮಾಡಿಲ್ಲಾ ಎಂದು ಸ್ಪಷ್ಟಪಡಿಸಿದೆ. ಹಾಗಾಗಿ ದುಷ್ಕರ್ಮಿಗಳು ಎಡಿಟ್ ಮಾಡಿದ ಚಿತ್ರವನ್ನು ವೈರಲ್ ಮಾಡಿದ್ದಾರೆ.


ಇದನ್ನು ಓದಿರಿ: Fact check: ಯುಪಿಯಲ್ಲಿ 2000 ಮಸೀದಿಗಳನ್ನು ನಿರ್ಮಿಸುತ್ತೇವೆ ಎಂದು ಅಖಿಲೇಶ್ ಯಾದವ್ ಹೇಳಿಲ್ಲ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.