Fact check: ಯುಪಿಯಲ್ಲಿ 2000 ಮಸೀದಿಗಳನ್ನು ನಿರ್ಮಿಸುತ್ತೇವೆ ಎಂದು ಅಖಿಲೇಶ್ ಯಾದವ್ ಹೇಳಿಲ್ಲ

ಉತ್ತರ ಪ್ರದೇಶ ಚುನಾವಣೆಗೆ ದಿನಾಂಕ ನಿಗಧಿಯಾಗಿದೆ. ಎಲ್ಲಾ ಪಕ್ಷಗಳು ಭರದಿಂದ ಪ್ರಚಾರ ಆರಂಭಿಸಿವೆ. ಇಂತಹ ಸಂದರ್ಭದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ)ವು “ಪಶ್ಚಿಮ ಯುಪಿ ಮತ್ತು ಪೂರ್ವಾಂಚಲ್‌ನಲ್ಲಿ 2000 ಹೊಸ ಮಸೀದಿಗಳನ್ನು ನಿರ್ಮಿಸಲಾಗುವುದು. ಅಯೋಧ್ಯೆಯಲ್ಲಿ ಬಾಬರಿ ಮಸೀದಿಗೆ 1000 ಕೋಟಿ ರೂ ನೀಡಲಾಗುವುದು. ಅಯೋಧ್ಯೆಯ ಹೆಸರನ್ನು ಬದಲಾಯಿಸಲಾಗುವುದು. ದಲಿತರು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಡಿಮೆ ಮಾಡಲಾಗುವುದು ಮತ್ತು ಮುಸ್ಲಿಮರಿಗೆ ಮೀಸಲಾತಿಯನ್ನು 30% ಕ್ಕೆ ಹೆಚ್ಚಿಸಲಾಗುವುದು. ಲವ್ ಜಿಹಾದ್ ಕಾನೂನನ್ನು ರದ್ದುಗೊಳಿಸಲಾಗುವುದು” ಎಂಬ ಭರವಸೆ ನೀಡಿದೆ ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಈ ಪೋಟೊ ಅನ್ನು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.


I Supported modi and BJP (ಲಕ್ಷಕ್ಕೂ ಹೆಚ್ಚು ಅನುಯಾಯಿಗಳು) ಎಂಬ ಫೇಸ್‌ಬುಕ್ ಪುಟಗಳಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ; 
ಹಿಂದೂ ಸನಾತನ ಸಂಘ [22K ಕ್ಕೂ ಹೆಚ್ಚು ಅನುಯಾಯಿಗಳು]; ಮತ್ತು NaMo ಗುಂಪುಗಳಲ್ಲಿಯೂ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್ ಚೆಕ್

ಸಮಾಜವಾದಿ ಪಕ್ಷದ ಅಧ‍್ಯಕ್ಷರಾದ  ಅಖಿಲೇಶ್ ಯಾದವ್ ಈ ರೀತಿ ಚುನಾವಣಾ ಘೋಷಣೆಗಳನ್ನು ಮಾಡಿದ್ದಾರಾ ಎಂದು ಪರಿಶೀಲಿಸಲು ಫ್ಯಾಕ್ಟ್ ಚೆಕ್ ಮಾಡಿದಾಗ ಅಂತಹ ಯಾವುದೇ ಹೇಳಿಕೆಗಳು ದೊರಕಿಲ್ಲ. ಅಖಿಲೇಶ್ ಯಾದವ್ ಅವರು ನಿಜವಾಗಿಯೂ ಅಂತಹ ಹೇಳಿಕೆಗಳನ್ನು ನೀಡಿದ್ದರೆ ಅದು ಬ್ರೇಕಿಂಗ್ ನ್ಯೂಸ್ ಆಗಿರುತ್ತದೆ. ಆದರೆ ಈ ಹೇಳಿಕೆಯ ಬಗ್ಗೆ ಯಾವುದೇ ಸುದ್ದಿ ವಾಹಿನಿ ವರದಿ ಮಾಡಿಲ್ಲ.

ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರ ಅಬ್ದುಲ್ ಹಫೀಜ್ ಗಾಂಧಿ, ಅವರು ಹೇಳಿರುವಂತೆ, “ ಈ ಪೋಸ್ಟರ್‌ಗಳು ಗ್ರಾಫಿಕ್ ನಿಂದ ಕೂಡಿದ್ದು ಸಂಪೂರ್ಣವಾಗಿ ಕಟ್ಟುಕಥೆಯಾಗಿದೆ. ಇದನ್ನು ನಮ್ಮ ತಂಡ ಮಾಡಿಲ್ಲ ಅಥವಾ ಅಖಿಲೇಶ್ ಯಾದವ್ ಹೇಳಿಲ್ಲ. ಇದು ನಿರ್ದಿಷ್ಟ ವರ್ಗದ ಮತದಾರರನ್ನು ದಾರಿ ತಪ್ಪಿಸುವ ಸಂಘಟಿತ ಪ್ರಯತ್ನವಾಗಿದೆ. ಇದಲ್ಲದೆ, ಪಕ್ಷವು ನಮ್ಮ ಪ್ರಣಾಳಿಕೆಯನ್ನು ಇನ್ನೂ ಬಹಿರಂಗಪಡಿಸಿಲ್ಲ” ಎಂದಿದ್ದಾರೆ.

ನಾವು  ಸಮಾಜವಾದಿ ಪಕ್ಷದ ಟ್ವಿಟರ್ ಖಾತೆಗಳನ್ನು ಪರಿಶೀಲಿಸಿದಾಗ ವೈರಲ್ ಪೋಸ್ಟರ್ ಗಳು  ಗ್ರಾಫಿಕ್ ಎಂದು ತಿಳಿದು ಬಂದಿವೆ. ಎಸ್ಪಿ ಅವರ ಇತರ ಪೋಸ್ಟರ್‌ಗಳನ್ನು ವೀಕ್ಷಿಸಲು ಈ ಲಿಂಕ್‌ಗಳಿಗೆ ಭೇಟಿ ನೀಡಿ – ಫೇಸ್‌ಬುಕ್, ಟ್ವಿಟರ್.

ವೈರಲ್ ಚಿತ್ರದಲ್ಲಿರುವ ಯಾದವ್ ಅವರ ಫೋಟೋ ಅವರ ಇತ್ತೀಚಿನ ಟ್ವಿಟರ್ ಪ್ರೊಫೈಲ್ ಆಗಿದೆ.

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್‌ ಅವರನ್ನು ಗುರಿಯಾಗಿಟ್ಟಕೊಂಡು  ಸುಳ್ಳು ಘೋಷಣೆಗಳ ಪೋಸ್ಟರ್ ಗಳನ್ನು ಗ್ರಾಫಿಕ್ಸ್ ಮಾಡಿ ಅವುಗಳನ್ನು ವೈರಲ್ ಮಾಡುವ ಮೂಲಕ ಸುಳ್ಳ ಸುದ್ದಿಯನ್ನು ಹಬ್ಬಿಸಲಾಗಿದೆ. ಬಾಬರಿ ಮಸೀದಿ ನಿರ್ಮಾಣಕ್ಕೆ ತಮ್ಮ ಪಕ್ಷವು ಮಸೀದಿಗಳನ್ನು ನಿರ್ಮಿಸುತ್ತದೆ ಮತ್ತು ಹಣ ಮಂಜೂರು ಮಾಡುತ್ತದೆ ಎಂದು ಅವರು ಹೇಳಿದರು ಎಂದು ಬಿಂಬಿಸಲಾಗಿದೆ. ಎಸ್‌ಪಿ ಅಧಿಕಾರಕ್ಕೆ ಬಂದರೆ ರಾಮ ಮಂದಿರಕ್ಕಾಗಿ ಮಂಜೂರು ಮಾಡಿದ ಜಾಗದಲ್ಲಿ ಬಾಬರಿ ಮಸೀದಿ ನಿರ್ಮಿಸುವುದಾಗಿ ಯಾದವ್ ಭರವಸೆ ನೀಡಿದ್ದ ನಕಲಿ ಟ್ವೀಟ್‌ನಲ್ಲಿ ಇದೇ ರೀತಿಯ ಸುಳ್ಳು ಹೇಳಿಕೆಯನ್ನು ವೈರಲ್ ಮಾಡಲಾಗಿತ್ತು.


ಇದನ್ನು ಓದಿರಿ: Fact Check: NEET-PG 2022 ಪರೀಕ್ಷೆಯನ್ನು ಮುಂದೂಡಲಾಗಿದೆಯೇ? ವೈರಲ್ ಸುತ್ತೋಲೆಯ ಹಿಂದಿನ ಸತ್ಯ ಇಲ್ಲಿದೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights