ಬಿಜೆಪಿ‌ ನಾಯಕರಿಗೆ ಮಾನವೀಯತೆ ಇಲ್ಲ – ಮಾಜಿ ಸಂಸದ ಧ್ರುವನಾರಾಯಣ್

ಬಿಜೆಪಿಯವರ ಮನಸ್ಸಿಲ್ಲಿ ಎಂಥ ವಿಷ ಇದೆ ಅಂತ ಇದರಲ್ಲೆ ಗೊತ್ತಾಗುತ್ತೆ. ಕ್ರಿಶ್ಚಿಯನ್ನರ ಭಾವನೆಗಳಿಗೆ ಬೆಲೆ‌‌ ಕೊಡದ ಬಿಜೆಪಿಯವರ ಹೇಳಿಕೆಗಳು ಅಕ್ಷಮ್ಯ ಅಪರಾಧ ಎಂದು ಮಾಜಿ ಸಂಸದ ಧ್ರುವನಾರಾಯಣ್ ಕಿಡಿ ಕಾರಿದ್ದಾರೆ.

ಡಿಕೆಶಿಯಿಂದ ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಳತ್ವ ವಿಚಾರಕ್ಕೆ ಮೈಸೂರಿನಲ್ಲಿ ಮಾತನಾಡಿದ ಧ್ರುವನಾರಾಯಣ್ ಅವರು, ಮೃಗಗಳಿಗೆ ಮಾನವೀಯತೆ ಇರುತ್ತೆ. ಆದ್ರೆ ಬಿಜೆಪಿ‌ ನಾಯಕರಿಗೆ ಮಾನವೀಯತೆ ಇಲ್ಲ. ಇವರೇಲ್ಲ ಮನುಷ್ಯರ ? ಸ್ಥಳಿಯ ಜನರ ಮನವಿಗೆ ಸ್ಪಂದಿಸೋದು ಶಾಸಕರ ಕರ್ತವ್ಯ.

ಅದಕ್ಕಾಗಿ ಡಿಕೆಶಿ ಅದಕ್ಕೆ ಸರ್ಕಾರದಿಂದ ಜಾಗ ಕೊಡಿಸಿ ತಾವು ಹಣ ನೀಡಿದ್ದಾರೆ. ಇದನ್ನ‌ ಬಿಜೆಪಿ ನಾಯಕರು ಟೀಕಿಸೋದು ಸರಿಯಲ್ಲ. ಕ್ತೈಸ್ತ ಮಿಷನರಿಗಳು ಸ್ವಾತಂತ್ರ್ಯ ಪೂರ್ವ‌ದಿಂದಲೂ ಸೇವೆ ಮಾಡುತ್ತಿವೆ. ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೆ ಕೊಡುಗೆ ನೀಡಿದೆ. ಅಂತ ಸಮುದಾಯವನ್ನ ಧರ್ಮವನ್ನ ಅವಮಾನಿಸೋದು ಸರಿಯಲ್ಲ. ಅದೇಷ್ಟು ಬಿಜೆಪಿ ನಾಯಕರು ಅವರ ಮಕ್ಕಳು ಕ್ರೈಸ್ತ ಮಿಷನರಿ ಶಾಲೆಯಲ್ಲಿ ಓದಿಲ್ಲ. ಡಿಕೆಶಿ ಟೀಕಿಸುವ ಪ್ರತಾಪ್‌ಸಿಂಹ ಮಂಗಳೂರಿನಲ್ಲಿ ಓದಿದ ಕಾಲೇಜು ಯಾವುದು. ಇವೇಲ್ಲ ಕ್ರೈಸ್ತ ಸಮುದಾಯವನ್ನ ಅವಮಾನಿಸಿದ್ದಾರೆ. ಇದಕ್ಕೆ ಸೋನಿಯಾ ಗಾಂಧಿ ಹೆಸರು ತಳುಕುಹಾಕೋದು ಸರಿಯಲ್ಲ. ಸಿಎಎ ಕಾಯ್ದೆಯನ್ನು ಧರ್ಮಾಧಾರಿತವಾಗಿ ಜಾರಿ ಮಾಡ್ತಿದ್ದಾರೆ. ಈಗ ಕ್ರೀಶ್ಚಿಯನ್ನರ ಭಾವನೆಗಳಿಗೆ ಬೆಲೆ ಕೊಡ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನು ಮಾಡಲು ಹೋಗ್ತಿವೆ. ಆ ಈಶ್ವರಪ್ಪನವರಿಗಂತು ಮನುಷ್ಯತ್ವವೇ ಇಲ್ಲ ಬಿಡು. ಅವರು ಕ್ರೀಶ್ವಿಯನ್ನರಿಗೆ ನೋವಾಗುವ ಮಾತುಗಳನ್ನೆ ಆಡಿರೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯವರದ್ದು ಧಮನಕಾರಿ ಮನಸ್ಥಿತಿ. ಹಿಂದು ಧರ್ಮ ಬಿಟ್ಟು ಬೇರೆ ಏನು ಇರಬಾರದು ಅನ್ನೋ ಭಾವನೆ ಇಟ್ಟುಕೊಂಡಿದ್ದಾರೆ. ಇವರ ಮೂಲ ಅಜೆಂಡ ಪ್ರಚೋದನಕಾರಿ ಮೂಲಕ ಮತ ಸೆಳೆಯೋದು ಎಂದು ವಾಗ್ದಾಳಿ ಮಾಡಿದ್ದಾರೆ. ಬಿಜೆಪಿಯವರು ಮೊದಲು ಅಸೃಶ್ಯತೆ ಬಗ್ಗೆ ಮಾತನಾಡಲಿ. ಹಿಂದೂಧರ್ಮದಲ್ಲಿರುವ ಅಸಮಾನತೆ ಬಗ್ಗೆ ತಮ್ಮ‌ ನಿಲುವು ಹೇಳಲಿ. ಆ ಈಶ್ವರಪ್ಪ ಅಂತು ಎಲ್ಲರಿಗು ಅವಮಾನ ಮಾಡ್ತಿದ್ದಾರೆ. ಒಬ್ಬ ಮಂತ್ರಿಯಾಗಿ ಹೇಗೆ ಇರಬೇಕು ಎಂಬುದೆ ಆ ಮನುಷ್ಯನಿಗೆ ಗೊತ್ತಿಲ್ಲ.

ನಾನು ಶಾಸಕನಾಗಿದ್ದಾಗ ಸಿ.ಟಿ.ರವಿ ನನಗೆ ಹೇಳುತ್ತಿದ್ದರು. ಯಾಕೆ ಶಾಲೆ ಕಾಲೇಜಿನ ಫೈಲ್ ತರ್ತಿರಾ. ಅದನ್ಯಾಕೆ ಮಾಡೋಕೆ ಹೋಗ್ತಿರಿ. ನಾವು ನೋಡು ವರ್ಷಕ್ಕೊಮ್ಮೆ ದತ್ತ ಪೀಠ ಮೆರವಣಿಗೆ ಮಾಡಿ ಗೆದ್ದು ಬರ್ತಿವಿ ನೀವು ಹಾಗೆ ಮಾಡಿ ಅಂತ ಸಲಹೆ ಕೊಟ್ಟಿದ್ರು. ಇನ್ನು ನಳಿನ್ ಕುಮಾರ್ ಕಟೀಲ್ ಸಂಸತ್ ಗೆ ಬಾರದೆ ಉತ್ಸವದಲ್ಲಿ ಭಾಗಿಯಾಗ್ತಿದ್ರು. ಸಂಸತ್ ಬಿಟ್ಟು ಉತ್ಸವದಲ್ಲಿ ಭಾಗಿಯಾಗ್ತಿರಾ ಅಂತ ಕೇಳೀದ್ರೆ ನಮಗೆ ಸಂಸತ್ ಗಿಂತ ಉತ್ಸವನೆ ಹೆಚ್ಚು ಅಂತ ಹೇಳ್ತಿದ್ರು. ಇಂತಹ ಮನಸ್ಥಿತಿ ಇರುವವಂತವರು ಬಿಜೆಪಿ ನಾಯಕರುಗಳು. ಇವರುಗಳಿಗೆ ಅಭಿವೃದ್ಧಿ ಬೇಡಾ. ಧರ್ಮದ ಮಧ್ಯ ಕಂದಕ ಸೃಷ್ಟಿಸುವುದೆ ಇವರ ಕೆಲಸ ಎಂದು ಟೀಕಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights