Fact check: ಪ್ರಧಾನಿ ಮೋದಿ ಅವರು ಜನವರಿ 25 ರವರೆಗೆ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಿದ್ದಾರೆಯೇ?

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 25 ರವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೈರಲ್ ಆಗುತ್ತಿದೆ.. ಲಾಕ್‌ಡೌನ್ ಜನವರಿ 14 ರಿಂದ ಪ್ರಾರಂಭವಾಗಿ ಜನವರಿ 25 ರವರೆಗೆ ಮುಂದುವರಿಯುತ್ತದೆ  ಎಂದು ಪೋಸ್ಟಿನಲ್ಲಿ ಪ್ರತಿಪಾದನೆ ಮಾಡುತ್ತಿದೆ. ಇದರ ಸತ್ಯಶೋಧನೆಯನ್ನು ಮಾಡೋಣ.

ಫ್ಯಾಕ್ಟ್ ಚೆಕ್: ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ (PIB) ಫ್ಯಾಕ್ಟ್ ಚೆಕ್ ಆರ್ಮ್ ‘PIB ಫ್ಯಾಕ್ಟ್ ಚೆಕ್’ ಅವರು ಟ್ವೀಟ್ ಮಾಡುವ ಮೂಲಕ “ಲಾಕ್‌ಡೌನ್ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ಮಾಹಿತಿಗಳು ಸುಳ್ಳಾಗಿದೆ. ಅಧಿಕೃತ  ಮಾಹಿತಿಗಳನ್ನು ಮಾತ್ರ ನಂಬಿರಿ. ಅಂತಹ ಚಿತ್ರಗಳು ಅಥವಾ ಸಂದೇಶಗಳನ್ನು ಹಂಚಿಕೊಳ್ಳಬೇಡಿ” ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 25 ರವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದು ಹರಿದಾಡುತ್ತಿದೆ.. ಲಾಕ್‌ಡೌನ್ ಜನವರಿ 14 ರಿಂದ ಪ್ರಾರಂಭವಾಗಿ ಜನವರಿ 25 ರವರೆಗೆ ಮುಂದುವರಿಯುತ್ತದೆ ಎಂದು ಪೋಸ್ಟಿನಲ್ಲಿ ಹೇಳಿದ್ದು ಇದು ನಕಲಿಯಾಗಿದೆ, ಯಾವುದೇ ರಿತೀಯ ಸರಕಾರ ಅಧಿಕೃತ ಮಾಹಿತಿ ಹೊರಹಾಕಿಲ್ಲ.

ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ (PIB) ಫ್ಯಾಕ್ಟ್ ಚೆಕ್ ಆರ್ಮ್ ‘PIB ಫ್ಯಾಕ್ಟ್ ಚೆಕ್’ ಅವರು ಟ್ವೀಟ್ ಮಾಡುವ ಮೂಲಕ “ಲಾಕ್‌ಡೌನ್ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ಮಾಹಿತಿಗಳು ಸುಳ್ಳಾಗಿದೆ. ಅಧಿಕೃತ  ಮಾಹಿತಿಗಳನ್ನು ಮಾತ್ರ ನಂಬಿರಿ. ಅಂತಹ ಚಿತ್ರಗಳು ಅಥವಾ ಸಂದೇಶಗಳನ್ನು ಹಂಚಿಕೊಳ್ಳಬೇಡಿ” ಎಂದು ಟ್ವೀಟ್ ಮಾಡಿದ್ದಾರೆ.  ಮತ್ತು ಹಲವು ಮಾಧ್ಯಮಗಳು ವರದಿ ಮಾಡಿದೆ.

ಸುದ್ದಿಗೆ ಸಂಬಂಧಿಸಿದಂತೆ ತಿಳಿದುಕೊಳ್ಳಲು ಇಲ್ಲಿ,  ನೋಡಬಹುದು

ಕೋವಿಡ್-19 ಪ್ರಕರಣಗಳು ಮತ್ತೆ ದೇಶದಲ್ಲಿ ಉಲ್ಬಣಗೊಳ್ಳುತ್ತಿರುವ ಸಮಯದಲ್ಲಿ ಈ ನಕಲಿ ಸಂದೇಶವನ್ನು ಪ್ರಸಾರ ಮಾಡಲಾಗುತ್ತಿದೆ. ಭಾರತವು 2,64,202 ಹೊಸ ಕೊರೋನ ವೈರಸ್ ಸೋಂಕುಗಳ  ವರದಿಗಳು ದಿನದಿಂದ ದಿನಕ್ಕೆ ಜಿಗಿತವಾಗುತ್ತಿದೆ. 239 ದಿನಗಳಲ್ಲಿ ಅತಿ ಹೆಚ್ಚು, ಒಟ್ಟು COVID-19 ಪ್ರಕರಣಗಳ ಸಂಖ್ಯೆಯನ್ನು 3,65,82,129 ಕ್ಕೆ ಏರಿಕೆಯಾಗಿದೆ, ಇದರಲ್ಲಿ 5,753 ಒಮಿಕ್ರಾನ್ ರೂಪಾಂತರದ ಪ್ರಕರಣಗಳು ಸೇರಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಶುಕ್ರವಾರ ಬೆಳಿಗ್ಗೆ ಡೇಟಾವನ್ನು ನವೀಕರಿಸಲಾಗಿದೆ.

ಗುರುವಾರದಿಂದ ಓಮಿಕ್ರಾನ್ ಪ್ರಕರಣಗಳಲ್ಲಿ ಶೇ.4.83ರಷ್ಟು ಹೆಚ್ಚಳವಾಗಿದೆ. ಸಧ್ಯ ಪ್ರಕರಣಗಳು 12,72,073 ಕ್ಕೆ ಏರಿದೆ, ಇದು 220 ದಿನಗಳಲ್ಲಿ ಗರಿಷ್ಠವಾಗಿದೆ, ಆದರೆ ಸಾವಿನ ಸಂಖ್ಯೆ 315 ಹೊಸ ಸಾವುಗಳೊಂದಿಗೆ 4,85,350 ಕ್ಕೆ ಏರಿದೆ ಎಂದು ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಡೇಟಾ ತಿಳಿಸಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 3.48 ಪ್ರತಿಶತವನ್ನು ಒಳಗೊಂಡಿವೆ, ಆದರೆ ರಾಷ್ಟ್ರೀಯ COVID-19 ಚೇತರಿಕೆ ದರವು 95.20 ಪ್ರತಿಶತಕ್ಕೆ ಇಳಿದಿದೆ ಎಂದು ಸಚಿವಾಲಯ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಜನವರಿ 25ರ ತನಕ ಲಾಕ್ ಡೌನ್ ಎಂದು ಪ್ರದಾನಿ ಘೋಷಿಸಿದ್ದಾರೆ ಎಂಬ ವರದಿಯು ಸುಳ್ಳಾಗಿದ್ದು ಇದು ಸರಕಾರದ ಯಾವುದೇ ಅಧಿಕೃತ ಮಾಹಿತಿ ಅಲ್ಲ


ಇದನ್ನ ಓದಿರಿ: Fact Check: ಜಾಗೃತಿಗಾಗಿ ನಟಿಸಿದ ವೀಡಿಯೊವನ್ನು ರೋಹಿಂಗ್ಯಾ ಮುಸ್ಲಿಮರು ಹಿಂದೂ ಮಕ್ಕಳನ್ನು ಅಪಹರಿಸುವ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights