Categories
Breaking News National Political State

ಫೇಕ್ ನ್ಯೂಸ್ : ಜೆ.ಎನ್.ಯು ವಿದ್ಯಾರ್ಥಿಗಳ ಮೇಲಿನ ದಾಳಿಯ ಬಗ್ಗೆ ಪ್ರಧಾನಿ ಮೋದಿಯ ಪ್ರತಿಕ್ರಿಯೆ!

ಇತ್ತೀಚೆಗೆ ವಾಸ್ತವ ಅಂಶಗಳನ್ನು ಬಿಂಬಿಸಬೇಕಾಗಿದ್ದ ಕೆಲ ವಾಹಿನಿಗಳು ಪಕ್ಷದ ಪರವಾಗಿ, ವ್ಯಕ್ತಿಗಳ ಪರವಾಗಿ ಸುದ್ದಿಯನ್ನ ಬಿತ್ತರಿಸುತ್ತಿರುವುದು ಅಧಿಕವಾಗುತ್ತಿದೆ. ಇದಲ್ಲದೇ ನಕಲಿ ಸುದ್ದಿಗಳನ್ನ ಬಿತ್ತರಿಸುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಏನ್ ಸುದ್ದಿ ಯಲ್ಲಿ ನಾನಾ ನಕಲಿ ಸುದ್ದಿಗಳ ಬಗ್ಗೆ ತಮಗೆ ಮಾಹಿತಿಯನ್ನ ನೋಡಲಾಗಿತ್ತು. ಇಂತಹ ಮತ್ತೊಂದು ಸುದ್ದಿಯನ್ನ ನಿಮ್ಮ ಮುಂದಿಡುತ್ತಿದ್ದೇವೆ.

“ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಮೇಲೆ ನಡೆದ ದಾಳಿಯ ಬಗ್ಗೆ ಈ ರೀತಿ ಹೇಳಿದ್ದಾರೆ.”————————————————-“ ಸದ್ಯಕ್ಕೆ ಮೌನ ಮುರಿದಿಲ್ಲ ಪ್ರಧಾನಿ ಮೋದಿಯವರ ಹೇಳಿಕೆ ಬಂದ ಕೂಡಲೇ ಮೇಲಿನ ಬಿಟ್ಟ ಸ್ಥಳ ತುಂಬಿಸಲಾಗುವುದು.”

ಇಂತಹ ನಕಲಿ ಸುದ್ದಿಯನ್ನ https://coastal-mirror.com/modi-on-jnu/ ನಲ್ಲಿ ನೀವು ಕಾಣಬಹುದು.

Categories
Breaking News Featured Political State

GST problem : PM ಮೋದಿ ಸರಕಾರದ ಜಿಎಸ್‌ಟಿ ಪರಿಹಾರ ಪಾವತಿಯಲ್ಲಿನ ಬಿಕ್ಕಟ್ಟು….

ಯಾವುದೇ ತೆರಿಗೆ ಸುಧಾರಣಾ ಕ್ರಮಗಳೊಂದಿಗೆ ಬೆಸೆದುಕೊಂಡಿರುವ ಆದಾಯ ಗಳಿಕೆಯಲ್ಲಿನ ಅನಿಶ್ಚತೆಗಳು ಎಲ್ಲಾ ಸರ್ಕಾರಗಳಿಗೂ ಕಳವಳನ್ನುಂಟು ಮಾಡುತ್ತವೆ. ಹೀಗಾಗಿ ತೆರಿಗೆ ಸುಧಾರಣೆಯ ಬಗ್ಗೆ ವಿಶಾಲ ನೆಲೆಯ ಸರ್ವ ಸಮ್ಮತಿಯನ್ನು ರೂಢಿಸಬೇಕೆಂದರೆ ಯಾವುದಾದರೊಂದು ಬಗೆಯ ಆದಾಯ ರಕ್ಷಣೆಯ ಭರವಸೆಯ ಅಗತ್ಯವಿದ್ದೇ ಇರುತ್ತದೆ. ಹಾಗಾಗಿಯೇ, ೨೦೧೭ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) (ರಾಜ್ಯಗಗೆ ಪರಿಹಾರ) ಕಾಯಿದೆಯಲ್ಲಿ ಜಿಎಸ್‌ಟಿ ಜಾರಿಯಾದ ಮೊದಲ ಐದು ವರ್ಷಗಳಲ್ಲಿ ರಾಜ್ಯಗಳ ಜಿಎಸ್‌ಟಿ(ಎಸ್‌ಜಿಎಸ್‌ಟಿ) ಮತ್ತು ಅಂತರರಾಜ್ಯ ಜಿಎಸ್‌ಟಿ ಗಳಿಕೆಯಲ್ಲಿ ಕೊರತೆ ಕಂಡು ಬಂದರೆ ಅವುಗಳ ರಾಜಸ್ವ ಆದಾಯ ರಕ್ಷಣೆಯ ಭರವಸೆಯನ್ನು ನೀಡುವ  ಅವಕಾಶವನ್ನು ಕಲ್ಪಿಸಿತ್ತು. ಮೇಲಾಗಿ ಈ ಆದಾಯ ರಕ್ಷಣೆಯ ಭರವಸೆಯನ್ನೂ ಆಧಾರಿಸಿಯೇ ಜಿಎಸ್‌ಟಿ ಪರಿಷತ್ತು ಆರ್ಥಿಕತೆಯ ಮೇಲೆ ಜಿಎಸ್‌ಟಿ ಹೆಚ್ಚಿನ ಪರಿಣಾಮವನ್ನು ಬೀರದಿರಲು ಹಾಗೂ ತೆರಿಗೆ ಕಟ್ಟುವುದನ್ನು ಸರಳೀಕರಿಸಲು ಬೇಕಾದ ವಿನ್ಯಾಸ, ರಚನೆ ಮತ್ತು ಆಡಳಿತಾತ್ಮಕ ನಿಯಮಗಳನ್ನು ರೂಪಿಸುವ ಪ್ರಯೋಗಗಳನ್ನು ಮಾಡುತ್ತಲಿದೆ. ಆದರೆ ಇಂದು ದೇಶದಲ್ಲಿ ಜಿಎಸ್‌ಟಿ ಸಂಗ್ರಹವೇ ಕುಸಿಯುತ್ತಿರುವಾಗ ಅದರಲ್ಲೂ, ಮುಖ್ಯವಾಗಿ, ಜಿಎಸ್‌ಟಿ ಆದಾಯ ಪರಿಹಾರದ ಅಗತ್ಯಗಳಿಗೂ ಮತ್ತು ಜಿಎಸ್‌ಟಿ ಪರಿಹಾರ ಹೆಚ್ಚುವರಿ ತೆರಿಗೆ ಸಂಗ್ರಹಗಳಿಗೂ ನಡುವಿನ ವ್ಯತ್ಯಾಸ ಬೆಳೆಯುತ್ತಾ, ಸರಿಯಾದ ಸಮಯದಲ್ಲಿ ಜಿಎಸ್‌ಟಿ ಪರಿಹಾರದ ಮೊತವನ್ನು ಬಿಡುಗಡೆಯ ವಿಷಯವು ಕೇಂದ್ರ ಹಾಗೂ ರಾಜ್ಯಗಳ ತಿಕ್ಕಾಟಗಳಿಗೆ ಕಾರಣವಾಗುತ್ತಿರುವಾಗ, ಈ ದೇಶದ ಆದಾಯ ಪರಿಹಾರ ವ್ಯವಸ್ಥೆಯನ್ನು ಸುಗಮಗೊಳಿಸುವುದರಲ್ಲಿ ಜಿಎಸ್‌ಟಿ ಪರಿಹಾರ ಕಾಯಿದೆಯ ಪರಿಣಾಮಕತೆ ಪ್ರಶ್ನಾರ್ಹವಾಗಿದೆ.

೨೦೧೫-೧೬ರಲ್ಲಿ ರಾಜ್ಯಗಳ ಎಲ್ಲಾ ತೆರಿಗೆಗಳೂ ಎಸ್‌ಜಿಎಸ್‌ಟಿಯಲ್ಲಿ ವಿಲೀನವಾಗುವ ಮುನ್ನ ಎಷ್ಟು ಮೊತ್ತದ ತೆರಿಗೆಯನ್ನು ಸಂಗ್ರಹಿಸುತ್ತಿದ್ದವೋ ಅದರ ಶೇ.೧೪ರಷ್ಟು ಹೆಚ್ಚುವರಿ ಮೊತ್ತವನ್ನು ಪ್ರತಿವರ್ಷ ರಾಜ್ಯಗಳ ತೆರಿಗೆ ಸಂಗ್ರಹವಾಗುತ್ತಿದ್ದವೆಂಬ ಲೆಕ್ಕದಲ್ಲಿ ರಾಜ್ಯಗಳ ಎಸ್‌ಜಿಎಸ್‌ಟಿ ಯನ್ನು ಅಂದಾಜಿಸಲಾಗಿದೆ. ಅದೇ ಸಮಯದಲ್ಲಿ ೨೦೨೨ರ ಜೂನ್  ೩೦

ರ ತನಕ ಜಿಎಸ್‌ಟಿ ಪರಿಹಾರವನ್ನು ಪಾವತಿಸಲು ೨೦೧೭ರ ಜುಲ ೧ ರಿಂದ ಪಾನ್ ಮಸಾಲ, ತಂಬಾಕು ಮತ್ತಿತರ ತಂಬಾಕು ಉತ್ಪನ್ನಗಳು, ನೀರು ಸೋಡಾ, ಪ್ರಯಾಣಿಕರ ವಾಹನ ಇವೇ ಇನ್ನಿತ್ಯಾದಿ ಸರಕುಗಳ ಮೇಲೆ ಜಿಎಸ್‌ಟಿ ಪರಿಹಾರ ಹೆಚ್ಚುವರಿ ತೆರಿಗೆಯನ್ನು ವಿಧಿಸಿ ಜಿಎಸ್‌ಟಿ ಪರಿಹಾರ ನಿಧಿಗೆ ಹೆಚ್ಚುವರಿ ಮೊತ್ತವನ್ನು ಸಂಗ್ರಹಿಸುವ ಪ್ರಯತ್ನವನ್ನು ಮಾಡುತ್ತಾ ಬರಲಾಗಿದೆ. ಆದರೂ ಜಿಎಸ್‌ಟಿ ಪರಿಹಾರ ಧನವನ್ನು ರಾಜ್ಯಗಳಿಗೆ ವಿತರಣೆ ಮಾಡುವುದರಲ್ಲಿ ಮಾತ್ರ ನಿರಂತರವಾಗಿ ವಿಳಂಬವಾಗುತ್ತಲೇ ಬಂದಿದೆ. ಉದಾಹರಣೆಗೆ ಏಪ್ರಿಲ್ ಮತ್ತು ಮೇ ತಿಂಗಳಲಿ ನೀಡಬೇಕಿದ್ದ ೧೭,೭೮೯ ಕೋಟಿ ರೂ.ಗಳ ಮೊತ್ತವು ಬಿಡುಗಡೆಯಾಗಿದ್ದು ೨೦೧೯ರ ಜುಲೈನಲ್ಲಿ. ಹಾಗೆಯೇ ೨೦೧೯ರ ಜೂನ್ ಮತ್ತು ಜುಲೈನಲ್ಲಿ ನೀಡಬೇಕಿದ್ದ ೨೭,೯೫೫ ಕೋಟಿ ರೂಗಳು ಬಿಡುಗಡೆಯಾಗಿದ್ದು ಆಗಸ್ಟ್‌ನಲ್ಲಿ. ಹಾಗೂ ೨೦೧೯ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನ ಬಾಕಿಯಾಗಿದ್ದ ೩೫,೨೯೮ ಕೋಟಿ ರೂ.ಗಳು ಬಿಡುಗಡೆಯಾಗಿದ್ದು ಡಿಸೆಂಬರ್ ಮಧ್ಯದಲ್ಲಿ.

ಜಿಎಸ್‌ಟಿ ಪರಿಹಾರ ಪಾವತಿಯಲ್ಲಿ ವಿಳಂಬವಾಗುತ್ತಿರುವುದು ಹೊಸದೇನೂ ಅಲ್ಲವಾದರೂ ಜಿಎಸ್‌ಟಿ ಪರಿಹಾರ ಪಾವತಿ ಸಂಬಂಧಿಸಿದಂತೆ ಹಾಲಿ ಉದ್ಭವವಾಗಿರುವ ಬಿಕ್ಕಟ್ಟಿನ ಹಿಂದಿನ ಕಾರಣಗಳು ವಿಶೇಷವಾಗಿವೆ. ಮೊದಲಿಗೆ ಎಸ್‌ಜಿಎಸ್‌ಟಿ ಸಂಗ್ರಹದಲ್ಲಿ ಕಂಡುಬಂದಿರುವ ಕುಸಿತ ಮತ್ತು ಭಾರತದ ಆರ್ಥಿಕತೆಯ ಒಟ್ಟಾರೆ ಇಳಿಮುಖತೆಯ ಕಾರಣದಿಂದಾಗಿ ಒಟ್ಟಾರೆ ಜಿಎಸ್‌ಟಿ ಸಂಗ್ರಹದಲ್ಲೇ ಇಳಿಕೆಯಾಗಿ ಉದ್ಭವಿಸಿರುವ ಆದಾಯ ಅನಿಶ್ಚತೆಯೇ ಹಾಲಿ ವಿಳಂಬಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಜಿಡಿಪಿಯ ದರದಲ್ಲಿ ಏರಿಕೆ ಕಂಡು ತೆರಿಗೆ ಸಂಗ್ರಹದ ಸಾಧ್ಯತೆಯು ಹೆಚ್ಚಾಗದೆ ಜಿಎಸ್‌ಟಿ ಪರಿಹಾರ ಪಾವತಿಯಲ್ಲಿ ವಿಳಂಬವು ಮುಂದುವರೆಯುವುದಲ್ಲದೆ ಬರುವ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಘರ್ಷಣೆಯೂ ಹೆಚ್ಚಾಗಲಿದೆ. ಎರಡನೆಯದಾಗಿ ಮೊದಲ ಕಾರಣವನ್ನು ಮತ್ತಷ್ಟು ಬಿಗಡಾಯಿಸುವ ಸಂಗತಿಯೇನೆಂದರೆ ಒಂದೊಮ್ಮೆ ಜಿಎಸ್‌ಟಿ ಪರಿಹಾರ ಹೆಚ್ಚುವರಿ ತೆರಿಗೆ ಕುಸಿದಲ್ಲಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಜಿಎಸ್‌ಟಿ ಕಾಯಿದೆಯು ಯಾವುದೇ ಮಾರ್ಗದರ್ಶನವನ್ನು ನೀಡುವುದಿಲ್ಲ. ಕಾಂiದೆಯ ವ್ಯಾಪ್ತಿಯಲ್ಲಿ ಜಿಎಸ್‌ಟಿ ವ್ಯವಸ್ಥೆಗೆ ಪರಿವರ್ತನೆಗೊಳ್ಳುತ್ತಿರುವ ಅವಧಿಯಲ್ಲಿ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಪಾವತಿ ಮಾಡುವುದು ಸಂಪೂರ್ಣವಾಗಿ ಕೇಂದ್ರದ ಜವಾಬ್ದಾರಿಯಾಗಿದೆ. ಆದರೆ ಆರ್ಥಿಕತೆಯು ಇಳಿಮುಖಗೊಂಡಿರುವ ಈ ಸಂದರ್ಭದಲ್ಲಿ  ಜಿಎಸ್‌ಟಿ ಪರಿಹಾರವನ್ನು ಪಾವತಿಸಲು ಹೆಚ್ಚುವರಿ ತೆರಿಗೆಯನ್ನು ಸಂಗ್ರಹಿಸುವುದು ಭಾರತದ ಸಾರ್ವಜನಿಕ ಹಣಕಾಸು ನಿರ್ವಹಣೆಗೆ ಸವಾಲಾಗಿ ಪರಿಣಮಿಸಲಿದೆ.

ಬಿಹಾರಿನಂತಹ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಬಹುಪಾಲು ರಾಜ್ಯಗಳಿಗೆ ಎಸ್‌ಜಿಎಸ್‌ಟಿ ಯಡಿ ವಿಲೀನವಾದ ತೆರಿಗೆ ಬಾಬತ್ತುಗಳಲ್ಲಿ ಶೇ.೧೪ರಷ್ಟು ಅಭಿವೃದ್ಧಿಯನ್ನು ಸಾಧಿಸುವ ಸಾಮರ್ಥ್ಯವಿಲ್ಲ. ಆದ್ದರಿಂದಲೇ ಆದಾಯ ರಕ್ಷಣೆಯ ಭರವಸೆಯು ಜಿಎಸ್‌ಟಿ ವ್ಯವಸ್ಥೆಯೊಡನೆ ಹೊಂದಿಕೊಂಡು ಹೋಗುವಂತಹ ವಿತ್ತೀಯ ಅವಕಾಶವನ್ನು ದೊರಕಿಸುತ್ತದೆ. ಈ ಕಾರಣಗಳಿಗಾಗಿಯೇ, ಜಿಎಸ್‌ಟಿ ಆದಾಯ ಪರಿಹಾರ ವ್ಯವಸ್ಥೆಯನ್ನು ಇನ್ನೂ ಮೂರು ವರ್ಷಗಳ ಕಾಲ ಅಂದರೆ ೨೦೨೪-೨೫ರವರೆಗೆ ವಿಸ್ತರಿಸಬೇಕೆಂದು ಹಲವಾರು ರಾಜ್ಯಗಳು ೧೫ನೇ ಹಣಕಾಸು ಅಯೋಗದ ಮೊರೆ ಹೋಗಿದ್ದಾರೆ. ಜಿಎಸ್‌ಟಿ ಪರಿಹಾರ ಅವಧಿಯನ್ನು ವಿಸ್ತರಿಸುವ ಅಧಿಕಾರವು ನಾಮಮಾತ್ರಕ್ಕೆ ಜಿಎಸ್‌ಟಿ ಪರಿಷತ್ತಿಗಿದೆಯಾದರೂ, ಅಂತಿಮ ತೀರ್ಮಾನವನ್ನು ಮಾತ್ರ ಕೇಂದ್ರ ಸರ್ಕಾರವೇ ತೆಗೆದುಕೊಳ್ಳಬೇಕಿರುತ್ತದೆ. ಆದರೆ ಒಟ್ಟಾರೆ ಜಿಎಸ್‌ಟಿ ಸಂಗ್ರಹವೇ ಕುಸಿದಿರುವಾಗ ಈ ಕೂಡಲೇ ಜಿಎಸ್‌ಟಿ ಪರಿಹಾರ ಹೆಚ್ಚುವg ತೆರಿಗೆಯನ್ನು ಈ ಸದ್ಯಕ್ಕೆ ಹಿಂತೆಗೆದುಕೊಳ್ಳುವ ಯಾವ ಸೂಚನೆಯೂ ಇಲ್ಲ. ಆದರೆ ಒಂದು ವೇಳೆ ಜಿಎಸ್‌ಟಿ ಪರಿಹಾರದ ಅವಧಿಯನ್ನು ಹೆಚ್ಚಿಸಿದರೂ, ತೆರಿಗೆ ಸಂಗ್ರಹ ಸಾಧ್ಯತೆ ಹೆಚ್ಚಾಗದೆ ಅಥವಾ ಒಟ್ಟಾರೆ ಜಿಡಿಪಿ ಅಭಿವೃದ್ಧಿಯಲ್ಲಿ ಹೆಚ್ಚಳವಾಗದೆ, ಈಗ ನಿಗzಯಾಗಿರುವ ಶೇ.೧೪ರ ತೆರಿಗೆ ಹೆಚ್ಚಳದ ದರದಲ್ಲಿ ಪರಿಹಾರವನ್ನು ಕೊಡುವಷ್ಟು ವಿತ್ತೀಯ ಸಾಮರ್ಥ್ಯವನ್ನು ಕೇಂದ್ರ ಸರ್ಕಾರವು ಹೊಂದಿದೆಯೇ?

ಹಾಲಿ ಪರಿಸ್ಥಿತಿಯು ಭಾರತದ ವಿತ್ತೀಯ ಒಕ್ಕೂಟ ರಚನೆಗೆ ಎದುರಾಗುತ್ತಿರುವ ಬಿಕ್ಕಟ್ಟಿನ ಮುನ್ಸೂಚನೆಯೇ? ಆ ಬಗೆಯ ಯಾವುದೇ ತೀರ್ಮಾನಗಳಿಗೆ ಬರಲು ಇನ್ನೂ ಸಮಯ ಬೇಕು. ಆದರೆ ಜಿಎಸ್‌ಟಿ ವ್ಯವಸ್ಥೆಗೆ ಸ್ಥಿತ್ಯಂತರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಆದಾಯ ರಕ್ಷಣೆಗೆ ನಿಗದಿಯಾಗಿರುವ ತೆರಿಗೆ ಸಂಗ್ರಹ ಹೆಚ್ಚಳದ ದರವನ್ನು ಏಕಪಕ್ಷೀಯವಾಗಿ ಕಡಿತ ಮಾಡುವುದು ವಿತ್ತೀಯ ಒಕ್ಕೂಟ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡುವ ಸಂಭವವನ್ನು ನಿರಾಕರಿಸಲಾಗುವುದಿಲ್ಲ. ತೆರಿಗೆ ನಷ್ಟಕ್ಕೆ ಸೂಕ್ತವಾದ ಪರಿಹಾರ ವ್ಯವಸ್ಥೆ ಇಲ್ಲವಾದಾಗ ಪರಿಹಾರದ ಅವಧಿಯ ನಂತರ ರಾಜ್ಯಗಳು ಜಿಎಸ್‌ಟಿ ವ್ಯವಸ್ಥೆಯೊಳಗೆ ಮುಂದುವರೆಯಲು ಬೇಕಾದ ಬಂಧವೇ ಇಲ್ಲವಾಗುತ್ತದೆ. ಅದೇ ಸಮಯದಲ್ಲಿ ಪರಿಹಾರ ವ್ಯವಸ್ಥೆಯು ನಿರಂತರವಾಗಿ ಮುಂದುವರೆಯುವುದೂ ಸಾಧ್ಯವಿಲ್ಲವೆಂಬುದನ್ನು ರಾಜ್ಯಗಳು ಅರ್ಥಮಾಡಿಕೊಂಡು ಬರಲಿರುವ ಪರಿಹಾರ ಮೊತ್ತವನ್ನು ಆಧರಿಸಿ ತಮ್ಮ ವೆಚ್ಚದ ಯೋಜನೆಯನ್ನು ರೂಪಿಸುವುದನ್ನೂ ಸಹ ಬಿಡಬೇಕಿರುತ್ತದೆ. ಹೀಗಾಗಿ ರಾಜ್ಯಗಳು ತಮ್ಮದೇ ಆದ ತೆರಿಗೆ ಹಾಗೂ ತೆರಿಗೆಯೇತರ ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳಬೇಕಿರುತ್ತದೆ ಅಥವಾ ತಮ್ಮ ಅನುತ್ಪಾದಕ ವೆಚ್ಚಗಳ ಮೇಲೆ ನಿಯಂತ್ರಣವನ್ನು ಸಾಧಿಸಿ ವಿತ್ತೀಯ ಧೃಢೀಕರಣದ ಹಾದಿಯನ್ನು ಹಿಡಿಯಬೇಕಿರುತ್ತದೆ. ಹೀಗಾಗಿ ಪರಿಹಾರದ ಅವಧಿಯಾದ ನಂತರದಲ್ಲಿ ಎದುರಾಗಬಹುದಾದ ಯಾವುದೇ ವಿತ್ತೀಯ ಆಘಾತವನ್ನು ಎದುರಿಸಲು ಬೇಕಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳುವುದಕ್ಕೆ ರಾಜ್ಯಗಳು ಈ ಅವಧಿಯನ್ನು ಬಳಸಿಕೊಳ್ಳಬಹುದು.

ಕೃಪೆ: Economic and Political Weekly

ಅನು: ಶಿವಸುಂದರ್

Categories
Breaking News District National Political State

ಟಿಬಿ ಡ್ಯಾಂನಲ್ಲಿ ಹೂಳು : ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಗಂಗಾವತಿ ರೈತ…

ತುಂಗಭದ್ರಾ ಡ್ಯಾಂನಲ್ಲಿ ಸಂಗ್ರಹವಾಗಿರುವ ಹೂಳಿನ ಸಮಸ್ಯೆಯಿಂದಾಗಿ ಪ್ರಧಾನಿಗೆ ಗಂಗಾವತಿಯ ರೈತನೊಬ್ಬ ರಕ್ತದಲ್ಲಿ ಪತ್ರ ಬರೆದಿದ್ದಾನೆ.

ಪರ್ಯಾಯ ಡ್ಯಾಂ ನಿರ್ಮಿಸಲು ಅಗತ್ಯ ಹಣಕಾಸು ನೆರವು ನೀಡುವಂತೆ ಪ್ರಧಾನಿಗೆ ಮನವಿ ಮಾಡಿದ್ದಾನೆ. ನರೇಂದ್ರ ಮೋದಿಗೆ ಪತ್ರ ಬರೆದ ಕಾರಟಗಿ ತಾಲೂಕಿನ ಸಿದ್ದಾಪೂರ ಗ್ರಾಮದ ಮಲ್ಲಿಕಾರ್ಜುನಗೌಡ, ಸೆ.17ರಂದು ರಕ್ತದಲ್ಲಿ ಐದು ಪುಟದ ಪತ್ರ ಬರೆದು ಮನವಿ ಮಾಡಿದ್ದಾರೆ. ಕೃಷ್ಣ ಮತ್ತು ತುಂಗಭದ್ರಾ ಮಧ್ಯದ ಪ್ರದೇಶ ದೋಅಬ್ ಪ್ರದೇಶವಾಗಿದ್ದು ಫಲವತ್ತಾದ ಭೂಮಿ ಇದ್ದರೂ ಸಮರ್ಪಕ ನೀರು ಬಳಕೆ ಮಾಡಲು ಡ್ಯಾಂ ಹಾಗೂ ಕಾಲುವೆಗಳ ನಿರ್ಮಾಣ ಆಗದಿರುವ ಬಗ್ಗೆ  ಪ್ರಸ್ತಾಪ ಮಾಡಿದ್ದಾರೆ.

ಸಿದ್ದಾಪೂರ ಗ್ರಾಮದಲ್ಲಿ ಮೋದಿಯವರ 69ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿರುವ ಮಲ್ಲಿಕಾರ್ಜುನಗೌಡ, ಪ್ರವಾಹ ಸಂದರ್ಭದಲ್ಲಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ರೈತರ ಗದ್ದೆಗೆ ಹರಿಸಲು ನವಲಿ ಗ್ರಾಮದ ಹತ್ತಿರ ನಿಯೋಜಿತ ಪರ್ಯಾಯ ಡ್ಯಾಂ ನಿರ್ಮಿಸಲು ಮನವಿ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನದಿಗಳ ನೀರನ್ನು ಸಮರ್ಪಕವಾಗಿ ಬಳಸಲು ತುಂಗಭದ್ರಾ ಹಾಗೂ ಕೃಷ್ಣಾನದಿಗೆ ಕಟ್ಟಲಾದ ಡ್ಯಾಂಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಿ ಅಗತ್ಯ ಹಣಕಾಸು ನೆರವು ನೀಡಬೇಕೆಂದು 100 ಮಿ . ಲೀ . ರಕ್ತ ಬಳಸಿ ಪತ್ರ ಬರೆದಿದ್ದಾರೆ.

 

 

Categories
Breaking News Featured National Political

PM ಮತ್ತು CM ಅವರೊಂದಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ಉನ್ನಾವೋ ಅತ್ಯಾಚಾರ ಆರೋಪಿ..

ಉನ್ನಾವೋದಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಯತ್ನದ ಆರೋಪಿ, ಸದಕ್ಕೆ ಜೈಲುವಾಸಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರು ಸ್ವಾತಂತ್ರ್ಯ ದಿನಾಚರಣೆಯ ಜಾಹೀರಾತುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಹಿಂದಿ ದಿನಪತ್ರಿಕೆಯ ಸ್ಥಳೀಯ ಆವೃತ್ತಿಯ ಪೂರ್ಣ ಪುಟದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ಬಿಜೆಪಿಯಿಂದ ಹೊರಹಾಕಲ್ಪಟ್ಟ ಸೆಂಗಾರ್, ಉನ್ನಾವೊದಲ್ಲಿನ ಉಗೂ ಪ್ರದೇಶದ ಪಂಚಾಯತ್ ಅಧ್ಯಕ್ಷರು ಧನಸಹಾಯ ನೀಡಿದ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಆಗಸ್ಟ್ 15 ರಂದು ರಕ್ಷಾ ಬಂಧನ್ ಹಬ್ಬದ ಸಲುವಾಗಿ ಅಲ್ಲಿನ ನಿವಾಸಿಗಳನ್ನು ಹಾರೈಸುವ ಉದ್ದೇಶದಿಂದ ಕೂಡಿದ ಜಾಹೀರಾತುಗಳಲ್ಲಿ ಸೆಂಗಾರ್ ಅವರ ಪತ್ನಿಯ ಫೋಟೋಗಳೂ ಸಹ ಇವೆ.

ಈ ಶಾಸಕನ ಮೇಲೆ ಹಲವಾರು ಆರೋಪಗಳಿವೆ. ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆಯತ್ನ, ಸಾಕ್ಷ್ಯ ನಾಶ, ಆಕೆಯ ತಂದೆಯ ಕೊಲೆ, ಅಧಿಕಾರ ದುರುಪಯೋಗ ಸೇರಿ ಹಲವು ಮೊಕದ್ದಮೆಗಳು ಸಹ ದಾಖಲಾಗಿ ದೇಶದ ಗಮನಸೆಳೆದಿವೆ. ಇಂತಹ ಕುಖ್ಯಾತ ಶಾಸಕನ ಭಾವಚಿತ್ರವನ್ನು ಜಾಹಿರಾತುಗಳಲ್ಲಿ ಹಾಕುವ ಮೂಲಕ ನೀವು ಯಾವ ಸಂದೇಶವನ್ನು ನೀಡುತ್ತಿದ್ದೀರಿ ಎಂದು ಪತ್ರಕರ್ತರೊಬ್ಬರು ಜಾಹೀರಾತು ನೀಡಿದವರಿಗೆ ಪ್ರಶ್ನಿಸಿದ್ದಾರೆ.

ಜಾಹೀರಾತನ್ನು ಕೊಟ್ಟಿದ್ದ ಉಗು ಪಂಚಾಯತ್ ಅಧ್ಯಕ್ಷ ಮತ್ತು ವಕೀಲ ಅನುಜ್ ಕುಮಾರ್ ದೀಕ್ಷಿತ್, ನಾನು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವನ್ನು ಹೊಂದಿಲ್ಲ . “ಕುಲದೀಪ್ ಸಿಂಗ್ ನಮ್ಮ ಪ್ರದೇಶದ ಶಾಸಕರಾಗಿದ್ದಾರೆ ಮತ್ತು ಆದ್ದರಿಂದ ಅವರ ಚಿತ್ರವಿದೆ. ನಾನು ಯಾವುದೇ ಪಕ್ಷವನ್ನು ಜಾಹೀರಾತಿನಲ್ಲಿ ಉಲ್ಲೇಖಿಸಿಲ್ಲ. ಅವರು ಶಾಸಕರಾಗುವವರೆಗೂ ನಾವು ಅವರ ಚಿತ್ರಗಳನ್ನು ಹಾಕುತ್ತೇವೆ” ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಕಳೆದ ವಾರ ದೆಹಲಿ ನ್ಯಾಯಾಲಯವು ಸೆಂಗಾರ್ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಆರೋಪಗಳನ್ನು ರೂಪಿಸಿತ್ತು. ಸಂತ್ರಸ್ತೆಯ ತಂದೆಯ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲೂ ಆತನನ್ನು ಆರೋಪಿಯನ್ನಾಗಿಸಿದ್ದು ಎಲ್ಲಾ ಪ್ರಕರಣಗಳನ್ನು ಉತ್ತರ ಪ್ರದೇಶದಿಂದ ದೆಹಲಿ ಕೋರ್ಟ್ ಗೆ ವರ್ಗಾಹಿಸಿದೆ ಮತ್ತು ಪ್ರತಿದಿನವೂ ವಿಚಾರಣೆ ನಡೆಸುತ್ತಿದೆ.

ಉನ್ನಾವೋ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿಗೆ ಕಳೆದ ತಿಂಗಳು ಮಾರಣಾಂತಿಕ ಅಪಘಾತ ನಡೆದ ನಂತರ ಅದು ಸಹ ಈ ಶಾಸಕನ ಪಿತೂರಿ ಎಂದು ಈತನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಪ್ರಸ್ತುತ ಅವರನ್ನು ದೆಹಲಿ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.

ಬಹಳಷ್ಟು ದೇಶಗಳಲ್ಲಿ ಜನರಿಗೆ ಕೇವಲ ಸ್ವಾತಂತ್ರ್ಯವಲ್ಲ ಸ್ವೇಚ್ಛಾಚಾರಕ್ಕೂ ಅವಕಾಶವಿದೆ. ಆದರೆ ಅಲ್ಲಿ ಸಾರ್ವಜನಿಕ ಜೀವನದಲ್ಲಿರುವ ಆಳುವವರು, ಜನಪ್ರತಿನಿಧಿಗಳು ಮಾತ್ರ ಬಹಳ ಚಾರತ್ರ್ಯವಂತರಾಗಿ ನಡೆದುಕೊಳ್ಳಬೇಕಿರುತ್ತದೆ. ಯಾವುದೇ ಒಂದು ಸಣ್ಣ ಆರೋಪ ಕೇಳಿಬಂದರೂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.

ಅದರೆ ನಮ್ಮ ದೇಶದಲ್ಲಿ ಇಂತಹ ನಡೆತೆಗೆಟ್ಟ, ಮಾನಗೆಟ್ಟ ಶಾಸಕರು ಸಿಗುತ್ತಾರೆ ಮಾತ್ರವಲ್ಲ ಅವರ ಭಾವಚಿತ್ರ ನಮ್ಮ ಮನೆಗೆ ತಲುಪುವ ದಿನಪತ್ರಿಕೆ ಮುಖಪುಟದಲ್ಲಿ ದೊಡ್ಡದಾಗಿ ಮಿಂಚುತ್ತಿರುತ್ತದೆ!!! ಈಗ ಹೇಳಿ ಇದು ಭಾರತದಲ್ಲಿ ಮಾತ್ರ ಸಾಧ್ಯ ಅಲ್ಲವೇ?

Categories
Breaking News Cinema National Political

ಮೋದಿ ಮನದಾಳದ ಮಾತು ಹಿಕ್ಕಿ ತೆಗೆದ ಅಕ್ಷಯ್ : ಪಿಎಂ ಸಿಟ್ಟನ್ನು ಗುಟ್ಟಾಗಿ ಇರಿಸಿಕೊಳ್ಳುವುದು ಹೇಗೆ…?

ದೇಶದ ಪ್ರಧಾನಿ ನರೇಂದ್ರ ಮೋದಿ ಸಂದರ್ಶನ ಮಾಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೋದಿ ಮನದಾಳ ಹಿಕ್ಕಿ ತೆಗೆದಿದ್ದಾರೆ. ಸಂದರ್ಶನದಲ್ಲಿ ‘ಕಿಲಾಡಿ ಜೊತೆ ಮನ್ ಕಿ ಬಾತ್’ ಹಂಚಿಕೊಂಡಿದ್ದಾರೆ ಮೋದಿಜಿ.

ಸೆಲೆಬ್ರೆಟಿ ಅಕ್ಷಯ್ ಕುಮಾರ, ಮೋದಿ ಜೊತೆಗೆ ರಾಜಕೀಯ ಮಾತುಗಳಿಲ್ಲ ಓನ್ಲಿ ‘ಖಾಸ್ ಬಾತ್’ ನಡೆಸಿದರು. ಇದರಲ್ಲಿ ಖಾಸಗಿ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನ ಮಾತ್ರ ಮಾತನಾಡಲಾಯಿತ್ತು.

ರಾಜಕೀಯವಾಗಿ ಯಾರೇ ಎಷ್ಟೇ ವಿರೋಧ ಮಾತನಾಡಿದರು ವೈಯಕ್ತಿಕವಾಗಿ ಹೇಗಿರುತ್ತಾರೆ ಅನ್ನೋದಕ್ಕೆ ಮೋದಿ ಜಿ ಹೇಳಿದ ಈ ಮಾತುಗಳು ಸಾಕ್ಷಿಯಾಗಿದ್ದವು. ಪ್ರತೀ ವರ್ಷ ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ – ಕುಡ್ತಾ , ಸ್ವೀಟ್ಸ್ ಕಳುಹಿಸಿಕೊಡುತ್ತಾರೆ ಎಂದು ಮೋದಿ ಹೇಳಿಕೊಂಡಿದ್ದಾರೆ.

ತಾವು ಚಿಕ್ಕವರಿರುವಾಗ ಸೈನಿಕರನ್ನು ನೋಡಿ ದೇಶ ಕಾಯಬೇಕು ಅನ್ನೋ ಆಸೆ ಇತ್ತು ಆದರೆ ಪ್ರಧಾನಿ ಆಗುತ್ತೇನೆ ಎಂದು ನನಗೆ ತಿಳಿದಿರಲಿಲ್ಲ.  ದೇವೇಗೌಡರು ಅಲ್ಪಕಾಲ ಮುಖ್ಯಮಂತ್ರಿಯಾಗಿದ್ದರು ಆನಂತರ ಪ್ರಧಾನಿಯಾದರು. ಆದರೆ ನಾನು ಅಧಿಕ ಕಾಲ ಸಿಎಂ ಆಗಿ ಪ್ರಧಾನಿ ಆದೆ ಎನ್ನುವ ಮಾತನ್ನ ಪ್ರಧಾನಿ ಈ ವೇಳೆ ಹೇಳಿದರು.

ರಾಜಕೀಯೇತರ ಪ್ರಶ್ನೆಗಳಿಗೆ ಮೋದಿಗೆ ಕೇಳಲಾಗಿತ್ತು. ಕೋಪ ಬರೋದಿಲ್ವಾ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟ ಮೋದಿ ‘ ನನಗೆ ಕೋಪ ಬಂದರೆ ಆಗಿರುವ ಸಂದರ್ಭವನ್ನು ಕುಳಿತು ಒಂದು ಹಾಳೆಯ ಮೇಲೆ ಬರೆಯುತ್ತೇನೆ ನಂತರ ಓದುವುದಿಲ್ಲ ಅದನ್ನು ಹರೆದು ಹಾಕುತ್ತೇನೆ.

ಬರೆಯುವ ಹೊತ್ತಿಗೆ ನನಗೆ ಗೊತ್ತಾಗುತ್ತದೆ ಯಾರದು ತಪ್ಪು ಎಂದು. ಕೋಪ ಇನ್ನೂ ಇದ್ದರೆ ನಾನು ಮತ್ತೆ ಬರೆಯುತ್ತೇನೆ ಸಂದರ್ಭವನ್ನು. ಹೀಗೆ ಮೋದಿಜಿ ತಮ್ಮ ಕೋಪ ಶಮನದ ಬಗ್ಗೆ  ಅಕ್ಷಯ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Categories
Breaking News District National Political State

ಪುಲ್ವಾಮಾ ಉಗ್ರರ ದಾಳಿ ಘಟನೆ : ಸಿಎಂ ಹೇಳಿಕೆಗೆ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು

ಪುಲ್ವಾಮಾ ಉಗ್ರರ ದಾಳಿ ಘಟನೆ ಬಗ್ಗೆ ಮೊದಲೇ ಗೊತ್ತಿತ್ತೆಂಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ಉಗ್ರರ ದಾಳಿ ಘಟನೆ ಬಗ್ಗೆ ಅವರಣ್ಣ ರೇವಣ್ಣ ಭವಿಷ್ಯ ಏನಾದರೂ ಹೇಳಿದ್ದರಾ? ಎಂದು ಅವರು ವ್ಯಂಗ್ಯವಾಡಿದ್ದಾರೆ. ಎಡಗೈಯ್ಯಲ್ಲಿ ನಾಲ್ಕು , ಬಲಗೈಯ್ಯಲ್ಲಿ ನಾಲ್ಕು ನಿಂಬೆ ಹಣ್ಣು ಹಿಡ್ಕೊಂಡು ರೇವಣ್ಣ ಭವಿಷ್ಯ ಹೇಳಿರಬಹುದು ಎಂದು ಕಿಡಿಕಾರಿದ ಅವರು ಮುಖ್ಯಮಂತ್ರಿ ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ವರ್ತಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುಲ್ವಾಮ ಘಟನೆ ಬಗ್ಗೆ ಗೊತ್ತಿದ್ರೆ ಎರಡು ವರ್ಷದ ಮೊದಲೇ ಹೇಳಬೇಕಿತ್ತು. ಚುನಾವಣೆ ಸಂದರ್ಭದಲ್ಲಿ ಹೇಳುವ ಅಗತ್ಯ ಏನಿತ್ತು? ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಮೈತ್ರಿಯೆಂಬ ತೇಪೆಯೊಳಗೆ ಎಲ್ಲಾ ಒಡೆದಿದೆ. ಮಂಡ್ಯ ಗೆಲ್ಲುವುದಿಲ್ಲ ಎಂಬೂದು ಸಿಎಂ ಗೆ ಗೊತ್ತಾಗಿದೆ. ತುಮಕೂರು, ಹಾಸನ ಕಷ್ಟವಿದೆ ಅಂತ ಸಿಎಂ ಗೆ ಅರಿವಾಗಿದೆ ಎಂದು ಅವರು ಹೇಳಿದರು. ಜೆಡಿಎಸ್ ನ ಕೌಟುಂಬಿಕ ರಾಜಕಾರಣದ ಕೊನೆಯ ದಿನಗಳು ನಡೆಯುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟರು.

Categories
Breaking News National Political State

‘ಮೈ ಬೀ ಚೌಕಿದಾರ್’ ಅಭಿಯಾನ ಪ್ರಾರಂಭ : ದೇಶಕ್ಕೆ ಬೇಕಾಗಿರುವುದು ಪ್ರಧಾನಿ!

ಪ್ರಧಾನಿ ಮೋದಿ ಅವರು ಮೈ ಬೀ ಚೌಕಿದಾರ್ ಅಭಿಯಾನ ಪ್ರಾರಂಭಿಸಿದ್ದು ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈ ಮಧ್ಯೆ ಯುವಕನೋರ್ವ ಕಾರ್ಯಕ್ರಮವೊಂದರಲ್ಲಿ ದೇಶಕ್ಕೆ ಬೇಕಾಗಿರುವುದು ಪ್ರಧಾನಿ, ಚೌಕಿದಾರ್ ಅಲ್ಲ ಎಂದು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಆಜ್ ತಕ್ ಸುದ್ದಿ ವಾಹಿನಿಯಲ್ಲಿ ಟಕ್ಕರ್ ಎಂಬ ಚರ್ಚಾ ಕಾರ್ಯಕ್ರಮದಲ್ಲಿ ಯುವಕನೊಬ್ಬ ಮೋದಿಯವರ ಚೌಕಿದಾರ್ ಅಭಿಯಾನವನ್ನು ವಿಮರ್ಶಿಸಿದ್ದಾನೆ. ವೇದಿಕೆಯಲ್ಲಿ ಬಿಜೆಪಿ ವಕ್ತಾರರನ್ನು ಪ್ರಶ್ನಿಸಿದ ಯುವಕ ನೀವು ಅಂದೊಮ್ಮೆ ಪಕೋಡಾ ಮಾರಲು ಹೇಳಿದ್ದೀರಿ, ಈಗ ನೀವು ಚೌಕಿದಾರ್ ಬಗ್ಗೆ ಹೇಳುತ್ತಿದ್ದೀರಿ.

ನಮಗೆ ಚೌಕಿದಾರ್ ಬೇಕಾದರೆ ಕಡಿಮೆ ಬೆಲೆಗೆ ನೇಪಾಳದಿಂದ ಸಿಗುತ್ತಾರೆ. ದೇಶಕ್ಕೆ ಬೇಕಾಗಿರುವುದು ಪ್ರಧಾನಿ. ಚೌಕಿದಾರ್ ಅಲ್ಲ ಎಂದು ಕೇಳಿದ್ದಾನೆ.

Categories
Breaking News National Political State

ಮೋದಿ ಮತ್ತೆ ಪ್ರಧಾನಿಯಾಗಲಾರರು ಎಂಬ ಸುಳಿವು ನೀಡುತ್ತಿದೆಯೇ ಬಿಜೆಪಿ-ಶಿವಸೇನೆ ಮೈತ್ರಿ?

ಬಿಜೆಪಿ ಮತ್ತು ಶಿವಸೇನೆ ಮತ್ತೆ ಮೈತ್ರಿ ಮಾಡಿಕೊಂಡಿವೆ. ಇವೆರಡೂ ಅವಲಂಬಿಸಿರುವ ವೋಟ್ ಬ್ಯಾಂಕ್ ರಾಜಕಾರಣ ಬಲ್ಲವರಿಗೆ ಇದರಲ್ಲಿ ಅಚ್ಚರಿ ಪಡುವಂತದ್ದೇನೂ ಇಲ್ಲ. ಯಾಕೆಂದರೆ ಈ ಎರಡೂ ಪಕ್ಷಗಳಿಗೆ ‘ಹಿಂದೂತ್ವ’ವೇ ಬಂಡವಾಳ. ಒಂದೇ ಬಂಡವಾಳವನ್ನು ಇಬ್ಬರು ಹಂಚಿಕೊಂಡರೆ ಬರುವ ಲಾಭವೂ ಕಡಿಮೆ ಎಂಬುದು ಕಾಮನ್‌ಸೆನ್ಸ್. ಆ ನಿಟ್ಟಿನಿಂದ ಸುಮಾರು ಎರಡು ದಶಕಗಳ ಈ ಹಳೇ ಮಿತ್ರರ ಮರುಹೊಂದಾಣಿಕೆ ಅಚ್ಚರಿ ಹುಟ್ಟಿಸುವುದಿಲ್ಲ. ಆದಾಗ್ಯೂ ಬಿಜೆಪಿ-ಶಿವಸೇನೆ ಮೈತ್ರಿ ರಾಷ್ಟ್ರ ರಾಜಕಾರಣದಲ್ಲಿ ಬೇರೊಂದು ಆಯಾಮದಿಂದ ಗಮನ ಸೆಳೆಯುತ್ತದೆ. ಅದು ಮೋದಿಯವರ ರಾಜಕೀಯ ಭವಿಷ್ಯಕ್ಕೆ ಸಂಬಂಧಪಟ್ಟದ್ದು.
ಬಹುಶಃ ಇತ್ತೀಚಿನ ವರ್ಷಗಳಲ್ಲಿ ಮೋದಿಯವರನ್ನು ಮತ್ತು ಕೇಂದ್ರ ಸರ್ಕಾರವನ್ನು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗಿಂತಲೂ ಕಟುವಾಗಿ ಟೀಕಿಸುತ್ತಾ ಬಂದದ್ದು ಶಿವಸೇನೆ. ರಾಮಮಂದಿರ ನಿರ್ಮಾಣದ ವಿಚಾರ ಇರಬಹುದು, ರಫೇಲ್ ಹಗರಣವಿರಬಹುದು, ಪಾಕಿಸ್ತಾನದೊಂದಿಗೆ ವಿದೇಶಾಂಗ ನೀತಿಗಳಿರಬಹುದು ಎಲ್ಲಾ ವಿಚಾರಗಳಲ್ಲೂ ಶಿವಸೇನೆ ಮೋದಿಯವರ ಕಾಲೆಳೆಯುವ ಅವಕಾಶವನ್ನು ಮಿಸ್ ಮಾಡಿಕೊಂಡಿಲ್ಲ. ಎಷ್ಟರಮಟ್ಟಿಗೆ ಅಂದರೆ, ರಾಹುಲ್ ಗಾಂಧಿಯವರ ಪಾಪ್ಯುಲರ್ ಸ್ಲೋಗನ್ ಆದ ‘ಚೌಕಿದಾರ್ ಹೀ ಚೋರ್ ಹೈ’ ಹೇಳಿಕೆಯನ್ನು ಶಿವಸೇನೆಯ ಸುಪ್ರಿಮೋ ಉದ್ಧವ್ ಠಾಕ್ರೆ ಬಹಿರಂಗವಾಗಿ ಪುನರುಚ್ಚರಿಸಿ ಬಿಜೆಪಿಯನ್ನು ಹಂಗಿಸಿದ್ದರು. ಮಹಾರಾಷ್ಟ್ರದ ಬಿಜೆಪಿ ಸಿಎಂ ದೇವೇಂದ್ರ ಫಡ್ನವೀಸ್‌ರವರು ‘ಪ್ರಧಾನಿ ಮೋದಿಯನ್ನು ಟೀಕಿಸುವುದೆಂದರೆ ಸೂರ್ಯನಿಗೆ ಉಗಿದಂತೆ. ಉಗಳು ಯಾರ ಮೇಲೆ ಬೀಳುತ್ತೆ ಅಂತ ಟೀಕಿಸುವವರಿಗೆ ಗೊತ್ತಿರಬೇಕು’ ಎಂದು ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದರು. ಇದೆಲ್ಲ ನಡೆದದ್ದು ತೀರಾ ಇತ್ತೀಚೆಗಷ್ಟೆ. ಇನ್ನು ತೆಲುಗುದೇಶಂ ಪಾರ್ಟಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಕೇಂದ್ರ ಬಿಜೆಪಿ ಸರ್ಕಾರ ವಿರುದ್ಧದ ಎಲ್ಲಾ ಪಕ್ಷಗಳ ಪ್ರತಿಭಟನೆಗೂ ಶಿವಸೇನೆ ತನ್ನ ಪ್ರತಿನಿಧಿಯನ್ನು ಕಳಿಸಿಕೊಟ್ಟಿತ್ತು. ಅಷ್ಟೆಲ್ಲಾ ಯಾಕೆ, ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ‘ಉಗ್ರರನ್ನು ಮಟ್ಟಹಾಕಲು ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ’ ಎಂದು ಬಿಜೆಪಿ ಪ್ರಚಾರಕ್ಕೆ ಮುಂದಾದಾಗ ಇದೇ ಉದ್ಧವ್ ಠಾಕ್ರೆ ’ಸೈನಿಕರ ಬಲಿದಾನವನ್ನು ಬಿಜೆಪಿ ಹೀಗೆ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಹೇಯ ಕೃತ್ಯ’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಉದ್ದವ್ ಠಾಕ್ರೆ, ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಮತ್ತು ದೇವೇಂದ್ರ ಫಡ್ನವೀಸ್ ಕೈಕೈಹಿಡಿದು ಮೈತ್ರಿಯನ್ನು ಸಾರಿದರು!
ಇಲ್ಲಿ ಶಿವಸೇನೆ ಎಂಬ ಪ್ರಾದೇಶಿಕ ಪಕ್ಷವೊಂದರ ರಾಜಕೀಯ shiಜಿಣ oveಡಿ, ಅದರ ನುಡಿ ಮತ್ತು ನಡೆಗಿಂತ ಹೆಚ್ಚಾಗಿ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷವೊಂದು ತನ್ನನ್ನು ಮತ್ತು ತನ್ನ ಪ್ರಧಾನಿಯನ್ನು ಕೊನೇ ಕ್ಷಣದವರೆಗು ಕಾಡಿದ ಪಾರ್ಟಿಯನ್ನು ಸಹಿಸಿಕೊಳ್ಳುವ ತೀರ್ಮಾನ ಕೈಗೊಂಡಿದ್ದೇಕೆ? ಎಂಬುದು ಇಂಟರೆಸ್ಟಿಂಗ್ ವಿಷಯ. ನೋ ಡೌಟ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಂತಹ ‘ಹಿಂದಿ ಹಾರ್ಟ್‌ಲ್ಯಾಂಡ್’ ಚುನಾವಣೆಗಳಲ್ಲಿ ಸೋತ ನಂತರ ಬಿಜೆಪಿಗೆ ರಾಜಕೀಯ ಪರಿಸ್ಥಿತಿಯ ಅಂದಾಜು ಸಿಕ್ಕಿದೆ ಮತ್ತು ಆ ಅಂದಾಜಿನ ಪ್ರಕಾರ 2019ರ ಎಲೆಕ್ಷನ್‌ನಲ್ಲಿ ಕಳೆದ ಸಾರಿಯಂತೆ ತಾನು ಒಂಟಿಯಾಗಿ ಅಧಿಕಾರ ರಚಿಸಲು ಸಾಧ್ಯವಿಲ್ಲ, ಮಿತ್ರಪಕ್ಷಗಳ ಮೈತ್ರಿ ಅನಿವಾರ್ಯತೆ ಅರ್ಥವಾಗಿದೆ ಅದರಿಂದಲೇ ಈಗ ಶಿವಸೇನೆ, ಎಐಎಡಿಎಂಕೆಗಳ ಜೊತೆ ಕೈಜೋಡಿಸುತ್ತಿದೆ ಎಂಬುದು ಸೀದಾಸಾದಾ ಅರ್ಥವಾಗುವ ವಿಷಯ. ನಿರ್ದಿಷ್ಟವಾಗಿ ಶಿವಸೇನೆಯ ವಿಚಾರಕ್ಕೆ ಬಂದರೆ, ಇದನ್ನೂ ಮೀರಿದ ರಾಜಕೀಯ ಲೆಕ್ಕಾಚಾರವೊಂದು ನಮ್ಮ ಗಮನಕ್ಕೆ ಬರುತ್ತದೆ. ಇದು ನಮಗೆ ಅರ್ಥವಾಗಬೇಕೆಂದರೆ ಶಿವಸೇನೆ-ಬಿಜೆಪಿ ನಡುವಿನ ಮೈತ್ರಿ ಯಾಕೆ ಮುರಿದುಬಿದ್ದಿತ್ತು ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು.
1960ರಲ್ಲಿ ಮಹಾರಾಷ್ಟ್ರ ಸ್ವತಂತ್ರ ರಾಜ್ಯವಾಗಿ ಉದಯಿಸಿದ ಮೇಲೆ ಬಹುಪಾಲು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮಿತ್ರಕೂಟಗಳ ಆಳ್ವಿಕೆಯಲ್ಲೇ ಇದ್ದ ಅಲ್ಲಿ 1995ರಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ರಚಿಸಲು ಶಿವಸೇನೆಗೆ ಸಾಧ್ಯವಾದದ್ದು ಬಿಜೆಪಿ ಜೊತೆಗಿನ ಮೈತ್ರಿಯಿಂದ. ಅಲ್ಲಿಂದ ಶುರುವಾದ ಆ ದೋಸ್ತಿ ಎರಡು ದಶಕಗಳ ಕಾಲ ನಿರಾತಂಕವಾಗಿ ಮುಂದುವರೆದಿತ್ತು. ಹಾಗೆ ನೋಡಿದರೆ, ಶಿವಸೇನೆಯ ಹೆಗಲೇರಿಕೊಂಡೇ ಬಿಜೆಪಿ ಮಹಾರಾಷ್ಟ್ರದಲ್ಲಿ ಗಟ್ಟಿ ನೆಲೆಕಂಡುಕೊಳ್ಳಲು ಸಾಧ್ಯವಾದದ್ದು. ಆದರೆ 2014ರ ಲೋಕಸಭಾ ಚುನಾವಣೆಯ ತರುವಾಯ ದೋಸ್ತಿಯೊಳಗೆ ಹಳೆಯ ವಿಶ್ವಾಸ ಉಳಿದುಕೊಳ್ಳಲಿಲ್ಲ. ಅದಕ್ಕೆ ಮುಖ್ಯ ಕಾರಣವಾದದ್ದು ಮೋದಿಯವರ Personal ego!
ಎಂಪಿ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿ ಬಿಜೆಪಿ ಪ್ರಚಂಡ ಜಯಸಾಧಿಸಿದ್ದು ಮೋದಿ ಕೇಂದ್ರಿತ ಚುನಾವಣಾ ಪ್ರಚಾರದಿಂದ. ಹಾಗಾಗಿ ಮೋದಿ ಪಕ್ಷದೊಳಗೆ ಬಲಾಢ್ಯವಾಗುತ್ತಾ ಬಂದರು. ಅಡ್ವಾಣಿಯಂತಹ ಹಿರಿಯ ನಾಯಕರೂ ದನಿ ಕಳೆದುಕೊಂಡರು. ಪಕ್ಷದೊಳಗಿನ ನಾಯಕರೇ ಮಂಕಾಗಿರಬೇಕೆಂದು ಬಯಸುತ್ತಿದ್ದ ಮೋದಿಯವರಲ್ಲಿ ಮಿತ್ರಪಕ್ಷಗಳ ಬಗ್ಗೆಯೂ ಆದರ ಉಳಿಯಲಿಲ್ಲ. ಅದರ ಮೊದಲ ಬಲಿಪಶು ಈ ಶಿವಸೇನೆ. ಎಂಪಿ ಎಲೆಕ್ಷನ್ ಗೆಲುವಿನ ಹ್ಯಾಂಗ್‌ಹೋವರ್ ಇಳಿಯುವ ಮುನ್ನವೇ ಅಂದರೆ, ಆರು ತಿಂಗಳ ಒಳಗೇ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಎದುರಾಯ್ತು. ಇದೇ ಗೆಲುವಿನ ಅಲೆಯಲ್ಲಿ, ಸ್ವತಂತ್ರವಾಗಿ ಸ್ಪರ್ಧಿಸಿದರೂ ಮಹಾರಾಷ್ಟ್ರದಲ್ಲಿ ಸುಸೂತ್ರವಾಗಿ ಅಧಿಕಾರ ಹಿಡಿದುಬಿಡುತ್ತೇವೆ ಎಂಬ ಲೆಕ್ಕಾಚಾರದಲ್ಲಿ ಮೋದಿ-ಶಾ ಜೋಡಿ ಶಿವಸೇನೆ ಜೊತೆಗಿನ ಸೀಟು ಹೊಂದಾಣಿಕೆಯಲ್ಲಿ ತಕರಾರು ಬರುವಂತೆ ನೋಡಿಕೊಂಡಿತು. ಒಳಗೊಳಗೇ ಸ್ವತಂತ್ರವಾಗಿ ಚುನಾವಣೆ ಎದುರಿಸಲು ಏನೆಲ್ಲ ತಯಾರಿಗಳು ಬೇಕೊ ಅದನ್ನೆಲ್ಲ ಬಿಜೆಪಿ ಮಾಡಿಕೊಳ್ಳುತ್ತಿದ್ದರೂ ಚುನಾವಣೆ ಇನ್ನು ಹದಿನೈದು ದಿನ ಇದೆ ಎನ್ನುವವರೆಗೂ ಶಿವಸೇನೆ ಸೀಟು ಹಂಚಿಕೆ ಕಗ್ಗಂಟು ಬಗೆಹರಿದು ಚುನಾವಣಾ ಹೊಂದಾಣಿಕೆ ಘಟಿಸುತ್ತೆ ಎಂಬ ಕುರುಡು ನಂಬಿಕೆಯಲ್ಲೇ ಇತ್ತು. ಆದರೆ ಅದು ಸುಳ್ಳಾಯ್ತು. ಮೈತ್ರಿ ಮುರಿದುಬಿತ್ತು. ಇಂಥಾ ಪರಿಸ್ಥಿತಿಗೆ ಸಿದ್ಧವಾಗಿದ್ದ ಬಿಜೆಪಿ ಒಟ್ಟು 288 ಕ್ಷೇತ್ರಗಳ ಪೈಕಿ 262ರಲ್ಲಿ ಸ್ಪರ್ಧಿಸಿ 122 ಸ್ಥಾನ ಗೆದ್ದು ಬಹುದೊಡ್ಡ ಪಕ್ಷವಾಗಿ ಹೊಮ್ಮಿದರೆ, ಸ್ವತಂತ್ರ ಸ್ಪರ್ಧೆಗೆ ಯಾವ ತಯಾರಿಯನ್ನೂ ಮಾಡಿಕೊಳ್ಳದ ಶಿವಸೇನೆ 282 ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಗೆದ್ದದ್ದು 66 ಸ್ಥಾನ ಮಾತ್ರ!
ಆನಂತರವೂ ಸಂಖ್ಯಾಬಲವಿಲ್ಲದ ಬಿಜೆಪಿ ಮೈತ್ರಿಗಾಗಿ ಶರದ್ ಪವಾರ್‌ರನ್ನು ವಿಶ್ವಾಸಕ್ಕೆ ತೆಗೆದುಕೊಂಡಿತೇ ವಿನಾಃ ಶಿವಸೇನೆಯನ್ನಲ್ಲ. ‘ಯಜಮಾನಿಕೆ’ ಧೋರಣೆ ಮೇಲೆಯೇ ಪಕ್ಷ ಕಟ್ಟಿಕೊಂಡ ಶಿವಸೇನೆ ನಾಯಕರಿಗೆ ಇದು ತಮಗೆ ಮಾಡಿದ ದೊಡ್ಡ ಅವಮಾನದಂತೆ ಭಾಸವಾದುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಅಲ್ಲಿಂದಾಚೆಗೆ ಮೋದಿ ಮತ್ತು ಶಿವಸೇನೆಯ ಸಂಬಂಧ ಬಿಗಡಾಯಿಸುತ್ತಲೇ ಬಂದಿತು. ‘ಹಿಂದೂತ್ವ’ವನ್ನೇ ತನ್ನ ಅಜೆಂಡಾವಾಗಿಸಿಕೊಂಡಿರುವ ಶಿವಸೇನೆಗೆ ಅದೇ ಸಿದ್ಧಾಂತದ ಬಿಜೆಪಿ ಜೊತೆ ಮುನಿಸಿಕೊಳ್ಳಲು ಬೇರಾವ ಕಾರಣಗಳೂ ಇಲ್ಲ, ಏಕೈಕ ಕಾರಣ ಅದು ಮೋದಿಯವರ egoistic ವರ್ತನೆ!
ಈಗ ಪ್ರಸ್ತುತ ವಿದ್ಯಮಾನದ ಒಳಗುಟ್ಟು ನಮಗೆ ಅರ್ಥವಾಗುತ್ತೆ. ಯಾವ ಮೋದಿಯನ್ನು ಶಿವಸೇನೆ ವಿರೋಧಿಸುತ್ತಿತ್ತೊ ಅದೇ ಮೋದಿಯ ಕೈಬಲಪಡಿಸಲು ಮೈತ್ರಿ ಮಾಡಿಕೊಳ್ಳುತ್ತದಾ? ಬಿಜೆಪಿಯೊಳಗೆ ನಿತಿನ್ ಗಡ್ಕರಿ ಹೆಸರು ಮುನ್ನೆಲೆಗೆ ಬರುತ್ತಿರುವ ಕಾಲದಲ್ಲೇ ಶಿವಸೇನೆ ಮೈತ್ರಿಗೆ ಓಕೆ ಎಂದಿರುವುದು ಕೇವಲ ಕಾಕತಾಳೀಯವಲ್ಲ. ಅದರ ಹಿಂದೆ ಸ್ಪಷ್ಟ ಲೆಕ್ಕಾಚಾರಗಳಿವೆ. ಮೋದಿ-ಶಾ ವಿರುದ್ಧ ಬಿಜೆಪಿಯಲ್ಲಿ ಅಪಸ್ವರಕ್ಕೆ ಆಸ್ಪದವೇ ಇಲ್ಲ ಎನ್ನುವಂತಿದ್ದ ವಾತಾವರಣದಲ್ಲಿ ನಿತಿನ್ ಗಡ್ಕರಿ ‘ಮೂರು ರಾಜ್ಯಗಳ ಚುನಾವಣಾ ಸೋಲಿಗೆ ಬಿಜೆಪಿ ಅಧ್ಯಕ್ಷರೇ ಹೊಣೆ ಹೊತ್ತುಕೊಳ್ಳಬೇಕು’, ‘ತನ್ನ ಸಂಸಾರವನ್ನು ಸಾಕಲಾಗದ ವ್ಯಕ್ತಿ ದೇಶವನ್ನು ಹೇಗೆ ಮುನ್ನಡೆಸಿಯಾನು’ ಎಂಬಿತ್ಯಾದಿ ಕಾಂಟ್ರವರ್ಸಿ ಹೇಳಿಕೆಗಳ ಮೂಲಕ ರೆಬೆಲ್ ಆದದ್ದು ಒಂದು ನಿರ್ದಿಷ್ಟ, ನಿರ್ದೇಶಿತ ಉದ್ದೇಶಕ್ಕೆ. 2019ರಲ್ಲಿ ಸರ್ಕಾರ ರಚನೆಗೆ ಮಿತ್ರಪಕ್ಷಗಳು ಅನಿವಾರ್ಯ ಎನಿಸಿದಾಗ, ಯಾವ ಮೋದಿಯವರ ವರ್ತನೆಯನ್ನು ವಿರೋಧಿಸಿ ಅವರೆಲ್ಲ ಹಿಂದೆ ಸರಿದಿದ್ದವೋ ಅದೇ ಮೋದಿಯನ್ನು ಮುಂದಿಟ್ಟುಕೊಂಡು ಬೆಂಬಲ ಕೇಳಿದರೆ ಒಪ್ಪಲಾರವು. ಒಂದು ತಟಸ್ಥ, ಸರ್ವಸಮ್ಮತ ಮುಖವನ್ನು ಮುಂದಿಟ್ಟುಕೊಂಡು ಮೈತ್ರಿಗೆ ಮುಂದಾಗಬೇಕು ಎನ್ನುವ ಯೋಚನೆಯಿಂದಲೇ ಮೋದಿಗೆ ಪರ್ಯಾಯವಾಗಿ ನಾಗ್ಪುರದ ಲಿಂಕುಗಳು ಚೆನ್ನಾಗಿರುವ ನಿತಿನ್ ಗಡ್ಕರಿಯನ್ನು ಪೋಷಿಸಲಾಗುತ್ತಿದೆ. ಇದು ಈಗ ರಹಸ್ಯವಾಗೇನೂ ಉಳಿದಿಲ್ಲ.
‘ಮುಂದಿನ ಸಲ ಯಾರ ಹಂಗೂ ಇಲ್ಲದ ಸ್ಥಿರ ಸರ್ಕಾರ ರಚಿಸಲು ಸಾಧ್ಯವಾಗದೇ ಹೋದರೆ (ಮಿತ್ರ ಪಕ್ಷಗಳ ಮರ್ಜಿ ಇಲ್ಲದೆ) ಭಾರತದ ಘನತೆ ವಿಶ್ವದ ಮುಂದೆ ಕುಸಿದು ಬೀಳಲಿದೆ’ ಎಂಬರ್ಥದಲ್ಲಿ ಮೋದಿಯವರು ಇತ್ತೀಚೆಗೆ ಜನರನ್ನು ಅಪ್ರೋಚ್ ಮಾಡಿದ್ದು ಸಹಾ ಸಮ್ಮಿಶ್ರ ಸರ್ಕಾರ ರಚನೆಯಾದರೆ ತನಗೆ ಪ್ರಧಾನಿಯಾಗುವ ಅವಕಾಶ ಸಿಕ್ಕುವುದಿಲ್ಲ ಎಂಬ ಸ್ಪಷ್ಟ ಉದ್ದೇಶದಿಂದ. ಇತ್ತ ಮೋದಿಯವರು ಮಿತ್ರಪಕ್ಷಗಳ ಮುಲಾಜಿಲ್ಲದ ಸ್ವತಂತ್ರ ಬಿಜೆಪಿಯ ಸರ್ಕಾರಕ್ಕಾಗಿ ಜನರ ಬಳಿ ಬೇಡಿಕೆ ಇಡುತ್ತಿದ್ದರೆ, ಅತ್ತ ಅವರ ಆಪ್ತರಾದ ಅಮಿತ್ ಶಾ ತಾನಿರುವ ಹುದ್ದೆಯ ಕಾರಣಕ್ಕೆ ಅನಿವಾರ್ಯವಾಗಿ ತಾನೆ ಮುಂದೆ ನಿಂತು ಮಿತ್ರಪಕ್ಷಗಳ ಜೊತೆಗೆ ಹೊಂದಾಣಿಕೆಗೆ ಮುಂದಾಗಬೇಕಾಗಿದೆ.
ಶಿವಸೇನೆಗು ಸಹಾ ಪ್ರಧಾನಿ ಹುದ್ದೆಯಿಂದ ಮೋದಿಯವರನ್ನು ದೂರ ಇರಿಸುವ ಮತ್ತು ಉದ್ಧವ್ ಠಾಕ್ರೆ ಸೇರಿದಂತೆ ಬಹುಪಾಲು ಮಿತ್ರಪಕ್ಷಗಳ ಜೊತೆ ಒಳ್ಳೆಯ ಒಡನಾಟವಿರುವ ಗಡ್ಕರಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರಪೋಸ್ ಮಾಡಿರುವುದರಿಂದಲೇ ಹಳೆಯ ಸಿಟ್ಟನ್ನೆಲ್ಲ ಮರೆತು ಮೈತ್ರಿಗೆ ಸಮ್ಮತಿಸಿದೆ ಎಂದು ಶಿವಸೇನೆಯ ಒಳಮೂಲಗಳೇ ತಿಳಿಸುತ್ತಿವೆ. ಇಂತಹ ಒಂದು ಸ್ಪಷ್ಟ ನೀಲನಕ್ಷೆ ಇರುವ ಕಾರಣಕ್ಕೇ ಅವತ್ತು ಮೈತ್ರಿಯನ್ನು ಘೋಷಿಸುವ ಸಮಯದಲ್ಲಿ ಉದ್ದೇಶಪೂರ್ವಕವಾಗಿ ನಿತಿನ್ ಗಡ್ಕರಿಯವರ ಮುಖ ಕಾಣದಂತೆ ನೋಡಿಕೊಳ್ಳಲಾಯಿತು. ಈ ಮೈತ್ರಿ ಗಡ್ಕರಿಯವರ ಫಲಶ್ರುತಿ ಎಂಬುದು ಬಹಿರಂಗವಾಗಿಬಿಟ್ಟರೆ ಪಕ್ಷದೊಳಗಿನ ಲೆಕ್ಕಾಚಾರಗಳು ಬಯಲಾಗುವುದಲ್ಲದೆ, ಕಾರ್ಯಕರ್ತರಲ್ಲಿ ಗೊಂದಲ ಮೂಡುವ, ಆತ್ಮವಿಶ್ವಾಸ ಕುಗ್ಗುವ ಸಾಧ್ಯತೆ ಇರುತ್ತೆ ಎಂಬುದೇ ಅವತ್ತಿನ ಗಡ್ಕರಿ ಅನುಪಸ್ಥಿತಿಯ ಅಸಲೀ ಕಾರಣ. ಇಲ್ಲವಾಗಿದ್ದರೆ ತನ್ನದೇ ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಮಹತ್ವದ ಬೆಳವಣಿಗೆಗೆ ಅವರು ಗೈರು ಹಾಜರಾಗುವ ಕಾರಣವೇ ಇಲ್ಲ.
ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಇದು ಕೇವಲ ಮೈತ್ರಿ ಮಾತ್ರವಲ್ಲ. ಶಿವಸೇನೆಯ ಮುಂದೆ ಬಿಜೆಪಿ ಸಂಪೂರ್ಣವಾಗಿ ಮಂಡಿ ಊರಿದಂತ ಪರಿಸ್ಥಿತಿ. ಈಗಿನ ಹಂಚಿಕೆಯ ಪ್ರಕಾರ ಒಟ್ಟು ೪೮ ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 25 ಮತ್ತು ಶಿವಸೇನೆ 23 ಸ್ಥಾನಗಳಲ್ಲಿ ಸ್ಪರ್ಧಿಸುವುದೆಂದು ನಿಕ್ಕಿಯಾಗಿದೆ. ಶಿವಸೇನೆ ಭಾಳಾ ಠಾಕ್ರೆಯವರ ನೇತೃತ್ವದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೂ ಮೈತ್ರಿಯಲ್ಲಿ ಅದಕ್ಕೆ ಇಷ್ಟು ಸೀಟುಗಳು ಲಭಿಸಿದ್ದಿಲ್ಲ. ರಾಷ್ಟ್ರೀಯ ಪಕ್ಷವಾದ ಬಿಜೆಪಿ 26-28 ಸ್ಥಾನಗಳನ್ನಿಟ್ಟುಕೊಂಡರೆ ಶಿವಸೇನೆಗೆ 18-19 ಸ್ಥಾನಗಳಷ್ಟೇ ಸಿಗುತ್ತಿದ್ದವು. ಹಾಲಿ ಬಿಜೆಪಿ ಸಂಸದರೇ ಗೆದ್ದು ಪ್ರತಿನಿಧಿಸುತ್ತಿರುವ ಪಾಲ್ಗರ್ ಕ್ಷೇತ್ರವನ್ನೂ ಶಿವಸೇನೆ ಬಿಜೆಪಿಯಿಂದ ತನ್ನತ್ತ ಸೆಳೆದುಕೊಳ್ಳಲು ಯಶಸ್ವಿಯಾಗಿದ್ದು, ಇದರಿಂದ ಬೇಸರಗೊಂಡ ಸುಮಾರು 50 ಬಿಜೆಪಿ ಕಾರ್ಯಕರ್ತರು ಪಾರ್ಟಿಯಿಂದಲೇ ಹೊರನಡೆದಿದ್ದಾರೆ. ಕೇವಲ ಎಂಪಿ ಎಲೆಕ್ಷನ್‌ನಲ್ಲಿ ಮಾತ್ರವಲ್ಲ, ಅದು ಮುಗಿದು ಐದಾರು ತಿಂಗಳಿಗೆ ಎದುರಾಗುವ ವಿಧಾನಸಭಾ ಚುನಾವಣೆಗೂ ಸೀಟು ಹಂಚಿಕೆಗಳು ಅಂತಿಮವಾಗಿದ್ದು ಬಿಜೆಪಿ ಮತ್ತು ಶಿವಸೇನೆ ತಲಾ 144 ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿವೆ. ನೆನಪಿರಲಿ, ಕಳೆದ ಅಸೆಂಬ್ಲಿ ಎಲೆಕ್ಷನ್‌ನಲ್ಲಿ ಬಿಜೆಪಿ 122 ಸ್ಥಾನ ಗೆದ್ದಿದ್ದರೆ, ಶಿವಸೇನೆಯ 66 ಶಾಸಕರಷ್ಟೇ ಆಯ್ಕೆಯಾಗಿದ್ದರು. 122 ಸ್ಥಾನ ಗೆದ್ದ ಪಕ್ಷ ಈಗ 66 ಸ್ಥಾನ ಗೆದ್ದ ಪಕ್ಷಕ್ಕೆ ಸಮಪಾಲು ಕೊಡಲು ಸಮ್ಮತಿಸಿಯೆಂದರೆ ಬಿಜೆಪಿ ಮೈತ್ರಿಯಲ್ಲಿ ಸಂಪೂರ್ಣವಾಗಿ ಬಗ್ಗಿದೆ ಅಂತಲೇ ಅರ್ಥ. ಪಕ್ಕದ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಗಣನೀಯ ಸಂಖ್ಯೆಯಲ್ಲಿ ಸ್ಥಾನಗಳನ್ನು ಕಳೆದುಕೊಳ್ಳಲಿರುವುದು ಖಾತ್ರಿಯಾಗಿರುವುದರಿಂದಲೇ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಬಿಟ್ಟುಕೊಟ್ಟು ಉಳಿಸಿಕೊಳ್ಳುವ ರಕ್ಷಣಾತ್ಮಕ ಆಟ ಅನಿವಾರ್ಯವಾಗಿದೆ.
– ಗಿರೀಶ್ ತಾಳಿಕಟ್ಟೆ
Categories
Breaking News National Political

ಗಾಂಧಿ familyಗೆ ಪರಿವಾರವೇ ಪಕ್ಷ – ಪ್ರಿಯಾಂಕಾ ರಾಜಕೀಯ ಪ್ರವೇಶ ಕುರಿತು Modi ವ್ಯಂಗ್ಯ

ಕಾಂಗ್ರೆಸ್ ಪಾಲಿಗೆ ಪರಿವಾರವೇ ಪಕ್ಷ, ಆದರೆ ಬಿಜೆಪಿಗೆ ಪಕ್ಷವೇ ಪರಿವಾರ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಕ್ರಿಯ ರಾಜಕಾರಣಕ್ಕೆ ಪ್ರಿಯಾಂಕಾ ಗಾಂಧಿ ಆಗಮನಕ್ಕೆ ಪ್ರತಿಕ್ರಿಯಿಸಿದ್ದಾರೆ.

ಮಹಾರಾಷ್ಟ್ರದ ಬಿಜೆಪಿ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದ ವೇಳೆ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಪಾಳೆಯದಲ್ಲಿನ ಬೆಳವಣಿಗೆಯನ್ನು ಲೇವಡಿ ಮಾಡಿದರು.

ಬಿಜೆಪಿಯಲ್ಲಿ ಒಂದು ಕುಟುಂಬದ ಹಿತಾಸಕ್ತಿಯ ದೃಷ್ಟಿಯಿಂದ ಎಂದೂ, ಯಾವುದೇ ನಿರ್ಣಯ ಆಗುವುದಿಲ್ಲ. ನಮಗೆ ಪಕ್ಷವೇ ಪರಿವಾರವೇ ಹೊರತು ಪರಿವಾರವೇ ಪಕ್ಷವಲ್ಲ ಎಂದು ಮೋದಿ ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಉತ್ತರ ಪ್ರದೇಶ ರಾಜಕಾರಣಕ್ಕೆ ತಂದಿರುವುದರಿಂದಾಗಲೀ, ದೇಶದ ಒಟ್ಟಾರೆ ರಾಜಕಾರಣದ ಮೇಲಾಗಲೀ, ಯಾವುದೇ ಪರಿಣಾಮ ಇರುವುದಿಲ್ಲ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

ಪ್ರಿಯಾಂಕಾ ಎಂಟ್ರಿ ನಡೆದಿರುವುದು ಕಾಂಗ್ರೆಸ್‌ ವಂಶಾಡಳಿತೆ, ರಾಹುಲ್‌ ಗಾಂಧಿ ವೈಫ‌ಲ್ಯ ಮತು ರಾಬರ್ಟ್‌ ವಾದ್ರಾ ಅವರ ಶೀಘ್ರ ರಾಜಕೀಯ ಪ್ರವೇಶಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಟೀಕಿಸಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 46 ಸಂಸತ್‌ ಕ್ಷೇತ್ರಗಳಲ್ಲಿ ಪ್ರಚಾರಾಭಿಯಾನ ನಡೆಸಿದ್ದರು. ಆದರೆ ಕಾಂಗ್ರೆಸ್‌ ಈ ಪೈಕಿ ಗೆದ್ದದ್ದು ಎರಡು ಸೀಟಗಳನ್ನು ಮಾತ್ರ.

ಪ್ರಿಯಾಂಕಾ ಅವರನ್ನು ಉತ್ತರ ಪ್ರದೇಶದ ಕಾಂಗ್ರೆಸ್‌ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಿರುವುದು ವಂಶ ರಾಜಕಾರಣದಲ್ಲಿ ನಂಬಿಕೆ ಇರುವ ಪಕ್ಷದ ಪದಾಧಿಕಾರಿಗಳ ಮೇಲೆ ಮಾತ್ರವೇ ಪ್ರಭಾವ ಬೀರಬಹುದು ಎಂದುಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದರು.

Categories
Breaking News National Political

ಮೋದಿ ವಿರುದ್ಧ ಮಹಾಘಟಬಂಧನದ ಶಂಖನಾದ – ಕೋಲ್ಕತಾದಲ್ಲಿ 23 ಪಕ್ಷಗಳ ಬೃಹತ್ ಸಮಾವೇಶ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆದ 23 ಪಕ್ಷಗಳ ಬೃಹತ್ ಸಮಾವೇಶ ದೇಶದಲ್ಲಿ ರಾಜಕೀಯ ಧೃವೀಕರಣಕ್ಕೆ ಮುನ್ನುಡಿ ಬರೆದಿದೆ.

23 ಪಕ್ಷಗಳ 25 ಪ್ರಮುಖ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ ಡಿಎ ನಡುಕ ಹುಟ್ಟಿಸಿದೆ.

ಅಸಂಖ್ಯಾತ ಕಾರ್ಯಕರ್ತರು ಸೇರಿದ್ದ ಈ ಸಮಾವೇಶದಲ್ಲಿ ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಅಖಿಲೇಶ್ ಯಾದವ್, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ ಸೇರಿದಂತೆ ಮಹಾಘಟಬಂಧನದ ಬಹುತೇಕ ಎಲ್ಲಾ ನಾಯಕರು ಸೇರಿ `ಏಕಧ್ವನಿ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು.

ಮಮತಾ ಬ್ಯಾನರ್ಜಿ ಮಾತನಾಡಿ, ಮೋದಿ ಬಾಬು ಅವರೇ ನಿಮ್ಮ ಎಕ್ಸ್ ಪೈರಿ ಡೇಟ್ ಮುಗಿಯಿತು. ನಿಮಗೆ ತಿಳಿದಿರಬೇಕು, ಪ್ರತಿಯೊಂದು ಔಷಧಿಗೂ ಒಂದು ಎಕ್ಸ್ ಪೈರಿ ಡೇಟ್ ಇರುತ್ತದೆ. ಅದೇ ರೀತಿ ಬಿಜೆಪಿಗೂ ಎಕ್ಸ್ ಪೈರಿ ಡೇಟ್ ಮುಗಿಯಿತು ಎಂದು ಆಕ್ರೋಶದ ನುಡಿಗಳನ್ನಾಡುವ ಮೂಲಕ ನೇರವಾಗಿ ಬಿಜೆಪಿಯ ಆಡಳಿತಕ್ಕೆ ಕೊನೆಗಾಲ ಬಂದಿದೆ ಎಂದರು.

ಮಧ್ಯೆ ಮಧ್ಯೆ ಕೆಲವು ನಾಯಕರು ದೇಶದ ಮುಂದಿನ ಪ್ರಧಾನಿ ಯಾರಾಗಬೇಕೆಂದು ವೇದಿಕೆಯಿಂದ ಕೇಳುತ್ತಿದ್ದಂತೆಯೇ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಸೇರಿದ್ದ ಲಕ್ಷಕ್ಕೂ ಅಧಿಕ ತೃಣಮೂಲ ಕಾಂಗ್ರೆಸ್ ನ ಕಾರ್ಯಕರ್ತರು ಮಮತಾ ಬ್ಯಾನರ್ಜಿ ಎಂದು ಕೂಗಿ ಹೇಳುತ್ತಿದ್ದರು.

ಆದರೆ, ತಮ್ಮ ಭಾಷಣದಲ್ಲಿ ಇದನ್ನು ನಯವಾಗಿಯೇ ತಳ್ಳಿ ಹಾಕಿದ ಮಮತಾ ಪ್ರಧಾನಮಂತ್ರಿ ಯಾರಾಗಬೇಕೆಂಬುದನ್ನು ಏನಿದ್ದರೂ ಚುನಾವಣೆ ನಂತರ ನಿರ್ಧಾರ ಮಾಡಲಾಗುವುದು ಎಂದು ಕಾರ್ಯಕರ್ತರಿಗೆ ಹಿತವಾದ ಹೇಳಿದರು.

ಅರವಿಂದ ಕೇಜ್ರಿವಾಲ್, ಹಾರ್ದಿಕ್ ಪಟೇಲ್, ತೇಜಸ್ವಿ ಯಾದವ್, ಅಖಿಲೇಶ್ ಯಾದವ್, ಬಿಜೆಪಿಯ ಮಾಜಿ ನಾಯಕರಾದ ಅರುಣ್ ಶೌರಿ, ಶತೃಘ್ನಸಿನ್ಹಾ ಸೇರಿದಂತೆ ಹಲವಾರು ನಾಯಕರು ಬಿಜೆಪಿ ವಿರುದ್ಧ ಮಹಾಘಟಬಂಧನ ಏರ್ಪಟ್ಟಿದ್ದು, ಕೇಂದ್ರದಲ್ಲಿ ಪರ್ಯಾಯ ಸರ್ಕಾರ ರಚನೆಗೆ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು.

ಆದರೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಾತ್ರ, ಈ ಮಹಾಘಟಬಂಧನ ಚುನಾವಣೆಗೆ ಮುನ್ನ ಎರಡು ತಿಂಗಳ ಮೊದಲು ಆಗುವುದಕ್ಕಿಂತ ಇನ್ನು ಹಿಂದೆಯೇ ಆಗಿದ್ದರೆ ಚೆನ್ನಾಗಿತ್ತು. ಆದರೂ, ಎಲ್ಲಾ ನಾಯಕರು ಒಗ್ಗೂಡಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು.