‘ನಮ್ಮ ಹಲ್ಲು ಬೆಳೆಯುತ್ತಿಲ್ಲ, ಬೇಗ ಕ್ರಮ ತೆಗೆದುಕೊಳ್ಳಿ’ ಪ್ರಧಾನಿ ಮೋದಿಗೆ ಪುಟ್ಟ ಮಕ್ಕಳಿಂದ ಪತ್ರ!

‘ನಮ್ಮ ಹಲ್ಲು ಬೆಳೆಯುತ್ತಿಲ್ಲ, ಬಹುಬೇಗನೆ ಕ್ರಮಕ್ಕೆ ಆಗ್ರಹಿಸಿ’ ಪ್ರಧಾನಿ ಮೋದಿ ಹಾಗೂ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಇಬ್ಬರು ಪುಟ್ಟ ಮಕ್ಕಳು ಪತ್ರ ಬರೆದಿರುವುದು ಭಾರೀ ವೈರಲ್ ಆಗಿದೆ.

ಅಸ್ಸಾಂನ ಗುವಾಹಟಿಯ ಆರು ವರ್ಷದ ರಯೀಸಾ ರಾವ್ಜಾ ಅಹ್ಮದ್ ಮತ್ತು ಐದು ವರ್ಷದ ಆರ್ಯನ್ ಅಹ್ಮದ್ ತಮ್ಮ ಹಲ್ಲುಗಳು ಬೆಳೆಯದ ಕಾರಣ ತಮಗೆ ಇಷ್ಟವಾದ ಗಟ್ಟಿಯಾದ ಆಹಾರ ಅಗಿಯಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಹಾಗಾಗಿ ಅವರು ತಮ್ಮ ಸಮಸ್ಯೆಗಳನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಲು ನಿರ್ಧರಿಸಿದರು. ತಮ್ಮ ಕಳವಳವನ್ನು ವ್ಯಕ್ತಪಡಿಸಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರಿಗೆ ಪತ್ರ ಬರೆದಿದ್ದಾರೆ. ಈ ಇಬ್ಬರು ಮಕ್ಕಳ ಪತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು ಭಾರೀ ವೈರಲ್ ಆಗುತ್ತಿದೆ.

ಈ ಮಕ್ಕಳು ಬರೆದ ಪತ್ರವನ್ನು ಮಕ್ಕಳ ಚಿಕ್ಕಪ್ಪ ಮುಖ್ತಾರ್ ಅಹಮದ್ ಫೇಸ್‌ಬುಕ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಬ್ಬರು ಮಕ್ಕಳು ಬರೆದಿರುವ ಪತ್ರಗಳಲ್ಲಿ ಪಿಎಂ ಮೋದಿ ಮತ್ತು ಸಿಎಂ ಶರ್ಮಾ ಅವರ ಹೆಸರನ್ನು ನಮೋದಿಸಿಲಾಗಿದೆ. ಜೊತೆಗೆ ತಮ್ಮ ಸಮಸ್ಯೆಯನ್ನು ಬರೆಹರಿಸಲು ಮನವಿ ಮಾಡಿಕೊಳ್ಳಲಾಗಿದೆ.

“ದಯವಿಟ್ಟು ಅವರ ಹಲ್ಲುಗಳಿಗೆ ಅಗತ್ಯವಾದದ್ದನ್ನು ಮಾಡಿ ಏಕೆಂದರೆ ಅವರು ತಮ್ಮ ನೆಚ್ಚಿನ ಆಹಾರವನ್ನು ಅಗಿಯಲು ಸಾಧ್ಯವಿಲ್ಲ “ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಈ ಪೋಸ್ಟ್ ಅನ್ನು ಸೆಪ್ಟೆಂಬರ್ 25 ರಂದು ಹಂಚಿಕೊಳ್ಳಲಾಗಿದ್ದು ನೆಟ್ಟಿಗರ ಮೆಚ್ಚುಗೆ ಪಡೆದಿದೆ. ‘ಗಂಭೀರ’ ವಿಷಯದ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಲು ಮಕ್ಕಳ ವಿನಂತಿಸುವಿಕೆಯ ವಿಧಾನವು ಅನೇಕರನ್ನು ನಗುವಂತೆ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights