ದೇಶದಲ್ಲಿ 3.62 ಲಕ್ಷ ಹೊಸ ಕೋವಿಡ್ ಕೇಸ್ : 3.52 ಲಕ್ಷ ಸೋಂಕಿತರು ಚೇತರಿಕೆ!

ದೇಶದಲ್ಲಿ ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3.62 ಲಕ್ಷ ಹೊಸ ಕೋವಿಡ್ ಕೇಸ್ ದಾಖಲಾಗಿದ್ದು 3.52 ಲಕ್ಷ ಸೋಂಕಿತರು ಚೇತರಿಕೆ ಕಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ 3,62,727 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು 3,52,181 ದೈನಂದಿನ ಚೇತರಿಸಿಕೊಂಡ ಪ್ರಕರಣಗಳು ದಾಖಲಾಗಿವೆ  ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೈನಂದಿನ ಸಾವಿನ ಸಂಖ್ಯೆ ಸ್ವಲ್ಪ ಕುಸಿದಿದ್ದು 4,120 ರಷ್ಟು ದಾಖಲಾಗಿದೆ. ಪ್ರಸ್ತುತ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,37,03,665 ರಷ್ಟಿದ್ದು ಒಟ್ಟು ಸಾವಿನ ಸಂಖ್ಯೆ 2,58,317 ದಾಖಲಾಗಿದೆ. ಈವರೆಗೆ ಚೇತರಿಸಿಕೊಂಡ ಒಟ್ಟು ಜನರ ಸಂಖ್ಯೆ 1,97,34,823 ರಷ್ಟಿದ್ದು ದೇಶದಲ್ಲಿ ಪ್ರಸ್ತುತ 37,10,525 ಸಕ್ರಿಯ ಪ್ರಕರಣಗಳಿವೆ.

ಹೊಸ ಪ್ರಕರಣಗಳಲ್ಲಿ 46,781 ಪ್ರಕರಣಗಳು ಮಹಾರಾಷ್ಟ್ರದಿಂದ, ಕೇರಳದಲ್ಲಿ 43,529 ಪ್ರಕರಣಗಳು, ಕರ್ನಾಟಕದಲ್ಲಿ 39,998 ಪ್ರಕರಣಗಳು, ತಮಿಳುನಾಡಿನಲ್ಲಿ 30,355 ಪ್ರಕರಣಗಳು ಮತ್ತು ಆಂಧ್ರಪ್ರದೇಶದಲ್ಲಿ 21.452 ಪ್ರಕರಣಗಳನ್ನು ದಾಖಲಿಸಿದೆ.

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ದೈನಂದಿನ ಸಾವುಗಳು( 816) ಸಂಭವಿಸಿದ್ದು, ಕರ್ನಾಟಕದಲ್ಲಿ 516 ಸಾವುಗಳು ದಾಖಲಾಗಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights