ನಮ್ಮ ಮೆಟ್ರೋ ಬೇಗ ಬೇಗ ಹತ್ರೋ… : ಅವಸರಬೇಡ ಇಂದಿನಿಂದ 2 ಬೋಗಿ ಹೆಚ್ಚಳ

ಪ್ರತಿನಿತ್ಯ ಮೆಟ್ರೋದಲ್ಲಿ ಓಡಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನಲ್ಲೆಯಲ್ಲಿ ಹಸಿರು ಮಾರ್ಗದ ಮೆಟ್ರೋದಲ್ಲಿ ಮತ್ತೆರೆಡು ಬೋಗಿಗಳನ್ನ ಹೆಚ್ಚಿಸಲಾಗಿದೆ.

ಹೌದು… ಇಂದಿನಿಂದ ಹಸಿರು ಮಾರ್ಗದಲ್ಲಿ ಇನ್ನೂ ಎರಡು ಆರು ಬೋಗಿಯ ರೈಲು ಸೇರ್ಪಡೆ ಮಾಡಲಾಗಿದೆ. ಈಗಾಗಲೇ 10 ಬೋಗಿಗಳು ಇದ್ದು ಸದ್ಯ ಈ ಸಂಖ್ಯೆ 12 ಕ್ಕೆ ಏರಲಿದೆ.

ಭಾನುವಾರ ಹೊರತುಪಡಿಸಿ ಈ ಆರು ಬೋಗಿಗಳ ರೈಲುಗಳು ಪ್ರತಿದಿನ 88 ಸುತ್ತಿನ ಪ್ರಯಾಣ ಮಾಡಲಿವೆ. ಹಸಿರು ಮಾರ್ಗದಲ್ಲಿ ದಿನಕ್ಕೆ 1.30ರಿಂದ 1.60 ಲಕ್ಷ ಮಂದಿ ಪ್ರಯಣಿಸುತ್ತಾರೆ. ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದ ಎಲ್ಲಾ ಮೆಟ್ರೋ ರೈಲುಗಳನ್ನು ಆರು ಬೋಗಿಗಳ ರೈಲುಗಳಾಗಿ ಪರಿವರ್ತಿಸಲಾಗಿದ್ದು, ಹಸಿರು ಮತ್ತು ನೇರಳೆ ಮಾರ್ಗದಲ್ಲಿ ದಿನನಿತ್ಯ 4 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದಾರೆ.

ಒಟ್ಟು ಆರು ಬೋಗಿಗಳ 12 ಮೆಟ್ರೋ ರೈಲುಗಳು ಕಾರ್ಯಾಚರಣೆ ನಡೆಸಿದಂತಾಗಿದೆ. 2020ರ ಮಾರ್ಚ್ ವೇಳೆಗೆ ಆರು ಬೋಗಿಗಳ ಎಲ್ಲ ರೈಲುಗಳು ಹಸಿರು ಮಾರ್ಗದಲ್ಲಿ ಸಂಚರಿಸಲಿವೆ ಎಂದು ಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ರೈಲುಗಳಿಂದ ಹಸಿರು ಮಾರ್ಗದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ಆರು ಬೋಗಿಯ ರೈಲಿನಲ್ಲಿ ಮೊದಲ ಬೋಗಿ ಮಹಿಳೆ ಯರಿಗೆ ಮೀಸಲಾಗಿದೆ. ಹೀಗಾಗಿ, ಈ ಮಾರ್ಗದಲ್ಲಿ ಮಹಿಳಾ ಮೀಸಲು ಬೋಗಿಗಳ ಸಂಖ್ಯೆ ಹೆಚ್ಚಾಗಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights