ಫ್ಯಾಕ್ಟ್‌ಚೆಕ್: ಮೋದಿ Go Back ಎಂದು ಪ್ರತಿಭಟನೆ ನಡೆಸಿದ್ದು ನಿಜವೇ ?

ಮಹಿಳೆಯೊಬ್ಬರು  Go Back Modi. Again. Go Back Modi ಎಂದು ಬರೆದ ಪ್ಲೆಕಾರ್ಡ್ ಹಿಡಿದಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಫೋಟೊ ಇಂಡೋನೇಷಿಯಾದ ಬಾಲಿಯದ್ದು, ಶೃಂಗಸಭೆಯ ಸಮಯದಲ್ಲಿ ಈ ಯುವತಿ ಈ ರೀತಿ ಪ್ರತಿಭಟನೆ ಮಾಡಿದ್ದಾಳೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಫೋಟೋವನ್ನು ಹಂಚಿಕೊಳ್ಳಲಾಗಿದೆ.

ಕೆಲವು ಸಾಮಾಜಿಕ ಮಾಧ್ಯಮದ ಬಳಕೆದಾರರು ಇದೇ ಫೋಟೊವನ್ನು ಹಂಚಿಕೊಂಡಿದ್ದು ಈ ರೀತಿ ಕೆಂಪು ಸೂಟ್ ಸಾಹೇಬರನ್ನು ಸ್ವಾಗತಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ನವೆಂಬರ್ 15 ರಂದು ಚಿತ್ರೀಕರಿಸಿದ್ದು ಎಂದು ಹೇಳಿದ್ದಾರೆ.   ಪ್ರಧಾನಿ ಮೋದಿಯವರ ವಿರುದ್ಧದ ಈ ಪ್ರತಿಭಟನೆಯನ್ನು ಮಾಧ್ಯಮಗಳು ವರದಿ ಮಾಡಿಲ್ಲ ಎಂದು ಹಲವರು ಮಾಧ್ಯಮದವರನ್ನು ಟೀಕಿಸಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್‌ ಮಾಡಿದಾಗ, ಜುಲೈ 1 ರಂದು  ಮಹಿಳೆಯೊಬ್ಬರು ಪ್ಲೆಕಾರ್ಡ್ ಹಿಡಿದಿರುವ ಫೋಟೊ ಟ್ವಿಟರ್‌ನಲ್ಲಿ ಲಭ್ಯವಾಗಿದೆ. ಈ ಫೋಟೊದಲ್ಲಿ “Want to save American democracy? Read this sign and comply! #ElectDemocrats2022 up and down every ballot! ⁦@CasaDemocrats ಎಂದು ಬರೆದಿದೆ.

ವೈರಲ್ ಪೋಟೋವನ್ನು ಎಡಿಟ್ ಮಾಡಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಮೂಲ ಫೋಟೋದಲ್ಲಿ, ಇತ್ತೀಚೆಗೆ ಮುಕ್ತಾಯಗೊಂಡ ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡಿರುವ ಫಲಕವನ್ನು ಯುವತಿ ಹಿಡಿದು ನಿಂತಿದ್ದಾಳೆ.

ವೈರಲ್ ಆಗಿರುವ ಫೋಟೋ ಮತ್ತು ಮೂಲ ಫೋಟೋವನ್ನು ಹೋಲಿಕೆ ಮಾಡಿದಾಹ ಫಲಕದಲ್ಲಿರುವ ವಿಷಯಗಳನ್ನು ಹೊರತುಪಡಿಸಿ ಬಾಕಿ ಎಲ್ಲವೂ ಒಂದೇ ಆಗಿದೆ. ಹಳೆಯ ಫೋಟೊದಲ್ಲಿನ ಫಲಕದಲ್ಲಿ “Democrats and Independents must unite to vote out Republicans. Vote Blue this November. Paid for by concerned citizen ಎಂದು ಬರೆಯಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, “ಗೋ ಬ್ಯಾಕ್ ಮೋದಿ” ಎಂಬ ಫಲಕವನ್ನು ಹಿಡಿದಿರುವ ಮಹಿಳೆಯ ಫೋಟೋವನ್ನು  ಎಡಿಟ್ ಮಾಡಲಾಗಿದೆ. ಮತ್ತು ಈ ಫೋಟೋ G20 ಶೃಂಗಸಭೆ ನಡೆಯುವ ಮೊದಲೇ ಚಿತ್ರಿಕರಿಸಿರುವುದು ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನಿರ್ಮಲಾ ಸೀತಾರಾಮನ್ ಮಗಳು ಮಿಲಿಟರಿ ಅಧಿಕಾರಿಯೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights