ಫ್ಯಾಕ್ಟ್‌ಚೆಕ್: ಸ್ವಂತ ಮಗಳನ್ನೆ ಕೊಂದ ಅಪ್ಪ ! ಹೇಳಿದ್ದು ಮಾತ್ರ ಲವ್ ಜಿಹಾದ್‌

ಯಮುನಾ ಎಕ್ಸ್‌ಪ್ರೆಸ್‌ವೇ ನಲ್ಲಿ ಪತ್ತೆಯಾದ ಆಯುಷಿ ಎಂಬ ಯುವತಿಯ ಶವದ ಫೋಟೊಗಳನ್ನು ಹಲವಾರು ಬಳಕೆದಾರರು ಹಂಚಿಕೊಂಡಿದ್ದಾರೆ, ಆಕೆಯನ್ನು ಮುಸ್ಲಿಂ ವ್ಯಕ್ತಿಯೊಬ್ಬರು ಹತ್ಯೆ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ, ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಯುವತಿಯನ್ನು ಹತ್ಯೆ ಮಾಡಿ ಸೂಟ್‌ಕೇಸ್‌ನಲ್ಲಿ ಮುಚ್ಚಿ ಸಾಗಿಸಲು ಪ್ರಯತ್ನಿಸಿದ್ದಾನೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

 

View this post on Instagram

 

A post shared by Ramu Gupta (@ramukumar6513)

ಶಾಸನ ಸಭೆಯ ಸದಸ್ಯ ಓಂ ಕುಮಾರ್ ಮೃತದೇಹದ ಚಿತ್ರಗಳನ್ನು ಟ್ವೀಟ್ ಮಾಡಿ ಚಿತ್ರಗಳಲ್ಲಿ ಕಾಣುವ ಮಹಿಳೆ ‘ಲವ್ ಜಿಹಾದ್’ಗೆ ಬಲಿಯಾಗಿದ್ದಾಳೆ ಎಂದು ಹೇಳಿದ್ದಾರೆ. ಲವ್ ಜಿಹಾದ್‌ಗೆ ಬಲಿಯಾದ ಕುಟುಂಬದವರೆಲ್ಲರ ಸಹಕಾರದೊಂದಿಗೆ ದೊಡ್ಡ ಅಭಿಯಾನ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಅವರ ಭೀಕರ ಹತ್ಯೆಯನ್ನು ಪ್ರಸ್ತಾಪಿಸಿ,  ಆರೋಪಿ ಮುಸ್ಲಿಂ ಸಮುದಾಯದ ಅಫ್ತಾಬ್ ಅಮೀನ್ ಪೂನ್ವಾಲಾ , ಶ್ರದ್ಧಾ ವಾಕರ್ ಅವರ ಭೀಕರ ಹತ್ಯೆಯ ನೆನೆಪು ಮಾಸುವ ಮುನ್ನವೇ ಮತ್ತೊಂದು ಲವ್ ಜಿಹಾದ್ ಎಂದು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಹಿರಿಯ ಪತ್ರಕರ್ತೆ ಆಂಚಲ್ ಯಾದವ್ ಅದೇ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ ಮತ್ತು ಪ್ರತಿದಿನ ಹೊಸ ಅಫ್ತಾಬ್ ಹುಟ್ಟಿಕೊಳ್ಳುತ್ತಿದ್ದಾರೆ. ಶ್ರದ್ಧಾ ವಾಕರ್ ನಂತಹ ನತದೃಷ್ಟ ಹೆಣ್ಣುಮಕ್ಕಳು ಬಲಿಯಾಗುತ್ತಾರೆ ಎಂದು ಶ್ರದ್ದಾ ಹತ್ಯೆ ಪ್ರಕರಣದ ಉಲ್ಲೇಖ ಮಾಡಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಶ್ಯಾಮ್ ಶ್ರೀವಸ್ತವ್ ಎಂಬುವವರು “ಇದು ನೂರಕ್ಕೆ ನೂರು ರಷ್ಟು ಅಬ್ದುಲ್ ನಡೆಸಿರುವ ಕೃತ್ಯ ಎಂದು ಪ್ರತಿಪಾದಿಸಿ ಟ್ವೀಟ್ ಮಾಡಿದ್ದಾರೆ. ಅಬ್ದುಲ್ ಎಂಬ ಹೆಸರನ್ನು ಉಲ್ಲೇಖಿಸಿ ಮುಸ್ಲಿಂ ವ್ಯಕ್ತಿಯಿಂದ ಈ ಅಪರಾಧ ಎಸಗಲಾಗಿದೆ ಎಂದು “100% ದೃಢೀಕರಿಸಲಾಗಿದೆ ಎಂದು ಹೇಳಿದ್ದಾರೆ.

ಹಾಗಿದ್ದರೆ ಈ ಹತ್ಯೆಯನ್ನು ಮುಸ್ಮಿಂ ವ್ಯಕ್ತಿಯೇ ಮಾಡಿದ್ದಾನೆ ಎಂಬುದಕ್ಕೆ ಮತ್ತು ಲವ್ ಜಿಹಾದ್‌ ಪ್ರಕರಣ ಎಂಬುದಕ್ಕೆ ಏನಾದರೂ ಆಧಾರಗಳು ಇವೆಯೇ ಪೊಲೀಸ್ ಮೂಲಗಳು ಏನ್ಉ ಹೇಳುತ್ತವೆ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಯಮುನಾ ಎಕ್ಸ್‌ಪ್ರೆಸ್‌ವೇಯ ಸರ್ವಿಸ್ ರಸ್ತೆಯಲ್ಲಿ ಯುವತಿಯ ಶವವು ಒಂದು ದೊಡ್ಡ ಟ್ರಾಲಿ ಬ್ಯಾಗ್‌ನಲ್ಲಿ ತುಂಬಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನವೆಂಬರ್ 18 ರಂದು ಆಕೆಯ ಮೃತ ದೇಹ ಪತ್ತೆಯಾಗಿದ್ದು, ಯುವತಿಯ ವಯಸ್ಸು ಇಪ್ಪತ್ತರ ಆಸುಪಾಸು ಎಂದು ಪೊಲೀಸರು ಅಂದಾಜಿಸಿದ್ದಾರೆ. ಪೊಲೀಸರ ಪ್ರಕಾರ, ಆಕೆಯ ಮುಖದ ಮೇಲೆ ರಕ್ತ ಮತ್ತು ದೇಹದಾದ್ಯಂತ ಗಾಯದ ಗುರುತುಗಳಿವೆ ಎಂದು ಹೇಳಿದ್ದಾರೆ.

ಯುವತಿಯ ಗುರುತನ್ನು ಪತ್ತೆ ಹಚ್ಚುವ ಸಲುವಾಗಿ ಹಲವು ಪತ್ರಕರ್ತರು ಯುವತಿಯ ಮೃತ ದೇಹದ ಚಿತ್ರಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತ್ರಕರ್ತ ಸಚಿನ್ ಗುಪ್ತಾ ಪ್ರಕಾರ, ಆಕೆಯ ಎದೆಯ ಮೇಲೆ ಬುಲೆಟ್ ಗುರುತು ಇತ್ತು. ಎಂದು ಟ್ವೀಟ್ ಮಾಡಿದ್ದಾರೆ.

ನವೆಂಬರ್ 20 ರಂದು ಮಥುರಾ ಪೊಲೀಸರ ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು,  ಚಿತ್ರಗಳಲ್ಲಿನ ಯುವತಿಯನ್ನು ಆಕೆಯ ಸಹೋದರ ಮತ್ತು ತಾಯಿ ಗುರುತಿಸಿದ್ದಾರೆ ಎಂದು ಹೇಳಿದ್ದಾರೆ. ದೆಹಲಿಯ ಬದರ್‌ಪುರ ಪ್ರದೇಶದಲ್ಲಿ ಸಂತ್ರಸ್ತೆಯ ಕುಟುಂಬ ನೆಲೆಸಿತ್ತು ಎಂದಿದ್ದಾರೆ.

ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ, ಯುವತಿಯನ್ನು 21 ವರ್ಷದ ಆಯುಷಿ ಯಾದವ್ ಎಂದು ಆಕೆಯ ತಾಯಿ ಮತ್ತು ಸಹೋದರ ಗುರುತಿಸಿದ್ದಾರೆ ಎಂದು ಹೇಳುವ ಹಲವು ಲೇಖನಗಳನ್ನು ಕಂಡುಕೊಂಡಿದ್ದೇವೆ. ಆಕೆ ದೆಹಲಿಯ ಬದರ್‌ಪುರ ನಿವಾಸಿಯಾಗಿದ್ದು. ಆಕೆಯನ್ನು ತನ್ನ ಸ್ವಂತ ತಂದೆಯೇ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿವೆ.

ಇಂಡಿಯಾ ಟುಡೇ ಲೇಖನದ ಪ್ರಕಾರ,  ಆಯುಷಿ ತನ್ನ ತಂದೆ ನಿತೇಶ್ ಯಾದವ್‌ ಅನುಮತಿ ಇಲ್ಲದೆ ಹೊರಗೆ ಹೋಗಿದ್ದಳು. ಮತ್ತೆ ಅವಳು ಮನೆಗೆ ಹಿಂದಿರುಗಿದ್ದಾಳೆ. ಅನುಮತಿ ಇಲ್ಲದೆ ಮನೆಯಿಂದ ಹೊರಗೆ ಹೋಗಿದ್ದ ಕಾರಣಕ್ಕೆ ಆಕೆಯ ತಂದೆ ತನ್ನ ಸ್ವಂತ ಮಗಳಿಗೆ  ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ನಂತರ ಆಕೆಯ ದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ, ಟ್ರಾಲಿ ಬ್ಯಾಗ್‌ನಲ್ಲಿ ತುಂಬಿ ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಚೀಲವನ್ನು ಎಸೆದಿದ್ದಾನೆ. ಎಂದು ವರದಿಯಾಗಿದೆ.

ಆಜ್ ತಕ್ ಲೇಖನದ ಪ್ರಕಾರ, ಪೊಲೀಸರು ಕಳುಹಿಸಿದ ತಂಡಗಳು ಅವರು ಸ್ವೀಕರಿಸಿದ ವಿಳಾಸದಲ್ಲಿ ಹುಡುಗಿಯ ತಾಯಿ ಮತ್ತು ಸಹೋದರನನ್ನು ಮಾತ್ರ ಕಂಡುಬಂದಿದ್ದರು. ಕೊನೆಗೆ ಪೊಲೀಸರು ತಂದೆಯನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಆತನೇ ತನ್ನ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆದರೆ  ಪೊಲೀಸರ ಪ್ರಕಾರ, ಆಯುಷಿ ತನ್ನ ಮನೆಯವರಿಗೆ ಹೇಳದೆ ಬೇರೆ ಜಾತಿಯ ಕ್ಷತ್ರಪಾಲ್ ಗುರ್ಜರ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಆಕೆಯ ಪೋಷಕರು ಇದನ್ನು ಒಪ್ಪಲು ತಯಾರಿರಲಿಲ್ಲ ಆದರೆ ಆಯುಷಿ ತನ್ನ ಮದುವೆಯನ್ನು ಒಪ್ಪದ ಪೋಷಕರನ್ನು ಪ್ರತಿಭಟಿಸಿದ್ದಳು ಹಾಗಾಗಿ ಆಕೆಯ ತಂದೆ ಹತ್ಯೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಆಕೆ ಮುಸ್ಲಿಂ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆಯೇ ಎಂಬ ಪ್ರಶ್ನೆಗೆ, ಪೊಲೀಸರು ಅದನ್ನು ನಿರಾಕರಿಸಿದರು ಮತ್ತು “ಅವಳು ಬೇರೆ ಜಾತಿಯ ಕ್ಷತ್ರಪಾಲ್ ಗುರ್ಜರ್ ಅನ್ನು ಮದುವೆಯಾಗಿದ್ದಳು. ಇದಕ್ಕೆ ಪೋಷಕರ ಒಪ್ಪಿಗೆ ಇರಲಿಲ್ಲ. ಹಾಗಾಗಿ ಪೋಷಕರು ಆಯುಷಿ ಮೇಲೆ ಕೋಪಗೊಂಡು ಹತ್ಯೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಯಿಷಿ ಎಂಬ 21ವರ್ಷದ ಯುವತಿ ತನ್ನ ಮನೆಯವರ ವಿರುದ್ದವಾಗಿ ತಾನು ಪ್ರೀತಿಸಿದ ಅನ್ಯ ಜಾತಿಯ ಹುಡುಗನ್ನು ಮದುವೆಯಾದ ಕಾರಣಕ್ಕೆ ಆಕೆಯ ತಂದೆ ತನ್ನ ಸ್ವಂತ ಮಗಳನ್ನೆ ಶೂಟ್‌ ಮಾಡುವ ಮೂಲಕ ಹತ್ಯೆ ಮಾಡಿದ್ದಾನೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಹತ್ಯೆಯನ್ನು ಮುಸ್ಲಿಂ ವ್ಯಕ್ತಿ ನಡೆಸಿದ್ದಾನೆ ಎಂದು ಲವ್ ಜಿಹಾದ್‌ ಪ್ರಕರಣ ಎಂದು ತಪ್ಪಾಗಿ ಪ್ರತಿಪಾದಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಆಲ್ಟ್‌ ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಸಾಧುವೊಬ್ಬ -10 ° C ಚಳಿಯಲ್ಲಿ ಧ್ಯಾನ ಮಾಡುತ್ತಿರುವುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.