ಲಾಕ್ ಡೌನ್ ಬಗ್ಗೆ ಮೋದಿ ಮಾತು : ಮೇ 3ರವರೆಗೆ ಲಾಕ್ ಡೌನ್ ಕಂಟಿನ್ಯೂ

ಲಾಕ್ ಡೌನ್ ಬಗ್ಗೆ ಮೋದಿ ದೇಶವನ್ನುದ್ದೇಶಿಸಿ ಇಂದು ಮಾತುನಾಡಿದರು.

ಲಾಕ್ ಡೌನ್ ನಿಂದಾಗಿ ಕೆಲವರಿಗೆ ಓಡಾಡುಲು ಕಷ್ಟವಾಗುತ್ತಿದೆ. ಕೆಲವರು ಮನೆ , ಕುಟುಂಬಗಳಿಂದ ದೂರವಿದ್ದಾರೆ. ನಾನು ನಿಮಗೆಲ್ಲಾ ನಮಿಸುತ್ತೇನೆ. ಅಂಬೇಡ್ಕರ್ ಅವರಿಗೆ ದೇಶ ಅರ್ಪಿಸುತ್ತಿರುವ ನಿಜವಾದ ಶ್ರದ್ಧಾಂಜಲಿ ಇದು. ಭಾರತ ಸದಾ ಹಬ್ಬಗಳಿಂದ ನಳನಳಿಸುತ್ತಿತ್ತು. ಹಲವು ರಾಜ್ಯಗಳಲ್ಲಿ ನೂತನ

ದೇಶದ ಜನ ಸಂಯಮದಿಂದ ಮನೆಯಲ್ಲಿದ್ದಾರೆ. ಮನೆಯಲ್ಲೇ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಕೊರೊನಾ ತಡೆಯಲು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ನಮ್ಮಲ್ಲಿ 550 ಪ್ರಕರಣಗಳು ಇದ್ದಾಗಲೇ 21 ದಿನ ಲಾಕ್ ಡೌನ್ ಘೋಷಣೆ ಮಾಡಿದ್ವಿ. ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆ ಶುರುಮಾಡಿದ್ವಿ. ಶಂಕಿತರನ್ನು ಕ್ವಾರಂಟೈನ್ ನಲ್ಲಿ ಇಟ್ಟೆವು. ಸಮಸ್ಯೆ ಉಲ್ಬಣವಾಗುವುದನ್ನ ಕಾಯುತ್ತಾ ಕೂರಲಿಲ್ಲ. ಇದರಿಂದ ಬಹುದೊಡ್ಡ ಲಾಭವಾಗಿದೆ. ಆದರೆ ಕೇವಲ ಆರ್ಥಿಕ ದೃಷ್ಟಿಯಿಂದ ನೋಡಿದರೆ ದೊಡ್ಡ ಪರಿಹಾರ ತೇರಬೇಕಾಗುತ್ತದೆ. ಆದರೆ ಭಾರತದ ಜನರ ಪ್ರಾಣದ ಮುಂದೆ ಇದು ದೊಡ್ಡದಲ್ಲ.

ವೇಗವಾಗಿ ನಿರ್ಧಾರ ತೆಗೆದುಕೊಳ್ಳದೇ ಇದ್ದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತಿತ್ತು. ಈ ಬಗ್ಗೆ ನಿರಂತರ ಚರ್ಚೆ ಮಾಡಿದ್ವಿ. ಜನರ ಹಿತದೃಷ್ಟಿಯಿಂದ ಲಾಕ್ ಡೌನ್ ಮುಂದುವರೆಸುವ ನಿರ್ಧಾರ ಮಾಡಿದ್ದೇವೆ. ರಾಜ್ಯಗಳು ಜವಬ್ದಾರಿಯುತ ಕೆಲಸ ಮಾಡುತ್ತಿವೆ. ಆದರೂ ಕೊರೊನಾ ಹರಡುವುದು ಹೆಚ್ಛಾಗುತ್ತಲೇ ಇದೆ. ಮೇ 3 ರವರೆಗೆ ಇದೇ ರೀತಿ ಲಾಕ್ ಡೌನ್ ಮುಂದುವರೆಸಬೇಕಿದೆ ಎಂದು ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights