Cricket : 16 ವರ್ಷದ ಹಿಂದೆ ಈ ದಾಖಲೆ ಬರೆದಿದ್ದ ಕೆರಿಬಿಯನ್ ಸ್ಟಾರ್…..

ವೆಸ್ಟ್ ಇಂಡೀಸ್ ತಂಡದ ಹೆಸರು ಕೇಳಿದರೆ, ಅದೆಷ್ಟೋ ಘಟಾನುಘಟಿ ಸ್ಟಾರ್ ಆಟಗಾರರ ಹೆಸರುಗಳು ಹಾಗೂ ಪಟಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಅಂತಹ ದೈತ್ಯ ಆಟಗಾರರ ಸಾಲಿನಲ್ಲಿ ನಿಲ್ಲುವ ಖ್ಯಾತ ಆಟಗಾರ, ತನ್ನ ಎಡಗೈ ಬ್ಯಾಟಿಂಗ್ ಶೈಲಿಯ ಬ್ಯಾಟಿಂಗ್ ನಿಂದಲೇ ವಿಶ್ವದ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದ್ದ  ಬ್ರಿಯಾನ್ ಲಾರಾ. ತಮ್ಮ ಕಲಾತ್ಮಕ ಬ್ಯಾಟಿಂಗ್ ನಿಂದಲೇ ವಿಶ್ವ ಕ್ರಿಕೆಟ್ ಜಗತ್ತನ್ನು ತಮ್ಮತ್ತ ನೋಡುವಂತೆ ಮಾಡಿದ್ದರು. ಅಲ್ಲದೆ ಕಷ್ಠದ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದ್ದರು.

ಸರಿಯಾಗಿ 16 ವರ್ಷಗಳ ಹಿಂದೆ ವೆಸ್ಟ್‍ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ನಡೆದಿತ್ತು. ಈ ಸರಣಿಯ ಕೊನೆಯ ಪಂದ್ಯದ ಮೂರನೇ ದಿನದಂದು ವಿಂಡೀಸ್ ತಂಡದ ಬ್ರಿಯಾನ್ ಲಾರಾ ಟೆಸ್ಟ್‍ ಕ್ರಿಕೆಟ್ ನಲ್ಲಿ ರನ್ ಗಳನ್ನು ಗುಡ್ಡೆ ಹಾಕಿ ಅಬ್ಬರಿಸಿದ್ದರು. ಅಲ್ಲದೆ ಒಂದೇ ಇನ್ನಿಂಗ್ಸ್ ನಲ್ಲಿ ನಾಲ್ಕನೂರು ರನ್ ಗಳನ್ನು ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು. ಆಂಟಿಗುವಾದ ಸೆಂಟ್ ಜಾನ್ ಅಂಗಳದಲ್ಲಿ ನಡೆದ ಪಂದ್ಯಇನ್ನು ಅಭಿಮಾನಿಗಳ ಮನದಲ್ಲಿ ಹಸಿರಾಗಿದೆ.

ಇದೇ ಅಂಗಳದಲ್ಲಿ ಲಾರಾ 1994 ಇಂಗ್ಲೆಂಡ್ ವಿರುದ್ಧವೇ 375 ರನ್ ಸಿಡಿಸಿದ್ದರು. ಈ ದಾಖಲೆಯನ್ನು ಹೆಡನ್ ಒಂಬತ್ತು ವರ್ಷಗಳ ಬಳಿಕ ಮುರಿದಿದ್ದರು. ಇದೇ ದಾಖಲೆಯ ಮುಂದೆ ಲಾರಾ ಮತ್ತೆ ತಮ್ಮ ಹೆಸರು ಬರೆದು ಅಬ್ಬರಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights